ಆಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಕರ್ತವ್ಯ ಮರೆಯದ ಸುನೀತಾ ವಿಲಿಯಮ್ಸ್; ಮತದಾನ ಹೇಗೆ ಮಾಡ್ತಿದ್ದಾರೆ ಗೊತ್ತಾ?

author-image
Ganesh
Updated On
ಆಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಕರ್ತವ್ಯ ಮರೆಯದ ಸುನೀತಾ ವಿಲಿಯಮ್ಸ್; ಮತದಾನ ಹೇಗೆ ಮಾಡ್ತಿದ್ದಾರೆ ಗೊತ್ತಾ?
Advertisment
  • ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಮತದಾನ
  • ಕಮಲಾ ಹ್ಯಾರಿಸ್, ಟ್ರಂಪ್ ನಡುವೆ ನೆಕ್​ ಟು ನೆಕ್​ ಫೈಟ್
  • ಅಧ್ಯಕ್ಷ ಯಾರೆಂಬ ಚಿತ್ರಣ ಡಿಸೆಂಬರ್​ 10ಕ್ಕೆ ಬಯಲು

ಇಡೀ ಜಗತ್ತೇ ಕಾತುರದಿಂದ ನಿರೀಕ್ಷಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಈಗ ನಿರ್ಣಾಯಕ ಘಟ್ಟ ತಲುಪಿದೆ. ಅಮೆರಿಕದ 47ನೇ ಅಧ್ಯಕ್ಷರು ಯಾರು ಎಂಬ ಮಾತು ಜೋರಾಗಿದೆ. ವಿಶ್ವದ ದೊಡ್ಡಣ್ಣನ ಆಡಳಿತ ಯಾರ ಕೈಯಲ್ಲಿರಲಿದೆ ಅನ್ನೋ ರಿಸಲ್ಟ್​ ಜನವರಿಯಲ್ಲಿ ಗೊತ್ತಾಗಲಿದೆ.

ಹ್ಯಾರಿಸ್-ಟ್ರಂಪ್ ನಡುವೆ ನೆಕ್​ ಟು ನೆಕ್​ ಫೈಟ್​
ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಯುಎಸ್‌ನಲ್ಲಿ ಭಾರತಕ್ಕಿಂತ ಭಿನ್ನ ಸ್ವರೂಪದಲ್ಲಿ ಚುನಾವಣೆ ನಡೆಯುತ್ತೆ. ದೇಶದುದ್ದಕ್ಕೂ ಐವತ್ತೊಂದು ಪ್ರತ್ಯೇಕ ಚುನಾವಣೆ ನಡೆಯುತ್ತಿದ್ದು, ಪ್ರತಿ ರಾಜ್ಯದಲ್ಲೂ ಒಂದೊಂದು ನಿಯಮಗಳಿವೆ. ಡೆಮಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಅವರ ಎದುರಾಳಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಗೆಲುವು ಯಾರಿಗೆ ಒಲಿಯಲಿದೆ ಎಂಬುದರ ಅಂದಾಜು ಚಿತ್ರಣ ಸಿಗಲು ಜನವರಿವರೆಗೆ ಕಾಯಬೇಕಿದೆ.

ಇದನ್ನೂ ಓದಿ:ನಟಿ ಮಾನಸಾ ಮನೋಹರ್ ಮನೆಯಲ್ಲಿ ಮದುವೆ ಸಂಭ್ರಮ.. ಫೋಟೋಸ್ ಇಲ್ಲಿವೆ!

publive-image

2 ಮಿಲಿಯನ್ ಮಂದಿಯಿಂದ ಮತದಾನ
ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ಈಗಾಗಲೇ ಅಂಚೆ ಮತದಾನ ಮುಕ್ತಾಯವಾಗಿದೆ. ಅದರಲ್ಲಿ 82 ಮಿಲಿಯನ್ ಮಂದಿ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ ಎಂದು ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿರುವ ಎಲೆಕ್ಷನ್ ಲ್ಯಾಬ್ ವರದಿಯಲ್ಲಿ ಹೇಳಲಾಗಿದೆ.

ಸರ್ವೆಗಳಲ್ಲಿ ಟ್ರಂಪ್​ ಮುಂದು
ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಆ್ಯರಿಝೋನಾ, ನಾರ್ತ್ ಕರೊಲಿನಾದಲ್ಲಿ ನಡೆಯುವ ಮತದಾನ ಅತ್ಯಂತ ಮಹತ್ವದ್ದು ಎಂದು ಹೇಳಲಾಗಿದೆ. ಈ ರಾಜ್ಯಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಬರುತ್ತೋ ಅವರಿಗೆ ಅಧ್ಯಕ್ಷೀಯ ಪದವಿಗೆ ಸನಿಹವಾಗ್ತಾರೆಂಬ ಮಾತು ಇಂದು-ನಿನ್ನೆಯದಲ್ಲ. ಈ ರಾಜ್ಯಗಳಲ್ಲಿ ಮತದಾನ ಪೂರ್ವ ಸಮೀಕ್ಷೆಯನ್ನು ನಡೆಸಲಾಗಿದ್ದು, ಅವುಗಳಲ್ಲಿ ಶೇಕಡ 47ಕ್ಕೂ ಹೆಚ್ಚು ಮಂದಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್​ಗೆ ನಮ್ಮ ಮತ ಎಂದಿದ್ದಾರೆ.

ಬಾಹ್ಯಾಕಾಶದಿಂದಲೇ ವೋಟ್ ಮಾಡಲಿರುವ ಸುನಿತಾ ವಿಲಿಯಮ್ಸ್
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತವಾಗಬಾರದು ಎಂಬ ದೃಢ ಸಂಕಲ್ಪ ಅಲ್ಲಿನ ಆಡಳಿತಕ್ಕಿದೆ. ಹಾಗಿಯೇ ಬಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್​ಗಾಗಿ ಅಮೆರಿಕದ ನಾಸಾ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ತಮ್ಮ ಮತ ಚಲಾಯಿಸಲಿದ್ದಾರೆ.

ಇದನ್ನೂ ಓದಿ:US Elections; ಇಂದು ಅಮೆರಿಕದಲ್ಲಿ ಮತದಾನ..​​ ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಫೈಟ್, ಗೆಲ್ಲುವುದು ಯಾರು?

publive-image

ಅಮೆರಿಕದ ದೇವಾಲಯಗಳಲ್ಲಿ ಭಾರತೀಯರ ಪೂಜೆ
ಒಂದು ಕಡೆ ಅಮೆರಿಕದ ನಾನಾ ನಗರಗಳಲ್ಲಿ ಐತಿಹಾಸಿಕ ಎನಿಸಿರುವ ಅಮೆರಿಕ ಚುನಾವಣೆಗಾಗಿ ಮತದಾನ ನಡೆಯುತ್ತಿದೆ. ಮತ್ತೊಂದು ಕಡೆ, ಅಮೆರಿಕದ ದೇವಸ್ಥಾನಗಳಲ್ಲಿ ಭಾರತೀಯರು ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ. ಟ್ರಂಪ್ ಅಭಿಮಾನಿಗಳು ಹಾಗೂ ಕಮಲಾ ಹ್ಯಾರಿಸ್ ಅವರ ಅಭಿಮಾನಿಗಳು ತಮ್ಮಿಷ್ಟದ ವ್ಯಕ್ತಿಗಳು ಈ ಚುನಾವಣೆಯಲ್ಲಿ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಷೇರು ಮಾರುಕಟ್ಟೆ ಏರಿಕೆ
ಅತ್ತ ಅಮೆರಿಕದ ಮಂದಿ ತಮ್ಮ ನೆಚ್ಚಿನ ವ್ಯಕ್ತಿಯನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ವೋಟ್ ಹಾಕುತ್ತಿದ್ದರೆ, ಇತ್ತ, ಷೇರು ಮಾರುಕಟ್ಟೆಯಲ್ಲಿ ಅಮೆರಿಕದ ಕಂಪನಿಯ ಷೇರುಗಳ ಮೌಲ್ಯದಲ್ಲಿ ಭಾರೀ ಏರಿಕೆಯಾಗಿದೆ. ಆದರೆ, ಡಾಲರ್ ಮೌಲ್ಯ ಅಲ್ಪ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

ಟ್ರಂಪ್ ದಂಪತಿ ಮತದಾನ
ಫ್ಲೋರಿಡಾದ ಪಾಮ್ ಬೀಚ್ ನಲ್ಲಿ ಟ್ರಂಪ್ ಹಾಗೂ ಅವರ ಪತ್ನಿ ಮಲೇನಿಯಾ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಮತದಾನದ ರಿಸಲ್ಟ್​ ಪ್ರಕಟಕ್ಕೆ ಡಿಸೆಂಬರ್ 10, ಡೆಡ್‌ಲೈನ್ ಆಗಿದೆ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿದ್ರೆ ಮರು ಎಣಿಕೆಯೂ ಆಗಲಿದೆ. ಇಷ್ಟೆಲ್ಲಾ ಆದ್ಮೇಲೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ:USElection2024: ಹ್ಯಾರಿಸ್​-ಟ್ರಂಪ್ ನೇರಾನೇರ ಹಣಾಹಣಿ.. ಒಂದು ವೇಳೆ ಅಮೆರಿಕಾ ಫಲಿತಾಂಶ ಟೈ ಆದ್ರೆ ಮುಂದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment