newsfirstkannada.com

‘ಸುಧಾಕರ್​​, ಮಲ್ಲೇಶ್​ ಬಾಬುಗೆ ಮತ ನೀಡಿ ಗೆಲ್ಲಿಸಿ..’- ಪ್ರಧಾನಿ ನರೇಂದ್ರ ಮೋದಿ ಅಬ್ಬರ ಪ್ರಚಾರ 

Share :

Published April 20, 2024 at 5:10pm

    ಕರ್ನಾಟಕದಲ್ಲಿ ಕಾವೇರಿದ 2024ರ ಲೋಕಸಭಾ ಚುನಾವಣಾ ಕಣ

    ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರ!

    ಬಿಜೆಪಿ, ಜೆಡಿಎಸ್​ ಮೈತ್ರಿ ಅಭ್ಯರ್ಥಿಗಳಿಗೆ ವೋಟ್​ ಹಾಕಿ ಎಂದ ಮೋದಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ಆ ಬಳಿಕ ಕೆಂಪೇಗೌಡ ಇಂಟರ್ ​ನ್ಯಾಷನಲ್​ ಏರ್​ಪೋರ್ಟ್​ನಿಂದ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ತೆರಳಿದ ಬಳಿಕ ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಇನ್ನು, ವೇದಿಕೆ ಮೇಲೆ ಬಿಜೆಪಿ, ಜೆಡಿಎಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ, ಜೆಡಿಎಸ್​​ ಮೈತ್ರಿ ಅಭ್ಯರ್ಥಿಗಳಾದ ಮಲ್ಲೇಶ್​ ಬಾಬು, ಡಾ.ಕೆ ಸುಧಾಕರ್ ಪರ ಮತಬೇಟೆ ನಡೆಸಿದ್ರು.

ಕರ್ನಾಟಕದ ಬಗ್ಗೆ ದೇವೇಗೌಡ ಅವರಿಗೆ ಬಹಳ ಕಾಳಜಿ. ನನಗೂ ದೇವೇಗೌಡ್ರ ಆಶೀರ್ವಾದ ಸಿಕ್ಕಿದೆ. ಎನ್​ಐಡಿಐಎ ಒಕ್ಕೂಟ ಇದೆ, ಆದ್ರೆ ಭವಿಷ್ಯದ ಲೀಡರ್​ ಇಲ್ಲ. ವಿರೋಧ ಪಕ್ಷಗಳು ಕೇವಲ ಭ್ರಷ್ಟಾಚಾರ. ಕೋಲಾ, ಚಿಕ್ಕಬಳ್ಳಾಪುರದ ಜನ ಮೊತ್ತೊಮ್ಮೆ ಮೋದಿ ಸರ್ಕಾರ ಎಂದು ಸಂದೇಶ ಕೊಡಬೇಕಿದೆ ಎಂದರು.

ನಿಮಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಗ್ಯಾರಂಟಿ ಜೊತೆಗೆ ನಿಮ್ಮ ಮುಂದೆ ಬಂದಿದ್ದೇನೆ. ಎರಡು ಜಿಲ್ಲೆಗಳಿಗೂ ಉಚಿತ ರೇಷನ್​ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲೇ ಸುಮಾರು 4 ಲಕ್ಷ ಆಯುಷ್ಮಾನ್​​ ಫಲಾನುಭವಿಗಳು ಇದ್ದಾರೆ ಎಂದರು.

70 ವರ್ಷ ದಾಟಿದ 5‌ ಲಕ್ಷ ಮಂದಿಗೆ ಉಚಿತ ಚಿಕಿತ್ಸೆ, ಚಿಕ್ಕಬಳ್ಳಾಪುರದಲ್ಲಿ 14,000 ಮತ್ತು ಕೋಲಾರದಲ್ಲಿ 20,000 ಮಂದಿಗೆ ಮನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುತ್ತದೆ. ಇದುವೇ ಮೋದಿ ಗ್ಯಾರಂಟಿ ಎಂದರು.

ಇದನ್ನೂ ಓದಿ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಕೊಲೆ ಕೇಸ್​​; ಹತ್ಯೆ ಖಂಡಿಸಿದ ನಟ ರಿಷಬ್​ ಶೆಟ್ಟಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸುಧಾಕರ್​​, ಮಲ್ಲೇಶ್​ ಬಾಬುಗೆ ಮತ ನೀಡಿ ಗೆಲ್ಲಿಸಿ..’- ಪ್ರಧಾನಿ ನರೇಂದ್ರ ಮೋದಿ ಅಬ್ಬರ ಪ್ರಚಾರ 

https://newsfirstlive.com/wp-content/uploads/2024/04/Modi-7.jpg

Load More