newsfirstkannada.com

BREAKING: ಮೋದಿ ಪ್ರಮಾಣ ವಚನ ಸ್ವೀಕಾರ ದಿನಾಂಕ ದಿಢೀರ್ ಬದಲಾವಣೆ; ಕಾರಣವೇನು?

Share :

Published June 6, 2024 at 1:27pm

  ಎನ್‌ಡಿಎ ಮೈತ್ರಿಕೂಟದ ಸಭೆ ನಡೆಸಿದ ಬಳಿಕ ಮಹತ್ವದ ನಿರ್ಧಾರ

  ಮೋದಿ ಪ್ರಮಾಣ ವಚನ ಸ್ವೀಕಾರದ ದಿನಾಂಕ, ಸಮಯ ಮುಂದೂಡಿಕೆ

  ಎನ್‌ಡಿಎ ಸರ್ಕಾರದಲ್ಲಿ ಈ ಬಾರಿ ಪಾಲುದಾರ ಪಕ್ಷಗಳಿಗೆ ಅವಕಾಶ

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. NDA ನಾಯಕರಾಗಿ ಆಯ್ಕೆಯಾದ ಬಳಿಕ ಹಂಗಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಿನಾಂಕ ನಿಗಧಿಯಾಗಿತ್ತು. ಆದ್ರೆ ಮೋದಿ ಅವರ ಪ್ರಮಾಣ ವಚನ ಸ್ವೀಕಾರದ ದಿನಾಂಕ ಹಾಗೂ ಸಮಯ ಬದಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: VIDEO: ಕಟಕಟ್ ₹8,500 ಕೊಡಿ.. ಕಾಂಗ್ರೆಸ್ ಕಚೇರಿ ಮುಂದೆ ರಾಹುಲ್ ಗಾಂಧಿಗೆ ಮಹಿಳೆಯರ ಪಟ್ಟು! 

ಎನ್‌ಡಿಎ ಮೈತ್ರಿಕೂಟದ ಸಭೆ ನಡೆಸಿದ ಬಳಿಕ ಜೂನ್ 8 ಅಂದ್ರೆ ಶನಿವಾರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದ್ರೀಗ ಜೂನ್ 8ರ ಬದಲು ಜೂನ್ ‌9 ರಂದು ಅಂದ್ರೆ ಭಾನುವಾರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಮೋದಿ ಪ್ರಮಾಣ ವಚನ ಸ್ವೀಕಾರ ದಿನಾಂಕ ಬದಲಾವಣೆಗೆ ಹಲವು ಕಾರಣಗಳು ಕೇಳಿ ಬರುತ್ತಿದೆ. ಪ್ರಮುಖವಾಗಿ ಮೋದಿ ಅವರು ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದ ಗಣ್ಯರಿಗೆ ಭಾರತ ಆಹ್ವಾನ ನೀಡಿದೆ. ವಿದೇಶದಿಂದ ಹಲವು ದೇಶದ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಿರುವ ಸಾಧ್ಯತೆ ಇದೆ. ಭಾರತದ ಆಹ್ವಾನದ ಮೇರೆಗೆ ವಿದೇಶದಿಂದ ಗಣ್ಯರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

ಆ ವಿದೇಶಿ‌ ಗಣ್ಯರು ಆಗಮಿಸುವ ಸಾಧ್ಯತೆ

 • ಭೂತಾನ್ ರಾಜ ಜಿಗ್ಮೆ ಕೇಸರ್
 • ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ
 • ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ
 • ನೇಪಾಳದ ಪ್ರಧಾನಿ – ಪುಷ್ಪ ಕಮಲ್ ದಹಲ್
 • ಮಾರಿಷಸ್ ಪ್ರಧಾನಿ – ಪ್ರವಿಂದ್ ಕುಮಾರ್ ಜುಗ್ನಾಥ್

ಮೋದಿ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ಸಿದ್ಧತೆಗಳು ಆರಂಭವಾಗಿದೆ. ಕೊನೇ ಹಂತದ ಸಿದ್ಧತೆಗಳ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಮಯವನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ನರೇಂದ್ರ ಮೋದಿ ಅವರ ಜೊತೆ ಈ ಬಾರಿ ಎನ್‌ಡಿಎ ಮಿತ್ರಪಕ್ಷದ ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಕೇಂದ್ರ ಸಚಿವ ಸ್ಥಾನದ ಮಾತುಕತೆಯ ಹಿನ್ನೆಲೆಯಲ್ಲೂ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಮುಂದೂಡಿಕೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಣ್ಣಾಮಲೈ ಫೋಟೋ ಇಟ್ಟು ಮೇಕೆ ಕಡಿದ್ರಾ ಡಿಎಂಕೆ ಕಾರ್ಯಕರ್ತರು; ವಿಡಿಯೋ ನೋಡಿ! 

ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಹೊಸ ಸರ್ಕಾರ ರಚನೆಯ ಕುರಿತು ಮಹತ್ವದ ಚರ್ಚೆ ನಡೆಸುತ್ತಿದ್ದಾರೆ. ಎನ್‌ಡಿಎ ಸರ್ಕಾರದಲ್ಲಿ ಈ ಬಾರಿ ಪಾಲುದಾರ ಪಕ್ಷಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಆ ಬಳಿಕ ನೂತನ ಸರ್ಕಾರದ ಪ್ರಮಾಣ ವಚನದ ರೂಪುರೇಷೆ ತಿಳಿಸಲು ಎನ್‌ಡಿಎ ನಾಯಕರು ನಿರ್ಧರಿಸಿದ್ದಾರೆ. ಇಷ್ಟೆಲ್ಲಾ ಸಾಧ್ಯ ಸಾಧ್ಯತೆಗಳ ನಡುವೆ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ ಆಗಿರುವುದಕ್ಕೆ ಕಾರಣವೇನು ಅನ್ನೋ ಅಧಿಕೃತವಾಗಿ ಎನ್‌ಡಿಎ ನಾಯಕರು ಹೇಳಿಕೆ ನೀಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮೋದಿ ಪ್ರಮಾಣ ವಚನ ಸ್ವೀಕಾರ ದಿನಾಂಕ ದಿಢೀರ್ ಬದಲಾವಣೆ; ಕಾರಣವೇನು?

https://newsfirstlive.com/wp-content/uploads/2024/06/Narendra-Modi.jpg

Load More