/newsfirstlive-kannada/media/post_attachments/wp-content/uploads/2025/03/NANDINI_MILK.jpg)
ಬೆಂಗಳೂರು: ಸಿಟಿ ಜನರಿಗೆ ಹಾಲು ಕೂಡ ಅಮೃತದ ಹನಿಯಾಗುವ ಸಾಧ್ಯತೆ ಇದೆ. ಏಕೆಂದರೆ ಕಳೆದ ವರ್ಷವೇ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಇದೀಗ ಮತ್ತೆ ಬೆಲೆ ಏರಿಕೆ ಮಾಡಲು ಹೊರಟಿದೆ. ಈ ಸಲ ಸರ್ಕಾರ ಒಂದು ರೂಪಾಯಿ, ಎರಡು ರೂಪಾಯಿ ಹೆಚ್ಚಳ ಮಾಡುತ್ತಿಲ್ಲ. ಏರಿಕೆ ಮಾಡುತ್ತಿರುವ ದರ ಕೇಳಿದ್ರೆ ನಿಮಗೆ ಶಾಕ್ ಅಂತೂ ಪಕ್ಕಾ ಆಗುತ್ತದೆ.
ಈ ಬಾರಿ ರಾಜ್ಯ ಸರ್ಕಾರ ಜನರಿಗೆ ಬಿಗ್ ಶಾಕ್ ಕೊಡಲು ಮುಂದಾಗಿದ್ದು ಒಂದೇ ಬಾರಿಗೆ ಲೀಟರ್ಗೆ 5 ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸದ್ಯ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಬಳಿಕ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ವರ್ಷ ಪ್ರತಿ ಲೀಟರ್ಗೆ 2 ರೂಪಾಯಿ ಏರಿಸಿದ್ದ ಕೆಎಂಎಫ್, ಈ ಸಲ ಗ್ರಾಹಕರು ಹಾಲನ್ನೇ ಮುಟ್ಟಬಾರದು ಆ ರೀತಿಯಲ್ಲಿ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ.
ಇದನ್ನೂ ಓದಿ:ಬೈಕ್ ಪಾರ್ಕಿಂಗ್ ಗಲಾಟೆ; ವಿಜ್ಞಾನಿಯ ಉಸಿರನ್ನೇ ನಿಲ್ಲಿಸಿದ ಖದೀಮ.. ಅಸಲಿಗೆ ಏನಾಯಿತು?
ಹಾಲಿನ ದರ ಏರಿಕೆ ಮಾಡುವಂತೆ ಈಗಾಗಲೇ ರೈತರು ಕೆಎಂಎಫ್ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಹಾಲು ಒಕ್ಕೂಟಗಳಿಂದ ನಂದಿನಿ ಹಾಲಿನ ದರ ಏರಿಸುವಂತೆ ಒತ್ತಡ ತಂದಿದ್ದಾರೆ. ರೈತರು, ಹಾಲು ಒಕ್ಕೂಟ, ಒತ್ತಡ ಹಾಕುತ್ತಿದ್ದರಿಂದ ಇದಕ್ಕೆ ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಕೆಎಂಎಫ್ ಮನವಿ ಮಾಡಿದೆ.
ದರ ಏರಿಕೆಗೆ ಕಾರಣಗಳು, ಸಾಧಕ ಬಾಧಕಗಳ ಬಗ್ಗೆ ಹಾಲು ಒಕ್ಕೂಟದ ಜೊತೆ ಕೆಎಂಎಫ್ ಸಭೆ ನಡೆಸಿದೆ. ಇದೀಗ ದರ ಪರಿಷ್ಕರಣೆ ಮಾಡಲು ಸಿಎಂ ಸಿದ್ದರಾಮಯ್ಯ ಅವರ ಅನುಮತಿಗಾಗಿ ಕಾಯಿತ್ತಿದೆ. ಒಂದು ವೇಳೆ ಸಿಎಂ ಅನುಮತಿ ಕೊಟ್ಟರೇ ತಕ್ಷಣವೇ ಹಾಲಿನ ದರ ಏರಿಕೆ ಆಗಲಿದೆ. ಕಳೆದ ವರ್ಷ 2024ರ ಜೂನ್ನಲ್ಲಿ ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ