/newsfirstlive-kannada/media/post_attachments/wp-content/uploads/2025/03/mahitha.jpg)
ಈ ಪುಟ್ಟ ಪೋರಿ ಹಂತ ಹಂತವಾಗಿ ಕನ್ನಡ ಕಿರುತೆರೆಯಲ್ಲಿ ಸಖತ್ ಫೇಮಸ್ ಆಗುತ್ತಿದ್ದಾಳೆ. ಬಟ್ಟಲು ಕಣ್ಣಿನ ಕ್ಯೂಟ್ ಬೇಬಿ ಈ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನದಲ್ಲಿರೋ ಟಾಪ್ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಅವಳು ಬೇರೆ ಯಾರು ಅಲ್ಲ.. ಅದುವೆ ಈ ಕ್ಯೂಟ್ ಹುಡುಗಿ, ಮಾತಿನ ಮಲ್ಲಿ ಮಹಿತಾ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಏಕಾಏಕಿ ವರುಣಾರ್ಭಟ..! ಬುಡಸಮೇತ ನೆಲಕ್ಕೆ ಬಿದ್ದ ಮರಕ್ಕೆ 3 ವರ್ಷದ ಕಂದಮ್ಮ ಬಲಿ!
ಮಹಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ, ಚುಕ್ಕಿತಾರೆ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿದ್ದಳು ಬಾಲನಟಿ ಮಹಿತಾ. ಇದೀಗ ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಮಹಿ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಚುಕ್ಕಿತಾರೆ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ವಂಶಿಕಾಳ ಗೆಳತಿ ಮಹಿತಾ ಸೀರಿಯಲ್ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ತುಂಬಾನೆ ಌಕ್ಟೀವ್ ಆಗಿದ್ದಾಳೆ.
ಮಹಿತಾ ಬಾಲ ನಟಿಯಾಗಿ ಹೆಸರು ಮಾಡ್ತಿರೋ ಪುಟಾಣಿ. ರಿಯಾಲಿಟಿ ಶೋ, ಸಿನಿಮಾ, ಸೀರಿಯಲ್ ಮೂಲಕ ಕೇವಲ 7 ವರ್ಷಕ್ಕೆ ಜನಪ್ರಿಯತೆ ಪಡೆದಿರೋ ಬಾಲೆ. ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ತನ್ನ ಅಭಿನಯದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾಳೆ.
ಸದ್ಯ ಇದೀಗ ಮಹಿತಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಮಹಿತಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ. ಬಿಳಿ ಬಣ್ಣದ ಫ್ರಾಕ್ನಲ್ಲಿ ಕಾಣಿಸಿಕೊಂಡಿದ್ದಾಳೆ ಈ ಪೋರಿ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು, ನೆಟ್ಟಿಗರು ಮಹಿತಾಳ ಕ್ಯೂಟ್ನೈಸ್ಗೆ ಫಿದಾ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ