ನನ್ನರಸಿ ರಾಧೆ, ಕರಿಮಣಿ ಸೀರಿಯಲ್​ ನಿರ್ಮಾಣ ಮಾಡಿದ್ದ ನಿರ್ದೇಶಕ ಇನ್ನಿಲ್ಲ; ವಿ‌ನೋದ್ ದೋಂಡಳೆಗೆ ಆಗಿದ್ದೇನು?

author-image
Veena Gangani
Updated On
ನನ್ನರಸಿ ರಾಧೆ, ಕರಿಮಣಿ ಸೀರಿಯಲ್​ ನಿರ್ಮಾಣ ಮಾಡಿದ್ದ ನಿರ್ದೇಶಕ ಇನ್ನಿಲ್ಲ; ವಿ‌ನೋದ್ ದೋಂಡಳೆಗೆ ಆಗಿದ್ದೇನು?
Advertisment
  • ವಿನೋದ್ ದೋಂಡಳೆ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್
  • ಕರಿಮಣಿ ಮುಂದಿನ ಸಂಚಿಕೆಯಲ್ಲಿ ಕರ್ಣನ ಮಾಸ್​ ಎಂಟ್ರಿಗೆ ನಡೆದಿತ್ತು ತಯಾರಿ
  • ಸ್ನೇಹಿತ ನರಹರಿ ಜೊತೆಗೆ ಸೇರಿ ಹಲವು ಸೀರಿಯಲ್ ನಿರ್ಮಾಣ ಮಾಡಿದ್ದ ವಿ‌ನೋದ್

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಧಾರಾವಾಹಿಯ ನಿರ್ದೇಶಕ ವಿ‌ನೋದ್ ದೋಂಡಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಇಡೀ ಕಿರುತೆರೆ ಹಾಗೂ ಸ್ಯಾಂಡಲ್​ವುಡ್​​ ನಟ ನಟಿಯರು ಫುಲ್​ ಶಾಕ್​ ಆಗಿದ್ದಾರೆ.

publive-image

ಇದನ್ನೂ ಓದಿ:BREAKING: ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಶರಣು

ಕರಿಮಣಿ ಧಾರಾವಾಹಿಯ ನಿರ್ದೇಶಕ ವಿ‌ನೋದ್ ದೋಂಡಳೆ ಅವರು ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ. ಅವರ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿನೋದ್ ದೋಂಡಾಲೆ ಅವರು ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರದ ನಿರ್ದೇಶಕರಾಗಿದ್ದಾರೆ. ಅಶೋಕ್ ಬ್ಲೇಡ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿದಿದೆ. ಅಲ್ಲದೇ ನನ್ನರಸಿ ರಾಧೆ ಸೀರಿಯಲ್ ನಿರ್ಮಾಣ ಸಹ ಮಾಡಿದ್ದರು. ಸ್ನೇಹಿತ ನರಹರಿ ಜೊತೆ ಸೇರಿ ಹಲವು ಸೀರಿಯಲ್ ನಿರ್ಮಾಣ ಮಾಡಿದ್ದರು. ನನ್ನರಸಿ ರಾಧೆ ಸೀರಿಯಲ್​ ವೈಂಡಪ್ ನಂತರ ಕರಿಮಣಿ ಸೀರಿಯಲ್ ನಿರ್ಮಾಣ ಮಾಡಿದ್ದರು.

publive-image

ಇನ್ನು, ಆತ್ಮಹತ್ಯಗೆ ಶರಣಾದ ವಿ‌ನೋದ್ ದೋಂಡಳೆ ಅವರು ಪ್ರಸ್ತುತವಾಗಿ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಧಾರಾವಾಹಿಯ ನಿರ್ದೇಶಕರಾಗಿದ್ದರು. ಈ ಕರಿಮಣಿ ಸೀರಿಯಲ್​ ದಿನದಿಂದ ದಿನಕ್ಕೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು. ಜೊತೆಗೆ ಟಿಆರ್​ಪಿ ಲಿಸ್ಟ್​ನಲ್ಲಿ ಒಳ್ಳೆಯ ಸ್ಥಾನ ಪಡೆದುಕೊಂಡು ಮುನ್ನುಗ್ಗುತ್ತಿತ್ತು. ರೋಮ್ಯಾನ್ಸ್, ಕಾಮಿಡಿ, ದ್ವೇಷ, ಥ್ರಿಲ್ಲಿಂಗ್​ ಎಲಿಮೆಂಟ್ಸ್​ ಮೂಲಕ ಸ್ಟೋರಿನ ಹದವಾಗಿ ಬಿಲ್ಡ್​ ಮಾಡ್ಕೊಂಡು ಹೋಗುತ್ತಿತ್ತು. ಇತ್ತೀಚಿಗಷ್ಟೇ ಕರಿಮಣಿ ಸೀರಿಯಲ್​ ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿರೋ ಸಂಭ್ರಮದಲ್ಲಿತ್ತು. ಈ ಸಂಭ್ರಮದ ಹಿನ್ನಲೆಯಲ್ಲಿ ಮುಂದಿನ ಸಂಚಿಕೆಗಳಲ್ಲಿ ಸಖತ್​ ಥ್ರಿಲ್ಲಿಂಗ್​ ಸನ್ನಿವೇಶಗಳನ್ನ ಫ್ಯಾನ್ಸ್​ಗೆ ಗಿಫ್ಟ್​ ಆಗಿ ನೀಡಲು ನಿರ್ಧರಿಸಿತ್ತು. ಆದರೆ ಈಗ ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment