newsfirstkannada.com

ನಮ್ಮಮ್ಮ ಸೂಪರ್​ ಸ್ಟಾರ್​​ 3 ಶೋ ಗೆದ್ದ ತಾಯಿ ಮಗಳು ಯಾರು? ಎಷ್ಟು ಹಣ ಸಿಕ್ತು?

Share :

Published May 27, 2024 at 6:10am

  ವೀಕ್ಷಕರನ್ನು ರಂಜಿಸುತ್ತಿದ್ದ ಮಕ್ಕಳ ಮುದ್ದು ಮಾತುಗಳು, ಅವರ ತುಂಟಾಟಗಳು

  ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ರನ್ನರ್​ ಪಟ್ಟವನ್ನು ಪಡೆದವರು ಯಾರು

  ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ತಾಯಿ, ಮಗಳು ಗೆದ್ದ ಹಣವೆಷ್ಟು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಕಳೆದ ಸೀಸನ್‌ನಂತೆ ಈ ಬಾರಿಯೂ ಸೃಜನ್ ಲೋಕೇಶ್, ತಾರಾ ಅನುರಾಧಾ, ಅನುಪ್ರಭಾಕರ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಹೊಸ ಸ್ಪರ್ಧಿಗಳ ಜತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳಾಗಿ ನಟಿಸುತ್ತಿರುವ ಸುಷ್ಮಾ ರಾವ್ ನನ್ನಮ್ಮ ಸೂಪರ್ ಸ್ಟಾರ್’ನ ನಿರೂಪಕಿಯಾಗಿದ್ದರು.

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಮಕ್ಕಳ ಮುದ್ದು ಮಾತುಗಳು, ಅವರ ಆಟಗಳು ನೋಡುಗರನ್ನು ರಂಜಿಸುತ್ತಲೇ ಬರುತ್ತಿದೆ. ಎರಡು ಸೀಸನ್‌ ಪ್ರಸಾರವಾದ ಬಳಿಕ ಮೂರನೇ ಸೀಸನ್‌ ಶುರುವಾಗಿತ್ತು. ಇದೀಗ ಈ ಮೂರನೇ ಸೀಸನ್​ ಮುಕ್ತಾಯಗೊಂಡಿದೆ. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಗ್ರ್ಯಾಂಡ್​​ ಫಿನಾಲೆಯಲ್ಲಿ ವಿನ್ನರ್​ ಯಾರೆಂದು ಅಧಿಕೃತವಾಗಿ ಹೊರಡಿಸಿದ್ದಾರೆ. ಮೊದಲ ಸೀಸನ್‍ನಲ್ಲಿ ವನ್ಷಿಕಾ ಮತ್ತು ಯಶಸ್ವಿನಿ ವಿಜೇತರಾಗಿ ಹೊರಹೊಮ್ಮಿದ್ದರು. ಎರಡನೇ ಸೀಸನ್‌ನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗೆ ಅಂದರೆ ಚೈತ್ರಾ ಮತ್ತು ಅವರ ಅವಳಿ ಮಕ್ಕಳು ಚಿರಂತ್-ಚಿನ್ಮಯ್ ವಿಜೇತರಾಗಿದ್ದರು.

ಇದೀಗ ಹೌದು, ನನ್ನಮ್ಮ ಸೂಪರ್ ಸ್ಟಾರ್ ಸೀಸನ್​ 3 ವಿನ್ನರ್ ಪಟ್ಟವನ್ನು ಸಾರಿಕಾ ಹಾಗೂ ಮೃದಿನಿ ಪಡೆದುಕೊಂಡಿದ್ದಾರೆ. ರನ್ನರ್ ಅಪ್ ಪಟ್ಟವನ್ನು ಚೈತ್ರಾ-ದುಷ್ಯಂತ್ ಪಡೆದುಕೊಂಡಿದ್ದಾರೆ. ಸೀಸನ್​ 3ರ 3ನೇ ಸ್ಥಾನ ಪಡೆದವರು ಶಿಲ್ಪಾ ಹಾಗೂ ವಿಆನ್. 4ನೇ ಸ್ಥಾನವನ್ನು ಸೌಂದರ್ಯ ಹಾಗೂ ಧವನ್ ರಾಜ್ ಪಡೆದುಕೊಂಡಿದ್ದಾರೆ. 5ನೇ ಸ್ಥಾನದಲ್ಲಿ ಅಪೂರ್ವ ಅಯಾಂಶ್ ಬಂದಿದ್ದಾರೆ. 6ನೇ ಸ್ಥಾನ ಪಡೆದವರು ಪ್ರಿಯಾಂಕಾ ಹಾಗೂ ದ್ವಿತಾ. ಇನ್ನು ನನ್ನಮ್ಮ ಸೂಪರ್ ಸ್ಟಾರ್ ಸೀಸನ್​ 3 ರನ್ನರ್ ಅಪ್ ಪಟ್ಟವನ್ನು ಪಡೆದುಕೊಂಡ ಚೈತ್ರಾ ಹಾಗೂ ದುಷ್ಯಂತ್​ಗೆ ಕಲರ್ಸ್​ ಕನ್ನಡ ವಾಹಿನಿಯಿಂದ 2 ಲಕ್ಷ ರೂಪಾಯಿ ನೀಡಲಾಗಿದೆ.  ನನ್ನಮ್ಮ ಸೂಪರ್ ಸ್ಟಾರ್ ಸೀಸನ್​ 3 ವಿನ್ನರ್ ಪಟ್ಟವನ್ನು ಪಡೆದುಕೊಂಡ ಸಾರಿಕಾ ಹಾಗೂ ಮೃದಿನಿಗೆ 5 ಲಕ್ಷ ರೂಪಾಯಿ ಕ್ಯಾಶ್​ ಪ್ರೈಸ್ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮಮ್ಮ ಸೂಪರ್​ ಸ್ಟಾರ್​​ 3 ಶೋ ಗೆದ್ದ ತಾಯಿ ಮಗಳು ಯಾರು? ಎಷ್ಟು ಹಣ ಸಿಕ್ತು?

https://newsfirstlive.com/wp-content/uploads/2024/05/nannamma-super1.jpg

Load More