/newsfirstlive-kannada/media/post_attachments/wp-content/uploads/2024/06/darshan-nandish.jpg)
ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಂದೀಶ್​ ಎಂಬಾತ ಅರೆಸ್ಟ್​ ಆಗಿದ್ದಾನೆ. ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಆದರೀಗ ನಟ ದರ್ಶನನ್ನು ನಂಬಿ ಜೈಲು ಸೇರಿದವನ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಆತನ ಪರ ವಾದಕ್ಕೆ ವಕೀಲರ ನೇಮಿಸಿಕೊಳ್ಳುವುದಿರಲಿ, ಬೆಂಗಳೂರಿಗೆ ಹೋಗಿ ಮಗನ ನೋಡಲು ಹಣವಿಲ್ಲದೆ ಆತನ ಕುಟುಂಬ ಪರದಾಡುತ್ತಿದೆ.
[caption id="attachment_70644" align="alignnone" width="800"]
ಅಳುತ್ತಿರುವ ನಂದೀಶ್​​ ಅಕ್ಕ ನಂದಿನಿ[/caption]
ಕಣ್ಣೀರಿನಲ್ಲಿ ಕುಟುಂಬ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಂದೀಶ್​ A5 ಆರೋಪಿಯಾಗಿದ್ದಾನೆ. ದರ್ಶನ್​ ಅಭಿಮಾನಿ ಮತ್ತು ಆಪ್ತನಾಗಿರುವ ಈತ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದನು. ಆದರೀಗ ಈ ಕೊಲೆ ಕೇಸ್​ಗೆ ಸಂಬಂಧಿಸಿ ಜೈಲು ಸೇರಿದ್ದಾನೆ. ಸದ್ಯ ಮಗನ ಪರಿಸ್ಥಿತಿ ಕಂಡು ನಂದೀಶ್​ ಕುಟುಂಬ ಪ್ರತಿದಿನವೂ ಕಣ್ಣೀರಲ್ಲೇ ಕೈ ತೊಳೆಯುತ್ತಿದೆ.
/newsfirstlive-kannada/media/post_attachments/wp-content/uploads/2024/06/Nandish-family.jpg)
ಡಿ ಬಾಸ್​ ಫ್ಯಾನ್ಸ್​ ಎಲ್ಲಿದ್ದಾರೆ?
ಅತ್ತ ಜೈ ಡಿ ಬಾಸ್​ ಎನ್ನುವ ಫ್ಯಾನ್ಸ್​ ಕೂಡ ನಂದೀಶ್​ ಹತ್ರವಾಗಲಿ, ಆತನ ಕುಟುಂಬದತ್ತ ತಲೆ ಹಾಕಿಲ್ಲ. ನಂದೀಶ್​ ಕುಟುಂಬದ ಕಣ್ಣೀರು ಒರೆಸಲು ಮುಂದಾಗಲಿಲ್ಲ.
ಇದನ್ನೂ ಓದಿ: ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದ A1 ಪವಿತ್ರಾ.. ಮತ್ತೊಂದು ಮಹತ್ವದ ಸಾಕ್ಷ್ಯ ಸಂಗ್ರಹ!
ಮನೆಗೆ ಆಧಾರವಾಗಿದ್ದ ಮಗ
ಇತ್ತ ಜೈಲಲ್ಲಿರುವ ಮಗನ ನೋಡಲು ಬೆಂಗಳೂರಿಗೆ ಬರಲಾಗದೆ ಹೆತ್ತವರ ಸಂಕಟದಲ್ಲಿದ್ದಾರೆ. ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿದ್ರು ಡಿಸೇಲ್ ಹಾಕಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ನಂದೀಶ್ ತಾಯಿ ಭಾಗ್ಯಮ್ಮ ಅಸ್ತಮ ಖಾಯಿಲೆಯಿಂದ ತೀವ್ರ ಬಳಲುತ್ತಿದ್ದಾರೆ. ಮಾತ್ರವಲ್ಲದೆ, ಮಗನನ್ನು ಕಾಣಲು ಭಾಗ್ಯಮ್ಮ ಹಾತೊರೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan28.jpg)
ಇದನ್ನೂ ಓದಿ: ಹಾಸನದಲ್ಲಿ ಪ್ರಜ್ವಲ್ ಬಳಿಕ ಸೂರಜ್ ರೇವಣ್ಣಗೂ ಬಿಗ್ ಶಾಕ್! ಆರೋಪವೇನು? ಏನಿದರ ಅಸಲಿಯತ್ತು?
ಅಭಿಮಾನಿಗಳು ಇಲ್ಲ, ಆಪ್ತರರು ಹತ್ರ ಬಂದಿಲ್ಲ
ದರ್ಶನ್ ಅಭಿಮಾನಿಗಳು, ಆಪ್ತರು ಯಾರು ಸಹ ಸೌಜನ್ಯಕ್ಕಾದರೂ ಮನೆ ಬಳಿಗೆ ಬಂದಿಲ್ಲ. ನಂದೀಶ್ ಬಿಡುಗಡೆಗೆ ವಕೀಲರನ್ನ ನೇಮಿಸಿಕೊಳ್ಳಲು ನಮಗೆ ಶಕ್ತಿ ಇಲ್ಲ. ದರ್ಶನ್ ಅಭಿಮಾನಿ ಎನಿಸಿಕೊಂಡ ಯಾರೊಬ್ಬರು ನಮ್ಮ ಕಷ್ಟ ಕೇಳಲಿಲ್ಲ ಎಂದು ನಂದೀಶ್ ಅಕ್ಕ ನಂದಿನಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us