/newsfirstlive-kannada/media/post_attachments/wp-content/uploads/2025/02/Nasa-SUNITA-WILLIAMS.jpg)
ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿಲ್ಲ.
ಸತತ ಹಲವು ಪ್ರಯತ್ನಗಳ ಬಳಿಕ ನಾಸಾ ಕೊನೆಗೂ ಸಿಹಿ ಸುದ್ದಿಯನ್ನ ನೀಡಿದೆ. ಸುನೀತಾ ಹಾಗೂ ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶದಿಂದ ವಾಪಸ್ ಕರೆದುಕೊಂಡು ಬರುವ ದಿನಾಂಕ ನಿಗದಿ ಮಾಡಲಾಗಿದೆ. ಅಂದುಕೊಂಡಕ್ಕೂ ಮೊದಲೇ ಗಗನಯಾತ್ರಿಗಳನ್ನು ಕರೆದುಕೊಂಡು ಬರುವ ಭರವಸೆ ನೀಡಲಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುನೀತಾ ಹಾಗೂ ಬುಚ್ ವಿಲ್ಮೋರ್ ಅವರು ವಾಪಸ್ ಕರೆತರುವಂತೆ ನಾಸಾಗೆ ಸೂಚಿಸಿದ್ದರು. ಟ್ರಂಪ್ ಆದೇಶದ ಬಳಿಕ ನಾಸಾ Crew-10 ಮೂಲಕ ಗಗನಯಾತ್ರಿಗಳನ್ನು ಕರೆತರಲು ಮುಂದಾಗಿದೆ.
ಇದನ್ನೂ ಓದಿ: ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA
ಸದ್ಯದ ನಾಸಾದ ಮಾಹಿತಿ ಪ್ರಕಾರ ಮಾರ್ಚ್ 12ರಂದು Crew-10 ಗಗನಕ್ಕೆ ಲಾಂಚ್ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ 25ರ ಒಳಗೆ ಸುನಿತಾ ವಿಲಿಯಮ್ಸ್ ಅವರನ್ನು ವಾಪಸ್ ಕರೆದುಕೊಂಡು ಬರಲಾಗುತ್ತಿದೆ.
ಎಂಟು ದಿನದ ಮಿಷನ್ಗಾಗಿ ಬೋಯಿಂಗ್ ಸ್ಟರ್ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ತೊಂದರೆಗಳಿಂದ ವಾಪಸ್ ಬರಲು ಆಗಲಿಲ್ಲ. ಹಲವು ತಿಂಗಳುಗಳ ಕಾಲ ನಡೆದ ಅನೇಕ ಬೆಳವಣಿಗೆಗಳ ಬಳಿಕ ನಾಸಾ ಸ್ಪೇಸ್ ಎಕ್ಸ್ ಡ್ರಾಗನ್ ಕ್ಯಾಪ್ಸುಲ್ ಮೂಲಕ ಫೆಬ್ರವರಿಯಲ್ಲಿ ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರು ಸ್ಪೇಸ್ X ಸಹಯೋಗದೊಂದಿಗೆ ಮಾರ್ಚ್ 25ರ ಒಳಗೆ ಸುನಿತಾ ವಿಲಿಯಮ್ಸ್ ಸೇಫ್ ಲ್ಯಾಂಡ್ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ