newsfirstkannada.com

ಸುನೀತಾ ವಿಲಿಯಮ್ಸ್​​ ವಾಪಸಾತಿ ಸದ್ಯ ಭಾರೀ ಅಪಾಯಕಾರಿ.. ನಾಸಾದಿಂದ ಅಚ್ಚರಿಯ ಹೇಳಿಕೆ!

Share :

Published August 25, 2024 at 6:56am

Update September 3, 2024 at 6:07am

    ಬಾಹ್ಯಾಕಾಶಕ್ಕೆ ತೆರಳಿ ಎರಡು ತಿಂಗಳುಗಳೇ ಕಳೆದಿವೆ

    ಗಗನಯಾತ್ರಿಯನ್ನು ಕರೆತರಲು ತಲೆಕೆಡಿಸಿಕೊಂಡಿರುವ ನಾಸಾ

    ಇಬ್ಬರು ಗಗನಯಾತ್ರಿಗಳನ್ನು ಬಚಾವ್​ ಮಾಡ್ತಾರಾ ಎಲೋನ್​​ ಮಸ್ಕ್​

ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​​ ಬಗ್ಗೆ ನಾಸಾ ತಲೆಕೆಡಿಸಿಕೊಂಡಿದೆ. ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಈ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಭಾರೀ ಸರ್ಕಸ್​​ ಮಾಡುತ್ತಿದೆ.

ಒಂದು ವಾರದ ಯೋಜನೆಯಂತೆ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ದೋಷದಿಂದ ಹಿಂತಿರುಗಲು ಸಾಧ್ಯವಾಗದೆ ಇಬ್ಬರು ಅಲ್ಲೇ ಉಳಿದಿದ್ದಾರೆ. ಸದ್ಯ ಅವರಿಬ್ಬರು ಬಾಹ್ಯಾ ಕಾಶಕ್ಕೆ ಹೋಗಿ 2 ತಿಂಗಳುಗಳೇ ಕಳೆದಿವೆ. ಸುನೀತಾ ವಿಲಿಯಮ್ಸ್​​ ಮತ್ತು ಬುಚ್​ ವಿಲ್ಮೋರ್​ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತಿದೆ.

ಇದೀಗ ಅವರನ್ನು ನಾಸಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಕರೆತರುವುದಾಗಿ ತಿಳಿದಿದೆ. ಶನಿವಾರದಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಎಲೋನ್​ ಮಸ್ಕ್ ಸ್ಪೇಸ್​ ಎಕ್ಸ್​​ ಕ್ರೂ ಡ್ರ್ಯಾಗನ್​​​ ಕ್ಯಾಪ್ಸುಲ್​ನಲ್ಲಿ ಹಿಂತಿರುಗಲಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಸಾಫ್ಟ್​ ಡ್ರಿಂಕ್ಸ್​ ಕುಡಿಯೋರೇ ಎಚ್ಚರ! ಬೆಚ್ಚಿಬೀಳಿಸೋ ಮಾಹಿತಿ ಬಿಚ್ಚಿಟ್ಟ ಆರೋಗ್ಯ ತಜ್ಞರು

ಸದ್ಯ ಸುನೀತಾ ಮತ್ತು ಬುಚ್​ ಇಬ್ಬರು ಸಂಶೋಧನೆ, ನಿರ್ವಹಣೆ ಮತ್ತು ಸಿಸ್ಟಮ್​​​ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಸಾ ಅವರನ್ನು ಆದಷ್ಟು ಬೇಗ ಕರೆತರಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: 26 KG ಚಿನ್ನದ ಆಭರಣ ಕದ್ದ ಬ್ಯಾಂಕ್​ ಮ್ಯಾನೇಜರ್​.. ಗ್ರಾಹಕರ ಬಂಗಾರ ಗೋವಿಂದ ಗೋವಿಂದ

ನಾಸಾ ನಿರ್ವಾಹಕ ಬಿಲ್​ ನೆಲ್ಸನ್​​ ಈ ಬಗ್ಗೆ ಮಾತನಾಡಿದ್ದು, ‘ಬಾಹ್ಯಾಕಾಶ ಹಾರಾಟವು ಅಪಾಯಕಾರಿಯಾಗಿದೆ. ಸುನೀತಾ ವಿಲಿಯಮ್ಸ್​ ಅವರನ್ನು ಭೂಮಿಗೆ ಸುರಕ್ಷಿತವಾಗಿ ತರುವುದೇ ದೊಡ್ಡ ಫಲಿತಾಂಶವಾಗಿದೆ’ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ನಾಸಾ ಮತ್ತು ಬೋಯಿಂಗ್​​ ಕಠಿಣ ಶ್ರಮಕ್ಕೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುನೀತಾ ವಿಲಿಯಮ್ಸ್​​ ವಾಪಸಾತಿ ಸದ್ಯ ಭಾರೀ ಅಪಾಯಕಾರಿ.. ನಾಸಾದಿಂದ ಅಚ್ಚರಿಯ ಹೇಳಿಕೆ!

https://newsfirstlive.com/wp-content/uploads/2024/08/SUNITA-5.jpg

Load More