/newsfirstlive-kannada/media/post_attachments/wp-content/uploads/2024/08/SIDDU-DKS.jpg)
ಹೊಸ ವರ್ಷದ ಆರಂಭದಲ್ಲಿ ಗ್ರಾಹಕರಿಗೆ ಬಿಗ್ ಶಾಕ್ ನೀಡಲು ಕೆಎಂಎಫ್​ (ಕರ್ನಾಟಕ ಹಾಲು ಒಕ್ಕೂಟ) ಮುಂದಾಗಿದೆ. ಸಂಕ್ರಾಂತಿ ಬಳಿಕ ಹಾಲಿನ ದರ ಏರಿಕೆ ಸಾಧ್ಯತೆ ಇದೆ. ಲೀಟರ್​ಗೆ 5 ರೂಪಾಯಿ ಹೆಚ್ಚಳದ ಬೇಡಿಕೆಯನ್ನು ರೈತರಿಟ್ಟಿದ್ದಾರೆ ಎನ್ನಲಾಗಿದ್ದು, ಸಂಕ್ರಾಂತಿ ಬಳಿಕ ಲೀಟರ್​ಗೆ 5 ರೂಪಾಯಿ ಏರಿಕೆ ಸಾಧ್ಯತೆ ಇದೆ.
ನಿನ್ನೆಯ ದಿನ ಕೆಎಂಎಫ್‌ನಿಂದ ಮತ್ತೊಂದು ಪ್ರಾಡೆಕ್ಟ್ ಲಾಂಚ್ ಆಗಿದೆ. ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯ ಇರಲಿದೆ. ನಿನ್ನೆ ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೋಸೆ ಹಾಗೂ ಇಡ್ಲಿ ಹಿಟ್ಟು ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಕೆಎಂಫ್ ಅಧ್ಯಕ್ಷ ಭೀಮಾ ನಾಯ್ಕ್​, ಇಡ್ಲಿ ಮತ್ತು ದೋಸೆ ಹಿಟ್ಟು ಯಾವಾಗ ಮಾರ್ಕೆಟ್​​ಗೆ ಬರುತ್ತೆ ಅನ್ನೋ ಚರ್ಚೆಯಾಗ್ತಿತ್ತು. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ ಎಂದರು.
ಇಡೀ ಬೆಂಗಳೂರು ಸಿಟಿಯಲ್ಲಿ ನಾವು ಪ್ಲೇಸ್​ಮೆಂಟ್ ಮಾಡ್ತೀವಿ. ಖಾಸಗಿಯವರು ದೋಸೆ ಹಿಟ್ಟು ಒಂದು ದಿನಕ್ಕೆ ಎಷ್ಟು ಮಾರುತ್ತಾರೋ, ನಾವು ದಿನಕ್ಕೆ 5 ಸಾವಿರ ಮೆಟ್ರಿಕ್ ಟನ್ ನೀಡಲಿದ್ದೇವೆ. ಈಗ ಖಾಸಗಿಯವರು 30 ಸಾವಿರ ಮೆಟ್ರಿಕ್ ಟನ್ ನೀಡುತ್ತಿದ್ದಾರೆ ಎಂದರು.
ಇದೇ ವೇಳೆ ಹಾಲಿನ ಪ್ಯಾಕೆಟ್​ನಲ್ಲಿ 50ML ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.. ಅದನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಂಕ್ರಾಂತಿ ಬಳಿಕ ಸರ್ಕಾರದ ಜೊತೆ ಚರ್ಚಿಸಿ ವಾಪಸ್ ತೆಗೆದುಕೊಳ್ಳುವ ತೀರ್ಮಾನ ಆಗಲಿದೆ ಎಂದಿದ್ದಾರೆ.
ಇದನ್ನೂ ಓದಿ:ಬಾಕ್ಸಿಂಗ್ ಟೆಸ್ಟ್​ನಲ್ಲಿ ಅಹಿತಕರ ಘಟನೆ; ವಿರಾಟ್ ಕೊಹ್ಲಿ ಬ್ಯಾನ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us