/newsfirstlive-kannada/media/post_attachments/wp-content/uploads/2025/06/KLB_NASA_STUDENT.jpg)
ಕಲಬುರಗಿ: ರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಆಹ್ವಾನದ ಮೇರೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಸಹಾಯಕ ಮೋಯಿನ್ ಖಾಜಿ ಅವರ ಪುತ್ರಿ ಕುಮಾರಿ ಜೈಶಾ ಫಾಲಕ್ ಅವರು ಅಮೆರಿಕದಲ್ಲಿ ನಡೆಯುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನ -2025 (ಐಎಸ್‌ಡಿಸಿ)ರಲ್ಲಿ ಭಾಗವಹಿಸಲು ಆಯ್ಕೆ ಆಗಿದ್ದಾರೆ.
ಫ್ಲೋರಿಡಾದ ಓರ್ಲಾಂಡೋದಲ್ಲಿ ಜೂನ್ 19 ರಿಂದ 22ರ ವರೆಗೆ ಈ ಸಮ್ಮೇಳನ ನಡೆಯಲಿದೆ. ನಗರದ ಎಸ್ಆರ್ಎನ್ ಮೆಹತಾ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಜೈಶಾ ಫಾಲಕ್ ಐಆರ್‌ಎ ಎಂಬ ಯೋಜನೆಯ ಮೂಲಕ ಮಾರ್ಸ್ ಆಧಾರಿತ ಸ್ಪೇಸ್ ಕಾಲೋನಿ ನಿರ್ಮಾಣದ ದೃಷ್ಟಿಯನ್ನು ಪ್ರಸ್ತುತಪಡಿಸಿದ್ದು, ‘ಜಾಗತಿಕ ಸ್ಪೇಸ್ ಡಿಸೈನ್’ ಸ್ಪರ್ಧೆ ಇದಾಗಿದೆ. ಇದು ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಮಹತ್ವಪೂರ್ಣ ಸಾಧನೆಯಾಗಿದೆ.
ಇದನ್ನೂ ಓದಿ: ಭಾರತ- ಕೆನಡಾ ಮತ್ತೆ ದೋಸ್ತಿ, ಅಮೆರಿಕಾಕ್ಕೆ ಕರೆದರೂ ಬರಲ್ಲ ಎಂದ ಪ್ರಧಾನಿ ಮೋದಿ!!
ವಿದ್ಯಾರ್ಥಿಗಳ ಇಂತಹ ಸಾಧನೆಗಳು ನಮ್ಮ ಯುವ ಪೀಳಿಗೆಗೆ ಪ್ರೇರಣೆಯಾದರೂ, ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟಿಸುವುದರಲ್ಲಿ ಸಹಕಾರಿಯಾಗಲಿವೆ ಎಂದು ಮೆಹತಾ ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ. ಜೈಶಾ ಹೈದರಾಬಾದ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 18 ರಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ