newsfirstkannada.com

IIT ಬಾಂಬೆಗೆ 315 ಕೋಟಿ ರೂಪಾಯಿ ದೇಣಿಗೆ ಕೊಟ್ಟ ನಂದನ್ ನಿಲೇಕಣಿ; ಉದ್ದೇಶವೇನು?

Share :

Published June 20, 2023 at 2:54pm

Update June 20, 2023 at 2:57pm

    ಐಐಟಿ ಬಾಂಬೆಗೆ ಒಟ್ಟು 400 ಕೋಟಿ ರೂಪಾಯಿ ಕೊಡುಗೆ​

    ತಾವು ಓದಿದ ಕಾಲೇಜಿಗೆ ದೇಣಿಗೆ ಕೊಟ್ಟ ನಂದನ್ ನಿಲೇಕಣಿ

    50 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಕೋಟಿ ಮೊತ್ತದ ದೇಣಿಗೆ

ಇನ್ಫೋಸಿಸ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾದ ನಂದನ್ ನಿಲೇಕಣಿ ತಾವು ಓದಿದ ಐಐಟಿ ಬಾಂಬೆಗೆ 315 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. 1973 ರಲ್ಲಿ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಗೆ ಸೇರ್ಪಡೆ ಆಗಿದ್ದ ನಂದನ್ ನಿಲೇಕಣಿ 50 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಕೋಟಿ ಮೊತ್ತದಲ್ಲಿ ದೇಣಿಗೆ ನೀಡಿದ್ದಾರೆ.

ಟೆಕ್ ಸ್ಟಾರ್ಟ್​ಅಪ್

ಐಐಟಿ ಬಾಂಬೆಯಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ಇಂಜಿನಿಯರಿಂಗ್, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಲು ನಂದನ್ ನಿಲೇಕಣಿ 315 ಕೋಟಿ ದೇಣಿಗೆ ನೀಡಿದ್ದಾರೆ. ಟೆಕ್ ಸ್ಟಾರ್ಟ್​ಅಪ್ ಬೆಳೆಸಲು ವರ್ಗಣಿ ನೀಡಿದ್ದಾರೆ.

ಐಐಟಿ ಬಾಂಬೆಗೆ 400 ಕೋಟಿ ವರ್ಗಣಿ 

ನಂದನ್ ನಿಲೇಕಣಿ ಇದಕ್ಕೂ ಮೊದಲು ಐಐಟಿ ಬಾಂಬೆಗೆ 85 ಕೋಟಿ ರೂಪಾಯಿ ನೀಡಿದ್ದರು. ಒಟ್ಟಾರೆ ಇದುವರೆಗೂ ಐಐಟಿ ಬಾಂಬೆಗೆ 400 ಕೋಟಿ ರೂಪಾಯಿ ನೀಡಿದ್ದಾರೆ. ಈ ದೇಣಿಗೆ ಹಣಕಾಸು ಕೊಡುಗೆಗಿಂತ ಹೆಚ್ಚಿನದು, ನನಗೆ ಹೆಚ್ಚಿನದ್ದನ್ನು ನೀಡಿದ ಸ್ಥಳಕ್ಕೆ ನೀಡುತ್ತಿರುವ ಗೌರವಾರ್ಪಣೆ. ನಮ್ಮ ನಾಳೆಯ ವಿಶ್ವವನ್ನು ರೂಪಿಸುವ ವಿದ್ಯಾರ್ಥಿಗಳಿಗೆ ನಮ್ಮ ಬದ್ದತೆ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IIT ಬಾಂಬೆಗೆ 315 ಕೋಟಿ ರೂಪಾಯಿ ದೇಣಿಗೆ ಕೊಟ್ಟ ನಂದನ್ ನಿಲೇಕಣಿ; ಉದ್ದೇಶವೇನು?

https://newsfirstlive.com/wp-content/uploads/2023/06/Nandan-Nilekani.jpg

Load More