ವಿಪರೀತ ತೂಕನಷ್ಟ; ಸಣಕಲು ಕಡ್ಡಿಯಾದ ಸುನೀತಾ ವಿಲಿಯಮ್ಸ್‌; ಇವ್ರ ಆರೋಗ್ಯ ಹೇಗಿದೆ?

author-image
Ganesh Nachikethu
Updated On
ವಿಪರೀತ ತೂಕನಷ್ಟ; ಸಣಕಲು ಕಡ್ಡಿಯಾದ ಸುನೀತಾ ವಿಲಿಯಮ್ಸ್‌; ಇವ್ರ ಆರೋಗ್ಯ ಹೇಗಿದೆ?
Advertisment
  • ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡ ಗಗನಯಾತ್ರಿ
  • ಈಗ ಸಂಪೂರ್ಣ ಹದಗೆಟ್ಟ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಆರೋಗ್ಯ
  • ಸುನೀತಾ ವಿಲಿಯಮ್ಸ್​ಗೆ ಭವಿಷ್ಯದಲ್ಲಿ ಮರೆವಿನ ಕಾಯಿಲೆ ಬರುವ ಭೀತಿ..!

ಬೆಂಗಳೂರು: ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರೋ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್‌ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುನೀತಾ ವಿಲಿಯಮ್ಸ್‌ ಬ್ಯಾಹ್ಯಾಕಾಶದಿಂದ ಭೂಮಿಗೆ ಬಂದ್ರೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇವರ ದೇಹದ ಅಂಗಾಂಗದಲ್ಲೂ ಭಾರೀ ನೋವು ಕಾಣಿಸಿಕೊಂಡಿದ್ದು, ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮ ಭವಿಷ್ಯದಲ್ಲಿ ಸುನೀತಾ ವಿಲಿಯಮ್ಸ್​ಗೆ ಮರೆವಿನ ಕಾಯಿಲೆ ಬರುವ ಭೀತಿ ಎದುರಾಗಿದೆ.

ಆರೋಗ್ಯದ ಸಮಸ್ಯೆ ಏಕೆ?

ಸುನೀತಾ ವಿಲಿಯಮ್ಸ್‌ ಭೂಮಿಯಿಂದ 150 ಮಿಲಿಯನ್ ಕಿಲೋ ಮೀಟರ್ ದೂರ ಇರೋ ಸೂರ್ಯನ ಬಳಿ ಇದ್ದಾರೆ. ಅಲ್ಲಿಂದ ಭೂಮಿಗೆ ಸೂರ್ಯನ ಕಿರಣಗಳು ಬರಲು 10 ನಿಮಿಷ ಬೇಕು. ಅದು ಮೇಲೆ ಬಿದ್ದರೆ ಮಾತ್ರ ಉಪಯುಕ್ತ. ಆದರೆ, ಸುನೀತಾ ವಿಲಿಯಮ್ಸ್​ ಹತ್ತಿರದಲ್ಲೇ ಇದ್ದು, ಸೂರ್ಯನ ತಾಪಕ್ಕೆ ಒಳಗಾಗಿದ್ದಾರೆ. ಮೈಕ್ರೋ ಗ್ರ್ಯಾವಿಟಿ ಇದ್ದು, ಎಲ್ಲಾ ತರಹದ ರೇಡಿಯೇಷನ್​​ ಇರುತ್ತೆ. ಕ್ಯಾನ್ಸರ್​ ನಾಶಕ್ಕಾಗಿ ಈ ರೇಡಿಯೇಷನ್​ ಬಳಕೆಯಾಗುತ್ತದೆ. ಇಂತಹ ರೇಡಿಯೇಷನ್​ ಮಧ್ಯೆ ಸುನೀತಾ ವಿಲಿಯಮ್ಸ್​ ಬದುಕುತ್ತಿರೋದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರೋಟಿನ್​ ಟ್ಯಾಬ್ಲೆಟ್​ ತೆಗೆದುಕೊಂಡು ಹೈ ಎನರ್ಜಿ ಪಡೆಯುತ್ತಿದ್ದಾರೆ. ಅವಧಿಗಿಂತಲೂ ಹೆಚ್ಚು ಅಲ್ಲೇ ಇದ್ದಾರೆ. ವಾತಾವರಣದಿಂದ ಕಣ್ಣುಗಳಿಗೆ ತೊಂದರೆ ಆಗಿದೆ. ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ಯೋಚನಾ ಸಾಮರ್ಥ್ಯಕ್ಕೂ ಸಮಸ್ಯೆಯಾಗಿದೆ. ಬಾಹ್ಯಾಕಾಶದಲ್ಲಿ ತೇಲಿಕೊಂಡು ಇರೋ ಕಾರಣ ಮೂಳೆಗಳ ಸಮಸ್ಯೆ ಎದುರಾಗಿದೆ. 165 ದಿನಗಳಿಂದ ಆರೋಗ್ಯ ಹದಗೆಟ್ಟಿದೆ.

publive-image

ಸುನೀತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ನಾಸಾ ದಿಗ್ಭ್ರಮೆ

ಈಗಾಗಲೇ ಸುನೀತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ಸ್ವತಃ ನಾಸಾ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಕಾಲ ಅಲ್ಲೇ ವಾಸ ಮಾಡುತ್ತಿದ್ದು, ಇದರಿಂದಾಗಿ ಸುನೀತಾ ವಿಲಿಯಮ್ಸ್‌ ನಾಟಕೀಯ ರೀತಿಯಲ್ಲಿ ತೂಕ ಕಳೆದುಕೊಂಡಿದ್ದಾರೆ. ವಿಪರೀತವಾಗಿ ತೂಕನಷ್ಟ ಕಂಡು ಸಣಕಲು ಕಡ್ಡಿಯಾಗಿದ್ದಾರೆ. ಕೇವಲ ಎಂಟು ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನೀತಾ ವಿಲಿಯಮ್ಸ್‌ ಬಾಹ್ಯಾಕಾಶ ನೌಕೆಯಲ್ಲಿ ಆದ ಸಮಸ್ಯೆಯಿಂದಾಗಿ 160ಕ್ಕೂ ಹೆಚ್ಚು ದಿನಗಳ ಕಾಲ ಐಎಸ್ಎಸ್‌ನಲ್ಲಿ ವಾಸ ಮಾಡುವಂತಾಗಿದೆ.

ಇದನ್ನೂ ಓದಿ: ಜೀರ್ಣಕ್ರಿಯೆ ಸಮಸ್ಯೆಗಳು ಹೃದಯಾಘಾತಕ್ಕೆ ಆಹ್ವಾನ ಕೊಡುತ್ತದೆಯಾ? ತಜ್ಞರು ಕೊಡುವ ಸಲಹೆಗಳು ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment