Advertisment

ಅಯ್ಯೋ.. ತಾಂತ್ರಿಕ ದೋಷ, ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ವಿಲಿಯಮ್ಸ್; ಮುಂದೇನು ಕತೆ?

author-image
AS Harshith
Updated On
ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್​ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!
Advertisment
  • ಬಾಹ್ಯಾಕಾಶ ನೌಕೆಯಲ್ಲಿ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆ
  • ಯಾವಾಗ ಭೂಮಿಗೆ ವಾಪಸಾತಿ? ಯಾವಾಗ ಸರಿಯಾಗುತ್ತೆ?
  • ನೌಕೆಯಲ್ಲಿರುವ ಇಂಧನ 45 ದಿನಗಳಿಗೆ ಸಾಕಾಗುತ್ತೆ.. ಮುಂದೇನು ಕತೆ?

ಸುನೀತಾ ವಿಲಿಯಮ್ಸ್​. ಈ ಹೆಸರು ಇಡೀ ವಿಶ್ವಕ್ಕೆ ಮಾತ್ರವಲ್ಲ, ಭೂಮಂಡಲದ ಹೊರಗೂ ಸದ್ದು ಮಾಡಿದೆ. ಬಾಹ್ಯಾಕಾಶ ಗಗನ ಯಾತ್ರಿಗಳಲ್ಲಿ ತಮ್ಮದೇ ಅಧ್ಯಾಯ ಸೃಷ್ಟಿಸಿರೋ ಸುನೀತಾ ವಿಲಿಯಮ್ಸ್​ ಈಗ ಅದೇ ಬಾಹ್ಯಾಕಾಶದಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಭೂಮಿಗೆ ಮರಳಿ ಬಾರದಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

Advertisment

ತಾಂತ್ರಿಕ ಸಮಸ್ಯೆ ಸಂಕಷ್ಟ.. ಮುಂದೇನು ಎಂಬ ಆತಂಕ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇಲ್ಲಿಗೆ ನಾಸಾ ತನ್ನ ಗಗನಯಾತ್ರಿಗಳನ್ನ ಕಳಿಸಿತ್ತು. ಮಾನವರನ್ನ ಬಾಹ್ಯಾಕಾಶಕ್ಕೆ ಟೂರ್ ಕರೆದೊಯ್ಯೋ ಪ್ಲಾನ್​ನಲ್ಲಿರೋ ನಾಸಾ ಇದರ ಮೊದಲ ಭಾಗವಾಗಿ ಬೋಯಿಂಗ್ ಸಹಯೋಗದೊಂದಿಗೆ ಗಗನಯಾತ್ರಿಗಳನ್ನ ಕಳಿಸಿತ್ತು. ಕಕ್ಷೆಯಲ್ಲಿರುವ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 8 ದಿನಗಳನ್ನು ಕಳೆಯಲು ಗಗನಯಾತ್ರಿಗಳು ನಿರ್ಧರಿಸಿದ್ದರು. ಇದರ ಭಾಗವಾಗಿ ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ಲ್ಯಾಂಡ್ ಆಗಿದ್ದರು. ಅಂದು ಕುಣಿದು ಕುಪ್ಪಳಿಸಿದ್ದರು ಸುನೀತಾ ವಿಲಿಯಮ್ಸ್.

ಹೀಗೆ ಸಂತಸ ವ್ಯಕ್ತಪಡಿಸಿದ್ದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲೇ ದಿನಗಳನ್ನ ಕಳೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜೂನ್ 14 ರಂದು ಭೂಮಿಗೆ ಹಿಂದಿರುಗಬೇಕಿತ್ತು. ಆದ್ರೆ, ಅನಿರೀಕ್ಷಿತ ಆಘಾತ ಕಾದಿತ್ತು. ತಾಂತ್ರಿಕ ಸಮಸ್ಯೆ ಎದುರಾಗಿತ್ತು.

Advertisment


">June 24, 2024

ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಹಿನ್ನೆಲೆ ವಾಪಸ್ ಬರೋ ದಿನಾಂಕವನ್ನ ಮುಂದೂಡಲಾಗಿತ್ತು. ಜೂನ್ 14 ರ ಬದಲಾಗಿ, ಜೂನ್ 26ರಂದು ಭೂಮಿಗೆ ಮರಳೋದಕ್ಕೆ ಡೇಟ್ ಫಿಕ್ಸ್ ಮಾಡಲಾಗಿತ್ತು. ನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿತ್ತು. ಇದನ್ನ ಸರಿಪಡಿಸೋ ಕಾರ್ಯ ನಾಸಾದ ತಜ್ಞರಿಂದ ನಡೀತಿತ್ತು. ಆದ್ರೆ, ಮತ್ತಷ್ಟು ತಾಂತ್ರಿಕ ತೊಂದರೆಗಳು ಎದುರಾಗಿದ್ದು, ಸಮಸ್ಯೆ ಮತ್ತಷ್ಟು ಬಿಗುಡಾಯಿಸಿದೆ. ಹೀಗಾಗಿ ಭೂಮಿಗೆ ವಾಪಸ್ ಆಗೋ ದಿನಾಂಕವನ್ನ ಮತ್ತೆ ಮುಂದೂಡಲಾಗಿದೆ. ಆದ್ರೆ ಯಾವಾಗ ಅಂತಾ ನಿಖರವಾಗಿ ಹೇಳಿಲ್ಲ. ಅಂದ್ರೆ ಯಾವಾಗ ಆ ಟೆಕ್ನಿಕಲ್ ಇಶ್ಯೂ ಸರಿಯಾಗುತ್ತೆ ಅನ್ನೋದು ಸರಿಯಾಗಿ ತಿಳಿಯದೇ ಇರೋದು ಆತಂಕ ಹೆಚ್ಚಲು ಕಾರಣವಾಗಿದೆ.

ಇನ್ನು ಸುನೀತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ನಾಸಾದ ಸಂಪರ್ಕದಲ್ಲಿದ್ದರೂ ಆತಂಕವಂತೂ ಇದ್ದೇ ಇದೆ. ಅದಕ್ಕೆ ಕಾರಣ ಸಾಕಷ್ಟಿದೆ.

ಇಂಧನ ಖಾಲಿಯಾದ್ರೆ ಭೂಮಿಗೆ ಹಿಂದಿರುಗೋದು ಡೌಟ್​

ಬಾಹ್ಯಾಕಾಶ ನೌಕೆಯಲ್ಲಿ ಉಂಟಾಗಿರೋ ತಾಂತ್ರಿಕ ಸಮಸ್ಯೆ ಸರಿ ಪಡಿಸೋ ಕಾರ್ಯ ನಡೀತಿದೆ. ಸದ್ಯ ಅದರಲ್ಲಿರುವ ಇಂಧನ 45 ದಿನಗಳಿಗೆ ಸಾಕಾಗುತ್ತೆ . ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲವು ದಿನಗಳ ಮಟ್ಟಿಗೆ ಹೆಚ್ಚಿಸಬಹುದು. ಆದರೆ, ದಿನಕಳೆದಂತೆ ಇಂಧನ ಖಾಲಿಯಾಗುತ್ತಾ ಹೋಗುತ್ತೆ. ಆಗ ಮರಳಿ ಭೂಮಿಗೆ ಹಿಂದಿರುಗಲು ಸಾಧ್ಯವಾಗಲ್ಲ. ಹೀಗಾಗಿಯೇ ಆತಂಕ ಮನೆ ಮಾಡಿರೋದು.

Advertisment

ಇದು ಜನರನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಟ್ರಿಪ್‌ಗೆ ಮಾಡಿದ ಟ್ರಯಲ್. ಮೊದಲಿಗೆ ಗಗನಯಾತ್ರಿಗಳನ್ನು ಕಳುಹಿಸಿ ಅವರ ಅನುಭವದ ಆಧಾರದಲ್ಲಿ ಸಾಮಾನ್ಯ ಜನರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದ್ರೀಗ ಗಗನಯಾತ್ರಿಗಳೇ ಸಂಕಷ್ಟದಲ್ಲಿ ಸಿಲುಕಿರೋದ್ರಿಂದ ಮಹತ್ವಾಕಾಂಕ್ಷೆಯ ಯೋಜನೆಗೆ ಬ್ರೇಕ್‌ ಬಿದ್ದಿದೆ. ಸದ್ಯ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸೇಫಾಗಿ ಬರಲಿ ಅನ್ನೋ ಪ್ರಾರ್ಥನೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment