/newsfirstlive-kannada/media/post_attachments/wp-content/uploads/2025/02/BALAKRISHANA_CAR_1.jpg)
ಟಾಲಿವುಡ್​ನ ಹಿರಿಯ ನಟ ಬಾಲಕೃಷ್ಣ ಅವರು ಈಗಲೂ ಸಿನಿಮಾಗಳಲ್ಲಿ ಚಿರ ಯುವಕನಂತೆ ನಟನೆ ಮಾಡುತ್ತಾರೆ. ಇವರ ಒಂದೊಂದು ಡೈಲಾಗ್ ಕೂಡ ಅದ್ಭುತವಾಗಿ ಇರುತ್ತವೆ. ಅಲ್ಲದೇ ಇವರ ಫೈಟಿಂಗ್, ಡೈಲಾಗ್​ಗೆ ಪ್ರತ್ಯೇಕ ಅಭಿಮಾನಿಗಳ ಫಾಲೋ ಕೂಡ ಇದೆ. ಸದ್ಯ ಇದೀಗ ನಟ ಬಾಲಕೃಷ್ಣ ಅವರು ಅಚ್ಚರಿ ರೀತಿಯಲ್ಲಿ ಫೇಮಸ್​ ಮ್ಯೂಸಿಕ್​ ಡೈರೆಕ್ಟರ್​ಗೆ ದುಬಾರಿ ಕಾರೊಂದನ್ನು ಬಹುಮಾನವಾಗಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/BALAKRISHANA_CAR_2.jpg)
ಬಾಲಕೃಷ್ಣ ಅವರು ಕೋಪದಿಂದಲೇ ಎಲ್ಲಿ ಹೋದರೂ ತೋರಿಸಿಕೊಳ್ಳುವುದು ಹೆಚ್ಚು. ಏನೇ ಇದ್ದರೂ ವೇದಿಕೆ ಮೇಲೆಯೇ ನೇರಾ ನೇರ ಹೇಳಿ ಬಿಡುತ್ತಾರೆ. ಹೀಗಾಗಿಯೇ ಇವರ ಮುಂದೆ ನಿರ್ದೇಶಕರು, ನಟರು, ಪೋಷಕ ನಟರು ಮಾತನಾಡಲು ಕೆಲವೊಮ್ಮೆ ಹಿಂದೇಟು ಹಾಕುತ್ತಾರೆ. ಬಾಲಕೃಷ್ಣ ಅವರು ಕಾರೊಂದನ್ನು ಗಿಫ್ಟ್​ ಆಗಿ ನೀಡಿದ್ದಾರೆ ಎಂದರೆ ಜನರು ನಂಬುವುದು ಕೊಂಚ ಕಡಿಮೆ ಆದರೂ, ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದ ದುಬಾರಿ ಕಾರನ್ನು ನೀಡಿರುವುದಂತೂ ಸತ್ಯ.
ತೆಲುಗಿನ ಫೇಮಸ್​ ಮ್ಯೂಸಿಕ್​ ಡೈರೆಕ್ಟರ್ ತಮನ್ ಎಸ್​ ಅವರಿಗೆ ಐಷಾರಾಮಿ ಹೊಚ್ಚ ಹೊಸ ಪೋರ್ಷೆ ಕಾರನ್ನು ಬಾಲಕೃಷ್ಣ ಅವರು ನೀಡಿದ್ದಾರೆ. ಅದು ಬೇರೆ ರಿಜಿಸ್ಟ್ರೇಷನ್ ಮಾಡಿ, ತಮ್ಮ ಕೈಯಾರೆ ತಮನ್ ಅವರಿಗೆ ಕಾರಿನ ಕೀಯನ್ನು ನೀಡಿದ್ದಾರೆ. ಇದು ಅಲ್ಲದೇ ತಮನ್ ಎಸ್ ಅವರ ಪೂರ್ಣ ಹೆಸರು ಘಂಟಸಾಲ ಸಾಯಿ ಶ್ರೀನಿವಾಸ್ ಶಿವಕುಮಾರ್ ಎಂದು ಇದೆ. ಆದರೆ ಎಲ್ಲರಿಗೂ ತಮನ್ ಎನ್ನುವ ಹೆಸರಿನಿಂದಲೇ ಪರಿಚಯ. ಈ ಹೆಸರನ್ನು ನಂದಮೂರಿ ತಮನ್ ಎಂದು ಬಾಲಕೃಷ್ಣ ಮರು ನಾಮಕರಣ ಮಾಡಿ ಸಪ್ರೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ದೇವ್ರಾಣೆಗೂ ಅಪ್ಪ ಡಾಲಿ ಮದುವೆಗೆ ಬಂದಿದ್ದು ಗೊತ್ತಿಲ್ಲ- ಸಚಿವ ಜಮೀರ್ ಅವರ ಮಗ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2025/02/BALAKRISHANA_CAR.jpg)
ಬಾಲಕೃಷ್ಣ ಹಾಗೂ ತಮನ್ ಎಸ್ ಅವರ ಕಾಂಬೋದಲ್ಲಿ ಇತ್ತೀಚೆಗೆ ರಿಲೀಸ್ ಆದಂತ ಎಲ್ಲ ಸಿನಿಮಾಗಳಲ್ಲಿ ಹಾಡುಗಳು ತುಂಬಾ ಸೊಗಸಾಗಿ ಮೂಡಿ ಬಂದಿವೆ. ಅಲ್ಲದೇ ಈ ಹಾಡುಗಳಿಗೆಲ್ಲಾ ತಮನ್ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಖಂಢ, ವೀರಸಿಂಹ ರೆಡ್ಡಿ, ಭಗವಂತ ಕೇಸರಿ, ಡಾಕು ಮಹಾರಾಜನಂತಹ ಬ್ಲಾಕ್​ ಬಾಸ್ಟರ್ ಹಿಟ್​ ಮೂವಿಗಳಲ್ಲಿ ತಮನ್ ಸಂಗೀತದ ಕೈಚಳಕ ವಿದೆ. ಇದನ್ನೆಲ್ಲಾ ಮೆಚ್ಚಿಕೊಂಡ ಬಾಲಕೃಷ್ಣ ಅವರು ದುಬಾರಿ ಕಾರನ್ನು ನೀಡಿದ್ದಾರೆ. ಇದರ ಜೊತೆಗೆ ಈಗ ಅಖಂಢ ಸಿನಿಮಾದ ಭಾಗ- 2 ಬರುತ್ತಿದೆ. ಇದರಲ್ಲಿಯೂ ತಮನ್ ಮ್ಯೂಸಿಕ್​ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us