newsfirstkannada.com

ವಾರಕ್ಕೆ 70 ಗಂಟೆಗಳ ಕೆಲಸ; ನನ್ನ ಹೇಳಿಕೆಯಲ್ಲಿ ಯಾವುದೇ ವಿಷಾದ ಇಲ್ಲ -ನಾರಾಯಣ ಮೂರ್ತಿ

Share :

Published January 15, 2024 at 8:14am

Update January 15, 2024 at 9:12am

    ದೇಶದಲ್ಲಿ ಭಾರೀ ಚರ್ಚೆ ಆಗ್ತಿದೆ ನಾರಾಯಣ ಮೂರ್ತಿ ಹೇಳಿಕೆ

    ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಇನ್ಫೋಸಿಸ್ ನಾರಾಯಣ ಮೂರ್ತಿ

    ನಾರಾಯಣ ಮೂರ್ತಿ ಹೇಳಿಕೆಗೆ ಪತ್ನಿ ಸುಧಾ ಮೂರ್ತಿ ಹೇಳಿದ್ದೇನು ಗೊತ್ತಾ?

ಕಳೆದ ಹಲವು ತಿಂಗಳುಗಳಿಂದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಪದೇಪದೆ ಹೆಡ್​ಲೈನ್ ಆಗುತ್ತಿದ್ದಾರೆ. ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂಬ ಹೇಳಿಕೆ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ಯಾವುದೇ ವಿಷಾದ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಖಾಸಗಿ ಮಾಧ್ಯವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು.. ನನ್ನ ಹೇಳಿಕೆ ಬಗ್ಗೆ ಯಾವುದೇ ವಿಷಾದ ಇಲ್ಲ. 70 ಗಂಟೆ ಮುಖ್ಯ ಎಂದು ಅವರು (ಟೀಕೆ ಮಾಡಿದೋರು) ಭಾವಿಸಿಲ್ಲ. ನನ್ನ ಹೇಳಿಕೆಯಲ್ಲಿ ನೀವು ತುಂಬಾ ಉತ್ಪಾದಕರಾಗಬೇಕು ಎಂದರ್ಥ. ಇದರೊಂದಿಗೆ ಸರ್ಕಾರದ ಸವಲತ್ತು ಪಡೆದವರು ಸಮಾಜದ ಒಳಿತಿಗಾಗಿ ಹೆಚ್ಚು ಶ್ರಮಿಸಬೇಕು ಎಂದು ಮತ್ತೆ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ವಾರಕ್ಕೆ 70 ಗಂಟೆಯ ಕೆಲಸ.. ನಾರಾಯಣ ಮೂರ್ತಿ ಸಲಹೆಗೆ ಖ್ಯಾತ ಹೃದ್ರೋಗ ತಜ್ಞರಿಂದ ಖಡಕ್ ಪ್ರಶ್ನೆ; ನೆಟ್ಟಿಗರು ಫಿದಾ!

ನಿವೃತ್ತಿಗೂ ಮೊದಲು ನಾನು ಪ್ರತಿ ವಾರ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. 1961ರಲ್ಲಿ ಓದುತ್ತಿದ್ದಾಗ ಪೂರ್ವ ವಿವಿಯಿಂದ ನಾನು ಸ್ಕಾಲರ್​ಶಿಪ್ ಪಡೆದುಕೊಳ್ಳುತ್ತಿದೆ. ಇಂಜಿನಿಯರ್ ಕಾಲೇಜಿನ ನನ್ನ ಬಹುತೇಕ ಸ್ನೇಹಿತರಿಗೆ ಶುಲ್ಕದ ವಿಚಾರದಲ್ಲಿ ಸರ್ಕಾರ ಭಾರೀ ರಿಯಾಯಿತಿ ಸಿಗುತ್ತಿತ್ತು. ಸರ್ಕಾರದಿಂದ ಲಾಭ ಪಡೆದವರು ದೇಶದಲ್ಲಿರುವ ಬಡವರ ಜೀವನ ಸುಧಾರಿಸಲು ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಹೀಗಾಗಿ ನಾನು ಯಾವಾಗಲೂ ಅದನ್ನೇ ಅಭಿಪ್ರಾಯಪಡುತ್ತೇನೆ ಎಂದಿದ್ದಾರೆ.

ಇದೇ ವೇಳೆ ಅವರ ಪತ್ನಿ ಸುಧಾ ಮೂರ್ತಿ ಪ್ರತಿಕ್ರಿಯಿಸಿ.. ನಮ್ಮಿಬ್ಬರಿಗೂ ಯಾವಾಗಲೂ ಕೆಲಸ ಮಾಡೋದ್ರಿಂದ ಖುಷಿ ಸಿಗುತ್ತದೆ. ನಾನೂ ಕೂಡ ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನಾನು ಹೇಳೋದು ಏನೆಂದರೆ ನಿಮ್ಮ ಕೆಲಸದಲ್ಲಿ ಖುಷಿ ಇರಬೇಕು. ಖುಷಿಯಿಂದ ಕೆಲಸ ಮಾಡಬೇಕು. ರಜೆ ಅನ್ನೋದು ಆನಂತರ ಇದ್ದೇ ಇದೆ ಎಂದಿದ್ದಾರೆ.

ಇದನ್ನೂ ಓದಿಸರ್ಕಾರಗಳ ಫ್ರೀ ಸ್ಕೀಮ್ಸ್​​ ವಿರುದ್ಧ ಇನ್ಫೋಸಿಸ್ ನಾರಾಯಣ ಮೂರ್ತಿ ಅಸಮಾಧಾನ

ನಾರಾಯಣ ಮೂರ್ತಿ ಹೇಳಿದ್ದೇನು..?

2023 ಅಕ್ಟೋಬರ್​ನಲ್ಲಿ ನಾರಾಯಣ ಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ದೇಶದ ಕೆಲಸದ ಉತ್ಪಾದಕತೆ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಇದೆ. ಚೀನಾದಿಂತಹ ದೇಶಗಳೊಂದಿಗೆ ಭಾರತ ಸ್ಪರ್ಧೆ ಮಾಡಲು ದೇಶದ ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಅಂದರೆ ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ದುಡಿದಂತೆ ಎಂದಿದ್ದರು. ನಾರಾಯಣ ಮೂರ್ತಿ ಅವರ ಈ ಹೇಳಿಕೆ ಭಾರೀ ಪರ-ವಿರೋಧಗಳಿಗೆ ಚರ್ಚೆ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರಕ್ಕೆ 70 ಗಂಟೆಗಳ ಕೆಲಸ; ನನ್ನ ಹೇಳಿಕೆಯಲ್ಲಿ ಯಾವುದೇ ವಿಷಾದ ಇಲ್ಲ -ನಾರಾಯಣ ಮೂರ್ತಿ

https://newsfirstlive.com/wp-content/uploads/2024/01/NARAYANA-MURTHY.jpg

Load More