newsfirstkannada.com

‘ಜಗನ್​ ರೆಡ್ಡಿ ಸ್ವಂತ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದಾರೆ’ ನಾಯ್ಡು ಪುತ್ರನಿಂದ ಬಿಗ್​ ಸ್ಟೇಟ್​​ಮೆಂಟ್; ಆಂಧ್ರದಲ್ಲಿ ಸಂಚಲನ

Share :

Published February 12, 2024 at 9:42am

  ‘ಮಾಜಿ ಮಿನಿಸ್ಟರ್​ ಆಗಿದ್ದ ಚಿಕ್ಕಪ್ಪನನ್ನು ಜಗನ್​ ಹತ್ಯೆ ಮಾಡಿದ್ದಾರೆ’

  ಆಂಧ್ರಪ್ರದೇಶವನ್ನ ಗಾಂಜಾ ರಾಜಧಾನಿಯನ್ನಾಗಿ ಸಿಎಂ ಮಾಡಿದ್ದಾರೆ

  ಇನ್ನಷ್ಟು ಕುಟುಂಬಗಳನ್ನ ಹತ್ಯೆ ಮಾಡಲು ಸಿಎಂ ರೆಡಿಯಾಗಿದ್ದಾರಾ?

ಹೈದರಾಬಾದ್: ಆಂಧ್ರ ಪ್ರದೇಶದ ಸಿಎಂ ಹಾಗೂ ವೈಎಸ್​ಆರ್​ಸಿಪಿ ನಾಯಕ ಜಗನ್ ಮೋಹನ್ ರೆಡ್ಡಿಯವರು ಸ್ವಂತ ತಮ್ಮ ಚಿಕ್ಕಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ನಡೆದ ಱಲಿಯನ್ನು ಉದ್ದೇಶಿಸಿ ಮಾತನಾಡಿದ ಟಿಡಿಪಿಯ ನಾರಾ ಲೋಕೇಶ್ ಅವರು, ಸಿಎಂ ಜಗನ್​ ಮೋಹನ್ ರೆಡ್ಡಿಯವರು ತಮ್ಮ ಚಿಕ್ಕಪ್ಪ ಹಾಗೂ ಮಾಜಿ ಸಚಿವ ವೈಎಸ್​ ವಿವೇಕಾನಂದ ರೆಡ್ಡಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎಂ ಇನ್ನಷ್ಟು ಕುಟುಂಬಗಳನ್ನು ಹತ್ಯೆ ಮಾಡಲು ಸಿದ್ಧರಾಗಿದ್ದಾರಾ, ಇಡೀ ರಾಜ್ಯವನ್ನು ನಾಶವನ್ನು ಮಾಡಲು ರೆಡಿಯಾಗಿದ್ದಾರಾ ಎಂದು ಲೋಕೇಶ್ ಪ್ರಶ್ನೆ ಮಾಡಿದ್ದಾರೆ.

ಯಾವುದೇ ತಪ್ಪು ಮಾಡದ ನನ್ನ ತಂದೆ ಚಂದ್ರಬಾಬು ನಾಯ್ಡುರನ್ನು ಕಾನೂನು ಬಾಹೀರವಾಗಿ ಜಗನ್ ಸರ್ಕಾರ ಅರೆಸ್ಟ್ ಮಾಡಿ 53 ದಿನಗಳ ಕಾಲ ಜೈಲಿಗೆ ಹಾಕಿತ್ತು. ಕಳೆದ 4 ವರ್ಷದಲ್ಲಿ ಸಿಎಂ ನಮ್ಮ ಪಕ್ಷದ ವಿರುದ್ಧ ಹಗೆತನ ಸಾಧಿಸುತ್ತಾ ಬರುತ್ತಿದ್ದಾರೆ. ಹೀಗಾಗಿಯೇ ಟಿಡಿಪಿ ಪಕ್ಷದ ಕಾರ್ಯಕರ್ತರ ಮೇಲೆ ಒಟ್ಟು 22 ಕೇಸ್​ಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಕೊಲೆ ಆರೋಪದ ಮೇಲೆ ಒಂದು ಕೇಸ್ ನನ್ನ ಮೇಲೂ ಇದೆ. ನಮ್ಮನ್ನು ಟಾರ್ಗೆಟ್ ಮಾಡುತ್ತಿರುವವರ ಹೆಸರನ್ನು ರೆಡ್​ ಬುಕ್​​ನಲ್ಲಿ ಬರೆದುಕೊಂಡಿದ್ದೇವೆ. ರಾಜ್ಯವನ್ನು ಗಾಂಜಾ ರಾಜಧಾನಿಯನ್ನಾಗಿ ಸಿಎಂ ಮಾಡಿದ್ದಾರೆ ಎಂದು ನಾರಾ ಲೋಕೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜಗನ್​ ರೆಡ್ಡಿ ಸ್ವಂತ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದಾರೆ’ ನಾಯ್ಡು ಪುತ್ರನಿಂದ ಬಿಗ್​ ಸ್ಟೇಟ್​​ಮೆಂಟ್; ಆಂಧ್ರದಲ್ಲಿ ಸಂಚಲನ

https://newsfirstlive.com/wp-content/uploads/2024/02/JAGAN.jpg

Load More