VIDEO: ಬಾಹ್ಯಾಕಾಶದಲ್ಲಿ ಈಗ ಲೀಕೇಜ್‌ ಭಯ.. ಸುನೀತಾ ವಿಲಿಯಮ್ಸ್‌ ಕರೆತರಲು ನಾಸಾ ಮಾಡ್ತಿರೋದೇನು?

author-image
admin
Updated On
VIDEO: ಬಾಹ್ಯಾಕಾಶದಲ್ಲಿ ಈಗ ಲೀಕೇಜ್‌ ಭಯ.. ಸುನೀತಾ ವಿಲಿಯಮ್ಸ್‌ ಕರೆತರಲು ನಾಸಾ ಮಾಡ್ತಿರೋದೇನು?
Advertisment
  • ಏರ್‌ ಲಾಕ್‌ ಸಿಸ್ಟಮ್‌ನಲ್ಲಿ ಲೀಕೇಜ್ ಕಂಡು ಬಂದಿರೋದು ನಿಜ
  • ಡೆಡ್‌ಲೈನ್‌ ಒಳಗೆ ಸುನೀತಾ ವಿಲಿಯಮ್ಸ್‌ ವಾಪಸ್ ಬರಬಹುದಾ?
  • ಇಸ್ರೋ ಉಪ ನಿರ್ದೇಶಕ ಎಸ್.ವಿ ಶರ್ಮಾ ಅವರಿಂದ ಮಾಹಿತಿ

ಬೆಂಗಳೂರು: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರನ್ನ ಸುರಕ್ಷಿತವಾಗಿ ಕರೆತರಲು ನಾಸಾ ಶತಪ್ರಯತ್ನಗಳನ್ನ ಮಾಡುತ್ತಿದೆ. ಸದ್ಯ ಸುನೀತಾ ವಿಲಿಯಮ್ಸ್ ಎದುರಿಸುತ್ತಿರುವ ಸವಾಲುಗಳೇನು? ಗಗನಯಾತ್ರಿಗಳನ್ನ ವಾಪಸ್ ಕರೆತರಲು ಯಾಕೆ ಕಷ್ಟವಾಗುತ್ತಿದೆ. ನಾಸಾ ಮುಂದೇನು ಮಾಡಬೇಕು ಅನ್ನೋ ಮಹತ್ವದ ಅಂಶಗಳ ಬಗ್ಗೆ ಇಸ್ರೋ ಉಪ ನಿರ್ದೇಶಕರಾದ ಡಾ. ಎಸ್.ವಿ ಶರ್ಮಾ ಅವರ ಮಾತನಾಡಿದ್ದಾರೆ.

ಇದನ್ನೂ ಓದಿ: ವಿಪರೀತ ತೂಕನಷ್ಟ; ಸಣಕಲು ಕಡ್ಡಿಯಾದ ಸುನೀತಾ ವಿಲಿಯಮ್ಸ್‌; ಇವ್ರ ಆರೋಗ್ಯ ಹೇಗಿದೆ? 

ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ಡಾ. ಎಸ್‌.ವಿ ಶರ್ಮಾ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್‌ ಅವರಿಗೆ ಖಂಡಿತವಾಗಿಯೂ ಯಾವುದೇ ಜೀವ ಭಯ ಇಲ್ಲ. ಆದರೆ ಹೋದ ಉದ್ದೇಶ ಈಡೇರಿಕೆ ಆಗುತ್ತಿಲ್ಲ ಅನ್ನೋ ಚಿಂತೆ ಅವರಲ್ಲಿದೆ. ಗಗನಯಾತ್ರಿಗಳ ಸ್ಪೆಸ್ ಸೂಟ್ ತುಂಬಾ ಚೆನ್ನಾಗಿದೆ. ಅಲ್ಲಿ ಇನ್ನಷ್ಟು ದಿನ ಅವರು ಇರೋದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಯುರೇನಿಯಂ, ಆಕ್ಸಿಜನ್ ಲೀಕೇಜ್‌ನ ಬಗ್ಗೆ ನಾಸಾ ಹಾಗೂ ರಷ್ಯಾ ಬಹಳಷ್ಟು ಅಧ್ಯಯನ ಮಾಡುತ್ತಿದೆ. ಗಗನಯಾತ್ರಿಗಳ ಸೂಟ್‌ನ ಬಿಡಿ ಭಾಗಗಳು ಬದಲಾವಣೆ ಮಾಡಬೇಕಿದೆ. ಔಟ್‌ ಡೇಟೇಡ್ ಆಗಿರೋದನ್ನ ಬದಲಾವಣೆ ಮಾಡುವುದು ಸಿಕ್ಕಾಪಟ್ಟೆ ದುಬಾರಿ ಕೆಲಸ. ಏರ್‌ ಲಾಕ್‌ ಸಿಸ್ಟಮ್‌ನಲ್ಲಿ ಲೀಕೇಜ್ ಕಂಡು ಬರುತ್ತಿದ್ದು ಅದನ್ನ ಸರಿಪಡಿಸಬೇಕು ಎಂದು ಡಾ. ಎಸ್.ವಿ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.

ಡೆಡ್‌ಲೈನ್‌ ಒಳಗೆ ವಾಪಸ್ ಆಗಬಹುದಾ?
ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳನ್ನ ಕರೆತರುವ ಸಾಹಸದಲ್ಲಿ ನಾಸಾ ಜೊತೆ ರಷ್ಯಾ ಕೂಡ ಕೈ ಜೋಡಿಸಿದೆ. ಲೀಕೇಜ್ ಸಮಸ್ಯೆಯ ಬಳಿಕ ಮುಂದಿನ ಹೆಜ್ಜೆ ಇಡಲು ನಾಸಾ ಈಗಾಗಲೇ ತಯಾರಿ ನಡೆಸಿದೆ. 2025ರ ಜನವರಿ ಒಳಗೆ ಸುನೀತಾ ವಿಲಿಯಮ್ಸ್ ಅವರನ್ನ ಕರೆತರಲು ನಾಸಾ ತಯಾರಿ ನಡೆಸಿದೆ. 2025ರ ಫೆಬ್ರವರಿ 15 ಸುನೀತಾ ವಿಲಿಯಮ್ಸ್‌ರನ್ನ ಕರೆತರಲು ಡೆಡ್ ಲೈನ್ ಆಗಿದ್ದು ಅಷ್ಟರ ಒಳಗೆ ವಾಪಸ್ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment