Advertisment

ನಂದಿನಿ ಹಾಲು ಮತ್ತಷ್ಟು ದುಬಾರಿ..! ನಿನ್ನೆಯ ಸಭೆಯಲ್ಲಿ ಎಷ್ಟು ರೂಪಾಯಿ ಏರಿಕೆಗೆ ನಿರ್ಧಾರ ಆಗಿದೆ..?

author-image
Ganesh
Updated On
ಹೊಸ ವರ್ಷಕ್ಕೆ ಸರ್ಕಾರದಿಂದ ಬಿಗ್​ ಶಾಕ್​​; ನಂದಿನಿ ಹಾಲಿನ ದರ ಏರಿಕೆ?
Advertisment
  • ನಂದಿನಿ ಹಾಲು ಪ್ರಿಯರಿಗೆ ಬಿಗ್ ಶಾಕ್.. ದರ ಏರಿಕೆ ಸುಳಿವು!
  • ನಾಡಿದ್ದು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ
  • ದರ ಏರಿಕೆ ತೀರ್ಮಾನ ಆಗಿದೆ ಎಂದಿರುವ ಭೀಮಾ ನಾಯ್ಕ್

ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿನ ದರ ಹೆಚ್ಚಿಸಿ ವರ್ಷ ಕಳೆದೇ ಇಲ್ಲ. ಆಗ್ಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು.. ಕೆಎಂಎಫ್ ಅಧಿಕಾರಿಗಳ ಜೊತೆ​ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಮಿಲ್ಕ್​ ರೇಟ್​ ಹೆಚ್ಚಳಕ್ಕೆ ಸಿಎಂ ರೆಡ್ ಸಿಗ್ನಲ್​ ಕೊಟ್ಟಿದ್ದರು. ಆದ್ರೆ ಸಭೆ ಬಳಿಕ ಮಾತ್ನಾಡಿರೋ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ದರ ಏರಿಕೆಯ ಶಾಕ್ ನೀಡಿದ್ದಾರೆ.

Advertisment

ಇದನ್ನೂ ಓದಿ: ವಿಜಯಪುರ ಪಾಲಿಕೆ ಬಿಜೆಪಿ ತೆಕ್ಕೆಗಿದ್ದರೂ ಯತ್ನಾಳ್​​ಗೆ ಹಿನ್ನಡೆ; ಭಾರೀ ಹೈಡ್ರಾಮಾ, 35 ಸದಸ್ಯರು ಅನರ್ಹ..!

publive-image

ಕೆಎಂಎಫ್​ ಅಧ್ಯಕ್ಷರಿಂದ ಗ್ರೀನ್​ಸಿಗ್ನಲ್!
ರೈತರು ಹಾಗೂ ಹಾಲು ಒಕ್ಕೂಟಗಳ ಒತ್ತಡದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಯ ಪ್ರಸ್ತಾಪ ಕೇಳಿಬಂದಿತ್ತು. ಅಧಿವೇಶನ ಮುಗೀತಿದ್ದಂತೆ ದರ ಏರಿಕೆ ಆಗಲಿದೆ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು. ಹೀಗಾಗಿ ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದರ ಹೆಚ್ಚಳಕ್ಕೆ ರೆಡ್ ಸಿಗ್ನಲ್ ನೀಡಿದ್ದರು. ಡೋಂಟ್​ವರಿ, ಹಾಲಿನ ರೇಟ್ ಜಾಸ್ತಿಯಾಗಿಲ್ಲ ಎಂದಿದ್ರು. ಆದ್ರೆ ಸಭೆ ಬಳಿಕ ಮಾತ್ನಾಡಿರೋ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಹಾಲಿನ ದರ ಹೆಚ್ಚಳ ಮಾಡುವ ಶಾಕ್ ನೀಡಿದ್ದಾರೆ. ದರ ಹೆಚ್ಚಳದ ಸಾಧಕ,‌ ಭಾದಕಗಳ ಬಗ್ಗೆ ಚರ್ಚೆ ನಡೆದಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದಾರೆ. ಎಷ್ಟು ದರ ಅಂತ ಇನ್ನೂ ಚರ್ಚೆ ಆಗಿಲ್ಲ ಅನ್ನೋ ಮೂಲಕ ರಾಜ್ಯದ ಜನತೆಗೆ ಒಂದ್ರೀತಿ ಶಾಕ್ ಕೊಟ್ಟಿದ್ದಾರೆ.

ಹಾಲಿನ ದರ ಹೆಚ್ಚು ಮಾಡಬೇಕು ಅನ್ನೋದ್ರ ಬಗ್ಗೆ ಚರ್ಚೆ ಆಗಿದೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಅಲ್ಲಿ ನಿರ್ಧಾರ ಆಗಲಿದೆ. ಮುಖ್ಯಮಂತ್ರಿಗಳೇ ಹಾಲಿನ ಬೆಲೆ ಏರಿಕೆ ಬಗ್ಗೆ ತಿಳಿಸುತ್ತಾರೆ-ಭೀಮಾನಾಯ್ಕ್, ಕೆಎಂಎಫ್​ ಅಧ್ಯಕ್ಷ

Advertisment

ಇದನ್ನೂ ಓದಿ: ಮೊಟ್ಟೆ ತಿನ್ನುವುದರಿಂದ ಆಗೋ 10 ಲಾಭಗಳೇನು? ಸಾರ್ವಜನಿಕರು ಓದಲೇಬೇಕಾದ ಸ್ಟೋರಿ!

publive-image

ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಪೈಕಿ ಫೆಬ್ರವರಿ ಅಂತ್ಯಕ್ಕೆ ಒಟ್ಟು 3 ಒಕ್ಕೂಟಗಳು ನಷ್ಟದಲ್ಲಿವೆ ಎನ್ನಲಾಗಿದೆ. ಹೀಗಾಗಿ ಇತ್ತೀಚೆಗಷ್ಟೇ ಏರಿಕೆಯಾಗಿದ್ದ ಹಾಲಿನ ದರ ಮತ್ತೆ ಏರಿಕೆಯಾಗುವ ಲಕ್ಷಣ ಗೋಚರಿಸ್ತಿದೆ. ಮುಂದಿನ ಸಂಪುಟ ಸಭೆ ಬಳಿಕ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಾಗುವ ಸಾಧ್ಯತೆ ಇದ್ದು ಮೂಲಗಳ ಪ್ರಕಾರ ಕರ್ನಾಟಕ ಹಾಲು ಮಹಾ ಮಂಡಳ ಪ್ರತಿ ಲೀಟರ್ ಹಾಲಿಗೆ 5 ರೂ. ಏರಿಕೆ ಮಾಡಬೇಕು ಅಂತ ಪ್ರಸ್ತಾವನೆ ಸಲ್ಲಿಸಿದೆ.

ಒಟ್ಟಾರೆ, ಹಾಲಿನ ದರ ಏರಿಕೆ ಆಗಲ್ಲ ಅಂತ ಸಿಎಂ ಹೇಳಿದ್ರೆ ಕೆಎಂಎಫ್​ ಅಧ್ಯಕ್ಷ ದರ ಏರಿಕೆ ಆಗಲಿದೆ ಅಂತಿದ್ದು ಗೊಂದಲ ಮೂಡಿದೆ. ಒಟ್ಟಾರೆ, ಸಾರಿಗೆ ಬಸ್ ದರ, ವಿದ್ಯುತ್, ಮೆಟ್ರೋ ಪ್ರಯಾಣ ದರಗಳು ಏರಿಕೆಯಾಗಿದ್ದು, ಹಾಲಿನ ದರ ಏರಿಕೆಯಾದ್ರೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

Advertisment

ಇದನ್ನೂ ಓದಿ: ರಜತ್, ವಿನಯ್ ರಾತ್ರೋರಾತ್ರಿ ರಿಲೀಸ್.. ಪೊಲೀಸ್ ಠಾಣೆಯಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment