BREAKING: ಮೋದಿ 3.O ಕ್ಯಾಬಿನೆಟ್‌ನಲ್ಲಿ ಕೆ. ಅಣ್ಣಾಮಲೈಗೆ ಕೇಂದ್ರ ಸಚಿವ ಸ್ಥಾನ ಫಿಕ್ಸ್‌?

author-image
admin
Updated On
ಕೊಯಮತ್ತೂರು ಕುರುಕ್ಷೇತ್ರ.. ಅಣ್ಣಾಮಲೈಯನ್ನ ಬಿಜೆಪಿ ಕಣಕ್ಕಿಳಿಸಿದ್ದು ಯಾಕೆ? ಕಾರಣ ರಣರೋಚಕ!
Advertisment
  • ರಾಷ್ಟ್ರಪತಿ ಭವನದಲ್ಲಿ ನೂತನ NDA ಸರ್ಕಾರದ ಅಸ್ತಿತ್ವಕ್ಕೆ ಸಕಲ ಸಿದ್ಧತೆ
  • ಮಂತ್ರಿಪಟ್ಟ ಅಲಂಕರಿಸೋ ನಾಯಕರಿಗೆ ಮೋದಿ ನಿವಾಸದಿಂದ ಆಹ್ವಾನ
  • ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಅಣ್ಣಾಮಲೈ

ನವದೆಹಲಿ: ಹ್ಯಾಟ್ರಿಕ್ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ರಾಷ್ಟ್ರಪತಿ ಭವನದಲ್ಲಿ ನೂತನ NDA ಸರ್ಕಾರದ ಅಸ್ತಿತ್ವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಮೋದಿ ಪಟ್ಟಾಭಿಷೇಕದ ಮಧ್ಯೆ ಕೇಂದ್ರ ಸಚಿವರು ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗುತ್ತಿದೆ.

ನೂತನ NDA ಸರ್ಕಾರ ಅಸ್ತಿತ್ವಕ್ಕೆ ಬರುವ ಜೊತೆ ಜೊತೆಗೆ ಕೇಂದ್ರ ಮಂತ್ರಿಪಟ್ಟ ಅಲಂಕರಿಸೋ ನಾಯಕರಿಗೆ ಮೋದಿ ನಿವಾಸದಿಂದ ಆಹ್ವಾನ ನೀಡಲಾಗುತ್ತಿದೆ. ಕೇಂದ್ರ ಸಚಿವರಾಗುವ ನಾಯಕರಿಗೆ ನರೇಂದ್ರ ಮೋದಿ ಅವರು ತಮ್ಮ ನಿವಾಸಕ್ಕೆ ಆಗಮಿಸುವಂತೆ ಆಹ್ವಾನ ನೀಡುತ್ತಿದ್ದಾರೆ. ಮೋದಿ ಅವರ ಆಹ್ವಾನದ ಮೇರೆಗೆ ಸಂಭಾವ್ಯ ಸಚಿವರ ದಂಡು ಪ್ರಧಾನಿ ನಿವಾಸಕ್ಕೆ ಆಗಮಿಸುತ್ತಿದೆ.

publive-image

ಸದ್ಯದ ಮಾಹಿತಿ ಪ್ರಕಾರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರಿಗೂ ನರೇಂದ್ರ ಮೋದಿ ನಿವಾಸದಿಂದ ಆಹ್ವಾನ ಬಂದಿದೆ ಎನ್ನಲಾಗಿದೆ. ಈ ಮೂಲಕ ಅಣ್ಣಾಮಲೈಗೆ ಮೋದಿ 3.0 ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಅಣ್ಣಾಮಲೈ ಫೋಟೋ ಇಟ್ಟು ಮೇಕೆ ಕಡಿದ್ರಾ ಡಿಎಂಕೆ ಕಾರ್ಯಕರ್ತರು; ವಿಡಿಯೋ ನೋಡಿ! 

6 ತಿಂಗಳಲ್ಲಿ ಅಣ್ಣಾಮಲೈಗೆ ಸಂಸತ್ ಸ್ಥಾನ!
ಕೆ. ಅಣ್ಣಾಮಲೈ ಅವರು ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಹೀಗಾಗಿ ಕೇಂದ್ರ ಸಚಿವರಾಗುತ್ತಿರುವ ಅಣ್ಣಾಮಲೈ ಅವರು ಮುಂದಿನ 6 ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿದೆ.

ಕೇಂದ್ರ ಸಚಿವರಾಗಲು ಸಂಸತ್‌ನ ಯಾವುದಾದರೊಂದು ಸದನದ ಸದಸ್ಯರಾಗಲೇಬೇಕು. ಸದ್ಯ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ತಮಿಳುನಾಡಿನ ಕೆ.ಅಣ್ಣಾಮಲೈ ಅವರು ಮುಂದಿನ 6 ತಿಂಗಳಲ್ಲಿ ರಾಜ್ಯಸಭೆಗೆ ಆಯ್ಕೆಯಾಗಬೇಕಿದೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಬಲ ತುಂಬಲು ಅಣ್ಣಾಮಲೈಗೆ ಬಿಜೆಪಿ ನಾಯಕರು ಕೇಂದ್ರ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment