newsfirstkannada.com

ಕನ್ಯಾಕುಮಾರಿಯಲ್ಲಿ ನಮೋ ತಪಸ್ಸು.. 45 ಗಂಟೆಗಳ ಧ್ಯಾನದ ಅವಧಿಯಲ್ಲಿ ಮೋದಿ ಏನು ಸೇವನೆ ಮಾಡುತ್ತಾರೆ..?

Share :

Published May 31, 2024 at 6:46am

Update May 31, 2024 at 10:07am

    33 ವರ್ಷಗಳ ಹಿಂದೆ ಕನ್ಯಾಕುಮಾರಿಗೆ ಮೋದಿ ಭೇಟಿ

    ಕನ್ಯಾಕುಮಾರಿಯಲ್ಲಿ ಲೋಕ ಧ್ಯಾನದಲ್ಲಿ ಕುಳಿತ ಮೋದಿ

    ಪ್ರಧಾನಿ ಮೋದಿ ತಪಸ್ಸು ಭಂಗಕ್ಕೆ ವಿಪಕ್ಷಗಳ ಯತ್ನ

ಜೂನ್. 04 ಭಾರತದ ಪ್ರಜಾಪ್ರಭುತ್ವದ ಬಿಗ್‌ ಡೇ.. ಲೋಕಸಭಾ ಚುನಾವಣೆಯ ಮಹಾತೀರ್ಪಿನ ದಿನ.. ಈ ಮಹಾದಿನಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಧ್ಯಾನ ಸಂಪ್ರದಾಯವನ್ನ ಮುಂದುವರಿಸಿದ್ದಾರೆ.. 2014, 2019ರಲ್ಲಿ ಮಾಡಿದಂತೆ ಈ ಬಾರಿ ಲೋಕ ಧ್ಯಾನದಲ್ಲಿ ಮುಳುಗಿದ್ದಾರೆ. ಮಹಾನ್ ದೈವ ಭಕ್ತರಾದ ಮೋದಿ ಕನ್ಯಾಕುಮಾರಿಯ ಕಡಲ ಮಧ್ಯದಲ್ಲಿ ಧ್ಯಾನಾಸಕ್ತರಾಗಿದ್ದಾರೆ. ನಮೋ ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡ್ತಿದ್ರೆ, ವಿಪಕ್ಷಗಳೆಲ್ಲಾ ಒಟ್ಟಾಗಿ ತಪಸ್ಸು ಭಂಗ ಮಾಡುವ ಕಾರ್ಯದಲ್ಲಿ ಮಗ್ನವಾಗಿವೆ.

ಕನ್ಯಾಕುಮಾರಿ ಅಂದ ತಕ್ಷಣವೇ ನೆನಪಿಗೆ ಬರೋದು ಸ್ವಾಮಿ ವಿವೇಕಾನಂದರು. ಸಮುದ್ರದ ಮಧ್ಯೆ ಇರೋ ಎರಡು ಬೃಹತ್‌ ಬಂಡೆಗಳು.. ಹೀಗೆ ನಿಗೂಢ ಶಕ್ತಿಯನ್ನು ಹೊಂದಿರೋ ಪುಣ್ಯ ಸ್ಥಳ ಕನ್ಯಾಕುಮಾರಿ. ಅದೇ ಆಧ್ಯಾತ್ಮಿಕ ಸ್ಥಳದಲ್ಲಿ ಮೋದಿ ಧ್ಯಾನಕ್ಕೆ ಕೂತಿದ್ದಾರೆ. ಸ್ವಾಮಿ ವಿವೇಕಾನಂದ ಧ್ಯಾನ ಮಂಟಪದಲ್ಲಿ ನಮೋ ಧ್ಯಾನಾಸಕ್ತರಾಗಿದ್ದಾರೆ.

ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ತಮಿಳುನಾಡಿನ ತಿರುವನಂತಪುರಂಗೆ ಆಗಮಿಸಿದ್ರು. ಅಲ್ಲಿ ಮೊದಲು ಭಗವತಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಅಲ್ಲಿ ಭಗವತಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಅಲ್ಲಿಂದ ನೇರವಾಗಿ ಕನ್ಯಾಕುಮಾರಿಯಲ್ಲಿರೋ ಸ್ವಾಮಿ ವಿವೇಕಾನಂದ ಧ್ಯಾನಮಂಟಪಕ್ಕೆ ತೆರಳಿದ್ರು.

ಇದನ್ನೂ ಓದಿ:ನಮ್ಮ ಸಂಬಂಧ ಮಸಾಲೆ ಹಾಕುವಂತದ್ದಲ್ಲ.. ಮತ್ತೆ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಗೌತಮ್ ಗಂಭೀರ್..!

ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಬಂಡೆಗಳ ಮೇಲೆ ಪ್ರಧಾನಿ ಮೋದಿ ಧ್ಯಾನಾಸಕ್ತರಾಗಿದ್ದಾರೆ.. ಇವತ್ತು ತಪಸ್ಸಿಗೆ ಕೂತಿರೋ ಮೋದಿ ಜೂನ್‌ 1ರವರೆಗೂ ಧ್ಯಾನದಲ್ಲಿ ಮಗ್ನರಾಗಲಿದ್ದಾರೆ ಎನ್ನಲಾಗ್ತಿದೆ. ಹಗಲು ರಾತ್ರಿ ಎನ್ನದೇ ಸುಮಾರು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಎನ್ನಲಾಗ್ತಿದೆ. ನಿರ್ದಿಷ್ಠವಾಗಿ ಇಂತಿಷ್ಟೇ ಗಂಟೆಗಳ ಕಾಲ ಧ್ಯಾನ ಮಾಡ್ತಾರೆ ಅನ್ನೋದು ಕನ್ಫರ್ಮ್‌ ಆಗಿಲ್ಲ. ಈ ಮಧ್ಯೆ ಸ್ವಾಮಿ ವಿವೇಕಾನಂದರು ಧ್ಯಾನಸ್ಥರಾಗಿದ್ದ ಸ್ಥಳದಲ್ಲಿಯೇ ಮೋದಿ ಮಹಾ ತಪ್ಪಸ್ಸು ಮಾಡ್ತಿದ್ದಾರೆ ಅನ್ನೋದೇ ವಿಶೇಷ.

ಧ್ಯಾನದಲ್ಲಿ ಏನು ಸೇವನೆ ಮಾಡ್ತಾರೆ ಮೋದಿ..?
ನಿನ್ನೆ ಸಂಜೆ 6.45ರಿಂದ ಮೋದಿ ಅವರು ಧ್ಯಾನದಲ್ಲಿ ಕೂತಿದ್ದಾರೆ. ಧ್ಯಾನದ ಅವಧಿಯಲ್ಲಿ ಮೋದಿ ಅವರು ದ್ರವರೂಪದ ಆಹಾರ ಮಾತ್ರ ಸೇವನೆ ಮಾಡಲಿದ್ದಾರೆ. ಅಂದರೆ ಎಳೆನೀರು, ಗ್ರೇಪ್ಸ್​ ಜ್ಯೂಸ್ ಸೇರಿದಂತೆ ಇತರೆ ದ್ರವರೂಪದ ಆಹಾರ ಮಾತ್ರ ಸೇವನೆ ಮಾಡಲಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ:​IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

33 ವರ್ಷಗಳ ಹಿಂದೆ ಕನ್ಯಾಕುಮಾರಿಗೆ ಮೋದಿ ಭೇಟಿ
1991, ಡಿಸೆಂಬರ್ 11ರಂದು ಪ್ರಧಾನಿ ಮೋದಿ ಕನ್ಯಾಕುಮಾರಿಯಲ್ಲಿರೋ ಸ್ವಾಮಿ ವಿವೇಕಾನಂದ ಧ್ಯಾನ ಮಂಟಪಕ್ಕೆ ಭೇಟಿ ನೀಡಿದ್ರು. ಸದ್ಯ 33 ವರ್ಷಗಳ ಹಿಂದೆ ಮೋದಿ ಭೇಟಿ ವೇಳೆಯ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ..ಮುರಳಿ ಮನೋಹರ್ ಜೋಶಿ ಜೊತೆ ಮೋದಿ ಹೋಗಿದ್ದ ಹಳೇ ನೆನಪನ್ನ ಈ ಫೋಟೋ ತೆರೆದಿಟ್ಟಿದೆ.

ಸದ್ಯ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.. ಜೊತೆಗೆ 7 ನೇ ಹಂತದ ಅಂದ್ರೆ ಕೊನೆ ಹಂತದ ಲೋಕಸಭಾ ಚುನಾವಣಾ ಮತದಾನ ನಡೆಯಲಿದೆ.. ಅಲ್ಲದೇ ಜೂನ್​ 1ರಂದೇ ಮೋದಿ ಸ್ಪರ್ಧಿಸಿರುವ ವಾರಾಣಸಿ ಸೇರಿದಂತೆ ವಿವಿಧೆಡೆ ಮತದಾನ ನಡೆಯಲಿದೆ. ಈ ಅವಧಿಯಲ್ಲಿ ಮೋದಿ ಧ್ಯಾನ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಇಂಡಿಯಾ ಕೂಟ ತೀವ್ರವಾಗಿ ಟೀಕಿಸಿದೆ.. ಇತ್ತ ಡಿಎಂಕೆ, ಮೋದಿ ಧ್ಯಾನಕ್ಕೆ ನಿರ್ಬಂಧ ವಿಧಿಸುವಂತೆ ಕನ್ಯಾಕುಮಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಇದನ್ನೂ ಓದಿ:IPL ಫೈನಲ್​​ನಲ್ಲಿ ಶಾರುಖ್ ಖಾನ್ ಕಟ್ಟಿದ್ದ ವಾಚ್​​ಗೆ ಕೋಟಿ, ಕೋಟಿ ರೂಪಾಯಿ..

ಪ್ರಧಾನಿ ಮೋದಿ ಧ್ಯಾನಸಕ್ತರಾದ ಕನ್ಯಾಕುಮಾರಿಯಲ್ಲಿ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ.. ಪೊಲೀಸರು,ವಿವಿಧ ಭದ್ರತಾ ಏಜೆನ್ಸಿಗಳಿಂದ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.. ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯು ಕಡಲ ಗಡಿಗಳಲ್ಲಿ ಕಣ್ಗಾವಲು ಕಾಯುತ್ತಿವೆ.. ಅಲ್ಲದೇ ಇನ್ನೆರಡು ದಿನಗಳ ಕಾಲ ಕನ್ಯಾಕುಮಾರಿಯ ಕಡಲತೀರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ..
ಒಟ್ಟಾರೆ, ಮೋದಿ ಧ್ಯಾನ ಚುನಾವಣೆಗೋ? ಅಥವಾ ಲೋಕ ಕಲ್ಯಾಣಕ್ಕೋ? ಆದ್ರೆ, ಪ್ರಧಾನಿ ಮೋದಿ ಆಧ್ಯಾತ್ಮದ ಪ್ರಸಂಗವೇ ಸದ್ಯದ ಕೌತುಕ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ಯಾಕುಮಾರಿಯಲ್ಲಿ ನಮೋ ತಪಸ್ಸು.. 45 ಗಂಟೆಗಳ ಧ್ಯಾನದ ಅವಧಿಯಲ್ಲಿ ಮೋದಿ ಏನು ಸೇವನೆ ಮಾಡುತ್ತಾರೆ..?

https://newsfirstlive.com/wp-content/uploads/2024/05/MODI-13.jpg

Load More