/newsfirstlive-kannada/media/post_attachments/wp-content/uploads/2025/02/manam-Film-Story.jpg)
ಬಡ ವಿದ್ಯಾವಂತ ಹುಡುಗಿ ಮನೆಗೆ ಹೋಗಿ ಓರ್ವ ವಿದ್ಯಾವಂತ ಹೆಣ್ಣು ಕೇಳಿದ್ದ. ನನಗೆ ಯಾರೂ ಇಲ್ಲ, ನೀವೇ ಅಪ್ಪ ಅಮ್ಮ ಅಂತ ಹೇಳಿ ಮದುವೆ ಆಗಿದ್ದ. ಸರಳವಾಗಿ ಮದುವೆ ಆಗಿತ್ತು ಜೋಡಿ. ತೀರಾ ಮದುವೆ ಮುಗಿದ ಮೇಲೆ ವಧು ಹಾಗೂ ವಧುವಿನ ಕುಟುಂಬವೇ ಶಾಕ್ ಆಗಿದೆ. ಅಷ್ಟೇ ಅಲ್ಲ, ಆ ದೃಶ್ಯ ಕಂಡು ವಧು ಅಪ್ಪ, ಅಮ್ಮ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೇ ಎಚ್ಚರ.. ಮತ್ತೆ ಕಾಲ್ತುಳಿತದ ಭೀತಿ; ದೇಶದ ರೈಲು ನಿಲ್ದಾಣಗಳಲ್ಲಿ ಫುಲ್ ಅಲರ್ಟ್ ಘೋಷಣೆ
ನಿಮ್ಮ ಮಗಳನ್ನು ಮದುವೆ ಆಗ್ತೀನಿ.. ಚೆನ್ನಾಗಿ ನೋಡಿಕೊಳ್ತೀನಿ
ಹರಿಯಾಣದ ಜಿಂಧ್ ಜಿಲ್ಲೆಯ ನರವಾಣದಲ್ಲಿ ಜನ ಮೆಚ್ಚುವ ಮದುವೆ ಆಗಿದೆ. ಇದೀಗ ಹರಿಯಾಣ ರಾಜ್ಯದಲ್ಲಿ ಇದೇ ಮದುವೆಯ ಸುದ್ದಿ ಚರ್ಚೆ ಆಗುತ್ತಿದೆ. 1961ರಲ್ಲೇ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಆದರೇ, ಇದುವರೆಗೂ ಎಷ್ಟೋ ಮದುವೆಗಳಲ್ಲಿ ವರದಕ್ಷಿಣೆ ಅನ್ನೋ ಪೆಂಡಭೂತ ಸೈಲೆಂಟಾಗಿ ಸೌಂಡ್ ಮಾಡುತ್ತಲೇ ಇದೆ. ಆದರೇ, ನರೇಂದ್ರ ಸಿಂಗ್ ಅನ್ನೋ ಹುಡುಗ ವಿದ್ಯಾವಂತ ವಧುವನ್ನು ಹುಡುಕುತ್ತಾ ಹೊರಟವನು ಸೀದಾ ಬಂದು ನಿಂತಿದ್ದು ಬಡ ರೈತ ರಾಜೀವ್ ಸಿಂಗ್ ಮನೆ ಮುಂದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಇದ್ದೀನಿ. ತಿಂಗಳಿಗೆ ₹40,000 ಸಂಬಳ ಇದೆ. ನಿಮ್ಮ ಮಗಳನ್ನು ಧಾರೆ ಎರೆದುಕೊಡಿ ಚೆನ್ನಾಗಿ ನೋಡಿಕೊಳ್ತೀನಿ ಅಂತ ಕೇಳಿದ್ದ ನರೇಂದ್ರ ಸಿಂಗ್ ಅನ್ನೋ ಹುಡುಗ. ಆತನ ನೇರವಂತಿಕೆ ಹಾಗೂ ಸುಗುಣ ಸ್ವಭಾವ ಮೆಚ್ಚಿ ರಾಜೀವ್ ತಮ್ಮ ಪುತ್ರಿ ಗೀತುಳನ್ನು ಸರಳವಾಗಿ ಮದುವೆ ಮಾಡಿಕೊಟ್ಟಿದ್ರು. ಆ ಬಳಿಕ ರಾಜೀವ್ ಸಿಂಗ್ ಹಾಗೂ ಆತನ ಪುತ್ರಿ ಗೀತು ಅಕ್ಷರಶಃ ಶಾಕ್ ಆಗುವಂತಾಯ್ತು.
ಪತ್ನಿ ಜತೆ ಮಾವನನ್ನು ಕರೆದುಕೊಂಡು ಜಿಂಧ್ಗೆ ಬಂದ ನರೇಂದ್ರ
ಜಿಂಧ್ನಲ್ಲಿ ಮನೆ ಮಾಡಿದ್ದೀನಿ. ನಿಮ್ಮ ಮಗಳೊಂದಿಗೆ ಅಲ್ಲಿಗೆ ಬನ್ನಿ ಅಂತ ಅಳಿಮಯ್ಯ ನರೇಂದ್ರ ಕರೆದ. ಕೂಡಲೇ ಮಗಳನ್ನು ಅಳಿಯನ ಮನೆಗಾದರೂ ಬಿಟ್ಟು ಬರೋಣ ಅಂತ ಬಂದ ರಾಜೀವ್ ಸಿಂಗ್ ಖುಷಿಯಲ್ಲಿ ತೇಲಾಡುವಂತಾಯ್ತು. ಯಾಕಂದ್ರೆ ನರೇಂದ್ರಗೆ ಅಪ್ಪ ಅಮ್ಮ ಎಲ್ಲರೂ ಇದ್ದಾರೆ. ನರೇಂದ್ರ ಸಾಮಾನ್ಯನಂತೂ ಅಲ್ಲ ಅನ್ನೋದು ಗೊತ್ತಾಯ್ತು. ಹರಿಯಾಣದ ಮಾಜಿ ತಹಶೀಲ್ದಾರ್ ಷಂಶೇರ್ ಸಿಂಗ್ ಪುತ್ರ ನರೇಂದ್ರಗೆ ಕಾರು, ಬಂಗಲೆ ಎಲ್ಲವೂ ಇತ್ತು. ಖುದ್ದು ಷಂಶೇರ್ ಸಿಂಗ್ ವರದಕ್ಷಿಣೆ ಮುಟ್ಟದೇ ಮಗನ ಮದುವೆ ಮಾಡುವ ಉದ್ಧೇಶ ಹೊಂದಿದ್ದರು. ಬೆಳೆದ ಮಗನಿಗೆ ಎಲ್ಲಾ ಆಯ್ಕೆಯನ್ನೂ ನೀಡಿದ್ದರು. ಹಾಗಾಗಿಯೇ ಮಗನೇ ಹುಡುಕಿ ತಂದ ವಧುವನ್ನು ಮನೆಗೆ ತುಂಬಿಸಿಕೊಂಡಿದ್ದಾರೆ. ಈ ಕ್ಷಣ ರಾಜೀವ್ ಸಿಂಗ್ ಹಾಗೂ ಅವರ ಮಗಳು ಗೀತು ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಬಡ ರೈತನಿಂದ ₹1 ಪಡೆದ ಷಂಶೀರ್ ಸಿಂಗ್ ಮಗನ ಕೈಗಿಟ್ಟು ಇದು ಬರೀ ಒಂದು ರೂಪಾಯಿ ಅಲ್ಲ. ನಿನ್ನ ಮಾವನ ಸ್ವಾಭಿಮಾನ ಹಾಗೂ ಶ್ರಮದ ಕೋಟಿ ರೂಪಾಯಿ ಅಂತ ಹೇಳಿದ್ದಾರೆ. ಯಾರೂ ಸಹ ವರದಕ್ಷಿಣ ಪಡೆಯಬಾರದು, ಕೊಡಬಾರದು ಅನ್ನೋ ಸಂದೇಶವನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ. ಮನಂ ಅನ್ನೋ ತೆಲುಗು ಸಿನಿಮಾದಂತೆಯೇ ಈ ಮದುವೆ ನಡೆದಿರೋದು ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ