newsfirstkannada.com

VIDEO: ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟ್ ಗೆದ್ದೇ ಗೆಲ್ಲುತ್ತೇವೆ​​.. ಹೇಗಿತ್ತು ಮೋದಿ ಭಾಷಣ?

Share :

Published February 5, 2024 at 6:09pm

Update February 5, 2024 at 6:28pm

  ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಮೋದಿ ಉತ್ತರ

  ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಕೌಂಟರ್‌

  ಬಿಜೆಪಿ ನೇತೃತ್ವದ 3ನೇ ಅವಧಿ ಅತಿ ದೊಡ್ಡ ತೀರ್ಮಾನಗಳ ಕಾಲ ಆಗಲಿದೆ

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. ಪ್ರಮುಖವಾಗಿ ಮುಂಬರುವ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದಿರುವ ನರೇಂದ್ರ ಮೋದಿ, ಎನ್‌ಡಿಎ ಒಕ್ಕೂಟಕ್ಕೆ 400ಕ್ಕಿಂತ ಹೆಚ್ಚು ಸೀಟು ಬರುತ್ತೆ. ಅದರಲ್ಲಿ ಬಿಜೆಪಿಗೆ 370ಕ್ಕಿಂತ ಹೆಚ್ಚು ಸೀಟು ಬರುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಭಾಷಣ ಮಾಡಿರುವ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ಕೊಟ್ಟರು. ಜೊತೆಗೆ ಬಿಜೆಪಿ ನೇತೃತ್ವದ 3ನೇ ಅವಧಿ ಅತಿ ದೊಡ್ಡ ತೀರ್ಮಾನಗಳ ಕಾಲವಾಗಲಿದೆ. ದೇಶವೂ ಮುಂದಿನ 100 ವರ್ಷದ ತನಕ ಸಮೃದ್ಧ, ಸಿದ್ದಿ ನೋಡಲಿದೆ. ಮುಂದಿನ ಒಂದು ಸಾವಿರ ವರ್ಷಕ್ಕೆ ಭದ್ರ ಅಡಿಪಾಯ ಹಾಕಲಿದ್ದೇವೆ. ನಮ್ಮ ದೇಶದ 140 ಕೋಟಿ ಜನರ ಸಾಮರ್ಥ್ಯದ ಮೇಲೆ ಅಪಾರ ಭರವಸೆ ಇದೆ. 10 ವರ್ಷದಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಬಡವರು, ಬಡತನವನ್ನು ಸೋಲಿಸಿ ತೋರಿಸಿದ್ದಾರೆ. 50 ಕೋಟಿ ಬಡವರ ಬಳಿ ಬ್ಯಾಂಕ್ ಖಾತೆ ಇದೆ. 4 ಕೋಟಿ ಬಡವರ ಬಳಿ ಪಕ್ಕಾ ಮನೆ ಇದೆ ಎಂದಿದ್ದಾರೆ.

ನರೇಂದ್ರ ಮೋದಿ ಭಾಷಣದ ಹೈಲೈಟ್ಸ್‌!
75ನೇ ಸ್ವಾತಂತ್ರ್ಯ ದಿನಾಚರಣೆ ಬಳಿಕ ಸಂಸತ್‌ನ ಹೊಸ ಭವನ, ಸೆಂಗೋಲ್ ಬಳಕೆ ಬಹಳ ಪ್ರಭಾವಿತವಾಗಿದೆ
ಹೊಸ ಸದನದಲ್ಲಿ ರಾಷ್ಟ್ರಪತಿ ಉಪಸ್ಥಿತಿಯಲ್ಲಿ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರಭಾವಿತವಾಗಿರುವ ದೃಶ್ಯ ಯಾವಾಗಲೂ ಇರುತ್ತೆ
ವಿಪಕ್ಷಗಳ ಭಾಷಣದಿಂದ ನನ್ನ ಹಾಗೂ ದೇಶದ ಜನರಲ್ಲಿ ಸ್ಪಷ್ಟವಾಗಿದೆ
ವಿಪಕ್ಷ ಸುದೀರ್ಘ ಅವಧಿಗೆ ವಿಪಕ್ಷದಲ್ಲಿ ಕುಳಿತುಕೊಳ್ಳುವ ಸಂಕಲ್ಪ ಮಾಡಿದ್ದಾರೆ ಅನ್ನೋದು
ಜನರು ನಿಮ್ಮ ಬಯಕೆಯನ್ನು ನಿಜವಾಗುವಂತೆ ಮಾಡ್ತಾರೆ
ದೇಶದ ಜನರು ನಿಮಗೆ ಆದಷ್ಟು ಬೇಗ ಆಶೀರ್ವಾದ ಮಾಡುತ್ತಾರೆ
ವಿರೋಧ ಪಕ್ಷಗಳು ಸುದೀರ್ಘ ಅವಧಿಗೆ ವಿಪಕ್ಷ ಸ್ಥಾನದಲ್ಲೇ ಇರುತ್ತೆ
ನಿಮ್ಮಲ್ಲಿ ಬಹಳಷ್ಟು ಜನರು ಈ ಬಾರಿಯೂ ಕ್ಷೇತ್ರ ಬದಲಾಯಿಸುವ ಆಸೆ ಹೊಂದಿದ್ದೀರಿ
ಬಹಳಷ್ಟು ಜನರು ಲೋಕಸಭೆ ಬಿಟ್ಟು ರಾಜ್ಯಸಭೆಗೆ ಹೋಗುವ ಯತ್ನ ಮಾಡುತ್ತಿದ್ದೀರಿ
ವಿಪಕ್ಷಗಳ ಇಂದಿನ ಸ್ಥಿತಿಯ ಅತಿದೊಡ್ಡ ದೋಷಿ ಕಾಂಗ್ರೆಸ್ ಪಕ್ಷ
ಹತ್ತು ವರ್ಷದಲ್ಲಿ ಕಾಂಗ್ರೆಸ್ ತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ಪೂರ್ತಿ ವಿಫಲ
ವಿಪಕ್ಷದಲ್ಲಿ ಪ್ರಬಲ ನಾಯಕರಾಗಿದ್ದರೂ ಜವಾಬ್ದಾರಿ ನೀಡಿಲ್ಲ
ಸದನದಲ್ಲಿ ಬಹಳ ಯುವ, ಉತ್ಸಾಹಿ ಸಂಸದರಿದ್ದಾರೆ. ಅವರು ಮಾತನಾಡಿದರೇ, ತಮ್ಮ ವರ್ಚಸ್ಸು ಕುಗ್ಗಿ ಹೋಗುತ್ತೆ
ದೇಶಕ್ಕೆ ಒಳ್ಳೆಯ ವಿಪಕ್ಷದ ಅಗತ್ಯ ಇದೆ. ಮುಂದಿನ ಭಾರಿ ಅವರು ಸದನದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿರುತ್ತಾರೆ
ನಮ್ಮ ಖರ್ಗೆಜೀ ಈ ಸದನದಿಂದ ರಾಜ್ಯಸಭೆಗೆ ಶಿಫ್ಟ್ ಆಗಿದ್ದಾರೆ. ಗುಲಾಂ ನಬಿ ಆಜಾದ್ ಪಕ್ಷದಿಂದಲೇ ಶಿಫ್ಟ್ ಆಗಿದ್ದಾರೆ
ಕಾಂಗ್ರೆಸ್ ಪಕ್ಷದ ಯುವ, ಉತ್ಸಾಹಿ ಸಂಸದರು ಮಾತನಾಡಿದ್ರೆ ಅವರಿಗೆ ಧಕ್ಕೆ ಆಗುತ್ತೆ
ಪಕ್ಷದ ಎಲ್ಲ ತೀರ್ಮಾನವನ್ನು ಪರಿವಾರ ತೆಗೆದುಕೊಳ್ಳುವುದೇ ಪರಿವಾರ ಪಾರ್ಟಿ
ಪರಿವಾರವೇ ಪಕ್ಷವನ್ನು ನಡೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ
ಒಂದೇ ಉತ್ಪನ್ನವನ್ನು ಪದೇ ಪದೇ ಲಾಂಚ್ ಮಾಡುವ ಪ್ರಯತ್ನ ನಡೆಯುತ್ತಿದೆ
ಕಾಂಗ್ರೆಸ್‌ನಲ್ಲಿ ಕ್ಯಾನ್ಸಲ್ ಸಂಸ್ಕೃತಿ ಬೆಳೆದಿದೆ. ಕ್ಯಾನ್ಸಲ್ ಸಂಸ್ಕೃತಿಯಲ್ಲಿ ಸಿಲುಕಿಕೊಂಡಿದೆ
ನಾವು ಮೇಕ್ ಇನ್ ಇಂಡಿಯಾ ಅಂದರೆ, ಕಾಂಗ್ರೆಸ್ ಕ್ಯಾನ್ಸಲ್ ಅನ್ನುತ್ತೆ
ನಾವು ವಂದೇ ಭಾರತ್ ಟ್ರೆೇನ್ ಅಂದರೇ, ಕಾಂಗ್ರೆಸ್ ಕ್ಯಾನ್ಸಲ್ ಅನ್ನುತ್ತೆ
ಇದರಿಂದ ಮೋದಿಗೆ ಉಪಯೋಗವಿಲ್ಲ, ದೇಶಕ್ಕೆ ಉಪಯೋಗ
ದೇಶದ ಸಾಧನೆಯನ್ನು ನೀವು ಕ್ಯಾನ್ಸಲ್ ಎಂದುಕೊಂಡು ಕುಳಿತಿದ್ದೀರಿ
ನಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಇದು ಮೋದಿಯ ಗ್ಯಾರಂಟಿ
ಕಾಂಗ್ರೆಸ್‌ನ ನಿಧಾನಗತಿಯ ಜೊತೆಗೆ ಯಾರೂ ಸ್ಪರ್ಧೆ ಮಾಡಲಾಗಲ್ಲ
ಬಡವರಿಗಾಗಿ 4 ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ
ನಗರದ ಬಡವರಿಗಾಗಿ 80 ಲಕ್ಷ ಪಕ್ಕಾ ಮನೆ ನಿರ್ಮಾಣ ಮಾಡಿದ್ದೇವೆ
ಕಾಂಗ್ರೆಸ್ ವೇಗದಲ್ಲಿ ಮನೆ ನಿರ್ಮಾಣ ಮಾಡಿದ್ದರೇ, ನೂರು ವರ್ಷ ಬೇಕಾಗುತ್ತಿತ್ತು
10 ವರ್ಷದಲ್ಲಿ 40 ಸಾವಿರ ಕಿಲೋಮೀಟರ್ ರೈಲ್ವೇ ಮಾರ್ಗ ವಿದ್ಯುದ್ದೀಕರಣ
ಕಾಂಗ್ರೆಸ್ ವೇಗದಲ್ಲಿ ಮಾಡಿದ್ದರೇ, 80 ವರ್ಷ ಬೇಕಾಗುತ್ತಿತ್ತು.
ನಾನು ಈಗ 10 ವರ್ಷದ ಲೆಕ್ಕ ನೀಡುತ್ತಿದ್ದೇನೆ
ಕಾಂಗ್ರೆಸ್ ದೇಶದ ಸಾಮರ್ಥ್ಯದ ಮೇಲೆ ವಿಶ್ವಾಸ ಇಟ್ಟಿಲ್ಲ
ನೆಹರು ಭಾರತೀಯರು ಸೋಮಾರಿಗಳು ಎಂದುಕೊಂಡಿದ್ದರು
ಇಂದಿರಾಗಾಂಧಿ ಆಲೋಚನೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ
ಇಂದಿರಾ ಗಾಂಧಿ ಆಗಸ್ಟ್ 15ರಂದು ಕೆಂಪುಕೋಟೆ ಭಾಷಣದಲ್ಲಿ ಹೇಳಿದ್ದರು
ಕಠಿಣತೆ ಬಂದಾಗ, ಇಡೀ ದೇಶ ಸೋಲು ಒಪ್ಪಿಕೊಳ್ಳುತ್ತೆ ಎಂದಿದ್ದರು
ಇಂದಿರಾಜೀ ದೇಶದ ಜನರ ಸಾಮರ್ಥ್ಯವನ್ನು ಸರಿಯಾಗಿ ಲೆಕ್ಕ ಹಾಕಲಿಲ್ಲ
ಆದರೆ ಕಾಂಗ್ರೆಸ್ ಸಾಮರ್ಥ್ಯವನ್ನು ಸರಿಯಾಗಿ ಲೆಕ್ಕ ಹಾಕಿದ್ದಾರೆ. ಇಂದು ಅದೇ ಆಲೋಚನೆ ಸಿಗುತ್ತಿದೆ.
ನೆಹರು ಬೇರೆ ದೇಶಗಳನ್ನು ಹೊಗಳಿದ್ದರು
ಕಾಂಗ್ರೆಸ್ ವಿಶ್ವಾಸ ಯಾವಾಗಲೂ ಒಂದೇ ಪರಿವಾರದ ಮೇಲಿದೆ
ನೆಹರು ಭಾರತೀಯರು ಚೀನಾ, ಅಮೆರಿಕನ್ನರಂತೆ ಕಷ್ಟಪಟ್ಟು ಕೆಲಸ ಮಾಡಲ್ಲ ಎಂದಿದ್ದರು
ಭಾರತೀಯರು ಕಷ್ಟ ಎದುರಿಸುವುದರಿಂದ ಓಡಿ ಹೋಗುತ್ತಾರೆ ಎಂದಿದ್ದರು
ಇಂಡಿಯಾ ಮೈತ್ರಿಕೂಟದ ಅಲೈನ್‌ಮೆಂಟ್‌ ತಪ್ಪಿ ಹೋಗಿದೆ
ಇವರ ರಕ್ತದಲ್ಲಿ ಒಬ್ಬರ ಮೇಲೆ ಮತ್ತೊಬ್ಬರಿಗೆ ವಿಶ್ವಾಸ ಇಲ್ಲವಾದರೇ, ದೇಶದ ಮೇಲೆ ಹೇಗೆ ವಿಶ್ವಾಸ ಇಡುತ್ತಾರೆ
ನಮಗೆ ದೇಶದ ಸಾಮರ್ಥ್ಯದ ಮೇಲೆ ಭರವಸೆ ಇದೆ
ದೇಶದ ಜನರ ಮೇಲೆ ಭರವಸೆ ಇದೆ
ಮೊದಲ ಅವಧಿಯಲ್ಲಿ ಯುಪಿಎ ತಪ್ಪುಗಳನ್ನು ಸರಿಪಡಿಸುವಲ್ಲಿ ಸಮಯ ಕಳೆಯಿತು
ಭಾರತವು ಅಮೃತ ಭಾರತ್, ನಮೋ ಭಾರತ್ ಟ್ರೇನ್‌ನಿಂದ ಭವಿಷ್ಯದ ಉನ್ನತಿಯ ಕನಸು ಕಾಣುತ್ತಿದೆ
ದೇಶದ ಕೋಟಿ ಕೋಟಿ ಜನರು ವಿಕಸಿತ ಭಾರತದ ಸಂಕಲ್ಪ ನೋಡಿದ್ದಾರೆ
ಭಗವಾನ್ ರಾಮ ತನ್ನ ಮನೆಗೆ ಮಾತ್ರ ಬಂದಿಲ್ಲ, ಭಾರತದ ಮಹಾನ್ ಸಾಂಸ್ಕೃತಿಕ ಪರಂಪರೆಗೆ ಹೊಸ ಶಕ್ತಿ ನೀಡಿದೆ
ನಮ್ಮ 3ನೇ ಅವಧಿಯೂ ಬಹಳ ದೂರವಿಲ್ಲ, ಹೆಚ್ಚೆಂದರೇ, 100-150 ದಿನ ಮಾತ್ರ ದೂರ ಇದೆ
ಅಬ್ ಕೀ ಬಾರ್ 400 ಪಾರ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಜೀ ಕೂಡ ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟ್ ಗೆದ್ದೇ ಗೆಲ್ಲುತ್ತೇವೆ​​.. ಹೇಗಿತ್ತು ಮೋದಿ ಭಾಷಣ?

https://newsfirstlive.com/wp-content/uploads/2024/02/Narendra-Modi-PM.jpg

Load More