newsfirstkannada.com

’ಎಷ್ಟು ವರ್ಷವಾದ್ರೂ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ’ ಎಂದ ಮೋದಿ.. ಅದಕ್ಕೆ ಅಸಲಿ ಕಾರಣ ಬಿಚ್ಚಿಟ್ರು!

Share :

Published February 5, 2024 at 7:40pm

    ಇಂದು ಎನ್​​ಡಿಎ ಸರ್ಕಾರದ ಕೊನೆ ಲೋಕಸಭಾ ಅಧಿವೇಶನ

    ಲೋಕಸಭೆಯಲ್ಲಿ ಪ್ರಧಾನಿ ಮೋದಿಯಿಂದ ಕೊನೆ ಭಾಷಣ..!

    ಕಾಂಗ್ರೆಸ್​​ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಮೋದಿ

ಇಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ತೀವ್ರ ಕೋಲಾಹಲ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ತನ್ನ ಸರ್ಕಾರದ ಕೊನೆಯ ಭಾಷಣ ಮಾಡಿದ್ರು. ಕಾಂಗ್ರೆಸ್​​ ವಿರುದ್ಧ ಸರಣಿ ದಾಳಿ ನಡೆಸಿದ ಮೋದಿ ನಿಮಗೆ ಒಳ್ಳೆಯ ವಿಪಕ್ಷವಾಗೋ ಅವಕಾಶ ಸಿಕ್ಕಿತ್ತು. ಆದ್ರೆ, 10 ವರ್ಷ ಕಳೆದರೂ ನೀವು ಏನು ಮಾಡಲಿಲ್ಲ. ಬೇರೆಯವರಿಗೂ ಕಾಂಗ್ರೆಸ್ ನಾಯಕರಾಗಲೂ ಬಿಡಲಿಲ್ಲ, ಯುವಕರಿಗೂ ಅವಕಾಶ ನೀಡಲಿಲ್ಲ ಎಂದು ಲೇವಡಿ ಮಾಡಿದ್ರು.

ದೇಶಕ್ಕೆ ಒಳ್ಳೆ ವಿರೋಧ ಪಕ್ಷ ಬೇಕು. ಕಾಂಗ್ರೆಸ್​​ನಲ್ಲಿ ಕುಟುಂಬ ರಾಜಕಾರಣ ವಿಪರೀತವಾಗಿದೆ. ಭಾರತವನ್ನು ಇನ್ನೂ ಎಷ್ಟು ವಿಭಜನೆ ಮಾಡುತ್ತೀರಿ. ನೀವು ಹೀಗೆ ಮಾಡಿದ್ರೆ ಮುಂದೆ ಕೂಡ ವಿರೋಧ ಪಕ್ಷಗಳ ಸ್ಥಾನದಲ್ಲೇ ಇರುತ್ತೀರಿ ಎಂದರು.

ಅಂಗಡಿಯನ್ನೇ ಮುಚ್ಚಿದ ಕಾಂಗ್ರೆಸ್​ ಎಂದ ಮೋದಿ

ಒಂದೇ ಕೆಲಸವನ್ನು ಎಷ್ಟು ಸಲ ಮಾಡುತ್ತೀರಿ. ಕಾಂಗ್ರೆಸ್​​ ತನ್ನ ಅಂಗಡಿಯನ್ನೇ ಮುಚ್ಚಿದೆ. ಇದಕ್ಕೆ ಕಾರಣ ರಾಹುಲ್​ ಗಾಂಧಿಯವರು. ಕುಟುಂಬ ರಾಜಕಾರಣ ಎಲ್ಲಿಯವರೆಗೂ ಇರುತ್ತೋ ಅಲ್ಲಿವರೆಗೂ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ. ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಹೊರಗೆ ಹಾಕಿದ್ದು ನನಗೆ ನೆನಪಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಎಷ್ಟು ವರ್ಷವಾದ್ರೂ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ’ ಎಂದ ಮೋದಿ.. ಅದಕ್ಕೆ ಅಸಲಿ ಕಾರಣ ಬಿಚ್ಚಿಟ್ರು!

https://newsfirstlive.com/wp-content/uploads/2024/02/Modi_Speech.jpg

Load More