ಹಾಲಿನ ದರ ಮತ್ತಷ್ಟು ಏರಿಕೆ ಆತಂಕ; KMF ಎಷ್ಟು ರೂಪಾಯಿ ಹೆಚ್ಚಿಸಲು ಹೊರಟಿದೆ ಗೊತ್ತಾ?

author-image
Ganesh
Updated On
ನಂದಿನಿ ಬ್ರಾಂಡ್​​ಗೆ ಎದುರಾಯ್ತು ಸಂಕಷ್ಟ.. ಏಳಿಗೆ ಸಹಿಸದ ಡೀಲರ್​​ಗಳಿಂದ ಕೊಕ್ಕೆ..!
Advertisment
  • ರಾಜ್ಯದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ತಲೆಬಿಸಿ
  • ಸರ್ಕಾರದ ಮುಂದಿಟ್ಟ ಪ್ರಸ್ತಾವನೆ ಎಷ್ಟು ಗೊತ್ತಾ..?
  • ರೈತರು, ಹಾಲು ಒಕ್ಕೂಟಗಳಿಂದ ಬೆಲೆ ಏರಿಕೆಗೆ ಆಗ್ರಹ

ಬೆಂಗಳೂರು: ರಾಜ್ಯದ ಜನರಿಗೆ ಮತ್ತೆ ನಂದಿನಿ ಹಾಲಿನ‌ (Nandini Milk) ದರ ಏರಿಕೆ ಆಗುವ ಆತಂಕ ಎದುರಾಗಿದೆ. ಶೀಘ್ರದಲ್ಲೇ ಹಾಲಿನ ದರದಲ್ಲಿ ಪರಿಷ್ಕರಣೆ ಮಾಡಿಸಲು ಕೆಎಂಎಫ್ (KMF)​ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಪ್ರತಿ ಲೀಟರ್​ 5 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಸಿಎಂ ಅಂಗಳದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಚೆಂಡು ಇದೆ. ಮುಖ್ಯಮಂತ್ರಿಗಳ ಅನುಮತಿಗಾಗಿ ಕೆಎಂಎಫ್ ಆಡಳಿತ ಮಂಡಳಿ ಕಾಯುತ್ತಿದೆ. ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಹಾಲಿನ ದರ ಏರಿಕೆ ಆಗಲಿದೆ.

ಇದನ್ನೂ ಓದಿ: BREAKING : ಲ್ಯಾಂಡಿಂಗ್​ ವೇಳೆ ಮತ್ತೊಂದು ವಿಮಾನ ಪತನ, 80 ಪ್ರಯಾಣಿಕರಿದ್ದರು

ಕೆಲವು ದಿನಗಳ ಹಿಂದೆ ಹಾಲು ದರ ಏರಿಸುವಂತೆ ಕೆಎಂಎಫ್ ಮುಂದೆ ರೈತರು ಪ್ರತಿಭಟನೆ ಮಾಡಿದ್ದರು. ಜತೆಗೆ ಹಾಲು ಒಕ್ಕೂಟಗಳಿಂದ ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್​ಗೆ ಒತ್ತಡ ಇದೆ. ರೈತರು ಮತ್ತು ಹಾಲು ಒಕ್ಕೂಟಗಳಿಂದ ದರ ಏರಿಸುವ ಬಗ್ಗೆ ಆಗ್ರಹ ಹಿನ್ನೆಲೆಯಲ್ಲಿ ಕೆಎಂಎಫ್​ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದೆ.

ರೈತರ ಒತ್ತಾಯ ಯಾಕೆ..?

ಜಾನುವಾರುಗಳಿಗೆ ನೀಡುತ್ತಿರುವ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಮೇವು, ಲೇಬರ್, ವಿದ್ಯುತ್ ಸೇರಿ ಇತರೆ ಖರ್ಚುಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಹಾಲಿನ ದರ ಏರಿಕೆ ಅನಿವಾರ್ಯ. ಇಲ್ಲದಿದ್ದರೆ ಒಕ್ಕೂಟಗಳು ರೈತ ಉತ್ಪಾದಕರಿಗೆ ಉತ್ಪಾದನೆಗೆ ತಕ್ಕಂತೆ ಹಣ ನೀಡಲು ಸಾಧ್ಯವಿಲ್ಲ ಎಂಬುವುದು ಒಕ್ಕೂಟಗಳ ಅಭಿಪ್ರಾಯ. ಸದ್ಯ ಹಾಲಿನ ದರವನ್ನು ಲೀಟರ್​ಗೆ ಐದು ರೂಪಾಯಿ ಏರಿಕೆ ಮಾಡಬೇಕು ಎಂದು ಕೆಎಂಎಫ್ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದೆ. ಸರ್ಕಾರ ಎಷ್ಟು ರೂಪಾಯಿಗೆ ಅನುಮೋದನೆ ನೀಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಆತಂಕ.. ಗೃಹ ಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳ ಫಿಲ್ಟರ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment