Advertisment

ನತಾಶಾಗೆ ಸಿಕ್ಕವ್ನೆ ಹೊಸ ಬಾಯ್​​ಫ್ರೆಂಡ್.. ಈಗ ಅನುಮಾನ ಇರೋದು ಪಾಂಡ್ಯ ಮೇಲೆ ಅಲ್ಲ..!

author-image
Ganesh
Updated On
ನತಾಶಾಗೆ ಸಿಕ್ಕವ್ನೆ ಹೊಸ ಬಾಯ್​​ಫ್ರೆಂಡ್.. ಈಗ ಅನುಮಾನ ಇರೋದು ಪಾಂಡ್ಯ ಮೇಲೆ ಅಲ್ಲ..!
Advertisment
  • ನಾನೊಂದು ತೀರ.. ನೀನೊಂದು ತೀರ..!
  • ತದ್ವಿರುದ್ಧ ದಿಕ್ಕಿನಲ್ಲಿ ಹಾರ್ದಿಕ್​ -ನತಾಶಾ ಜೀವನ
  • ಮಗನೊಂದಿಗೆ ಅಭ್ಯಾಸಕ್ಕೆ ಬಂದ ಹಾರ್ದಿಕ್​

ಹಾರ್ದಿಕ್​ ಪಾಂಡ್ಯ-ನತಾಶಾ ಸ್ಟಾಂಕೋವಿಕ್​​. ಈ ಜೋಡಿ ಅಧಿಕೃತವಾಗಿ ಬೇರಾಗಿ ತಿಂಗಳುಗಳೇ ಉರುಳಿದ್ವು. ನಾನೊಂದು ತೀರ ನೀನೊಂದು ತೀರ ಎಂಬಂತಾಗಿರುವ ಈ ಜೋಡಿಯ ಜೀವನ ತದ್ವಿರುದ್ಧ ದಿಕ್ಕಿನಲ್ಲಿ ಚಲಿಸ್ತಿದೆ. ಒಂದೆಡೆ ಹಾರ್ದಿಕ್​ ಕ್ರಿಕೆಟ್​​ ಕರಿಯರ್​ ಉಳಿಸಿಕೊಳ್ಳಲು ಪರದಾಟ ನಡೆಸ್ತಿದ್ದಾರೆ. ಇನ್ನೊಂದೆಡೆ ನತಾಶಾ ಹೊಸ ಬಾಯ್​​ಫ್ರೆಂಡ್​ ಜೊತೆಗೆ ಮಸ್ತಿ ಮಾಡ್ತಿದ್ದಾರೆ.

Advertisment

ಪಾಂಡ್ಯ -ನತಾಶಾ ಸ್ಟಾಂಕೋವಿಕ್​.. ಕ್ರಿಕೆಟ್​ - ಬಾಲಿವುಡ್​ ನಡುವೆ ಬೆಸುಗೆ ಬೆಸೆದಿದ್ದ ಈ ಜೋಡಿ ದೂರಾಗಿ ​4 ತಿಂಗಳುಗಳಾಯ್ತು. ನಾನೊಂದು ತೀರ ನೀನೊಂದು ತೀರ ಎಂಬಂತೆ ಜೀವನ ನಡೆಸ್ತಿದ್ದಾರೆ. ಅಧಿಕೃತವಾಗಿ ಡಿವೋರ್ಸ್​​​ ಘೋಷಿಸಿದ ಬಳಿಕ ಸರ್ಬಿಯಾಗೆ ಹಾರಿದ್ದ ನತಾಶಾ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಹೊಸ ಬಾಯ್​ ಫ್ರೆಂಡ್​​ ಜೊತೆಗೆ ಮಸ್ತಿ ಮಾಡ್ತಿದ್ದಾರೆ.

ಇದನ್ನೂ ಓದಿ:‘ಪ್ರೀತಿ ಎಂದಿಗೂ ವಿಫಲವಾಗಲ್ಲ’.. ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಬ್ರೇಕ್‌ ಅಪ್‌ಗೆ ಹೊಸ ಟ್ವಿಸ್ಟ್‌!

publive-image

ಹಾರ್ದಿಕ್​-ನತಾಶಾ ಸಂಸಾರದ ದೋಣಿ ದಿಕ್ಕು ತಪ್ಪಿದ ಬೆನ್ನಲ್ಲೇ ಇದಕ್ಕೆ ಕಾರಣ ಏನು ಚರ್ಚೆ ನಡೆದಿತ್ತು. ತಪ್ಪು ಹಾರ್ದಿಕ್​ದಾ.? ಅಥವಾ ನತಾಶಾದ.? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಹಾರ್ದಿಕ್​ ಪಾಂಡ್ಯ ನಡೆ-ನುಡಿಯೇ ಇದಕ್ಕೆಲ್ಲಾ ಕಾರಣ ಎಂದು ನತಾಶಾ ಪರೋಕ್ಷ ಗಂಭೀರ ಆರೋಪ ಮಾಡಿದ್ದೂ ಆಯ್ತು. ಇದೀಗ ನತಾಶ ನಡೆಯ ಮೇಲೂ ಸಂಶಯ ಹುಟ್ಟಿದೆ.

Advertisment

ಸ್ವಿಮ್ಮಿಂಗ್​ಪೂಲ್​ನಲ್ಲಿ ಬಾಯ್​​ಫ್ರೆಂಡ್ ಜೊತೆ​ ಆಟ
ಸರ್ಬಿಯಾದಿಂದ ವಾಪಾಸ್ಸಾಗಿರೋ ನತಾಶಾ ಸದ್ಯ ಫುಲ್​ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಅಂದ್ಹಾಗೆ ಜಾಲಿ ಮೂಡ್​ನಲ್ಲಿ ಸ್ವಿಮ್ಮಿಂಗ್​ಫೂಲ್​ನಲ್ಲಿ​ ಮಸ್ತಿ ಮಾಡ್ತಿರೋ ನತಾಶಾ ಜೊತೆಗಿರೋದು ರೂಮರ್ಡ್​ ಬಾಯ್​​ಫ್ರೆಂಡ್​ ಅಲೆಕ್ಸಾಂಡೆರ್​​ ಲಿಕ್​.

ಸರ್ಬಿಯಾದಿಂದ ವಾಪಾಸ್ಸಾದ ಬಳಿಕ ಒಟ್ಟಾಗಿ ಓಡಾಟ
ಹಾರ್ದಿಕ್​ ಜೊತೆ ಡಿವೋರ್ಸ್​ ಆದ ಬಳಿಕ ಸರ್ಬಿಯಾಗೆ ಹಾರಿದ್ದ ನತಾಶಾ, ಕಳೆದ ತಿಂಗಳು ಭಾರತಕ್ಕೆ ವಾಪಾಸ್ಸಾಗಿದ್ರು. ವಾಪಾಸ್ಸಾದ ಬೆನ್ನಲ್ಲೇ ಮಗನನ್ನ ಹಾರ್ದಿಕ್​ ಸುಪರ್ದಿಗೆ ನೀಡಿದ ನತಾಶಾ, ಕೆಲವೇ ಸಮಯದಲ್ಲಿ ಬಾಯ್​ ಫ್ರೆಂಡ್​ ಜೊತೆಗೆ ಓಡಾಟ ನಡೆಸಿದ್ರು.

ಇದನ್ನೂ ಓದಿ:ನಂಬಿಕೆ, ವಂಚನೆ..! ಪಾಂಡ್ಯ-ನಟಾಶಾ ಡಿವೋರ್ಸ್​​ಗೆ ಟ್ವಿಸ್ಟ್.. ನಟಾಶಾ ಹೀಗ್ಯಾಕೆ ಮಾಡ್ತಿದ್ದಾರೆ?

Advertisment

ಅಲೆಕ್ಸ್​​ ಜೊತೆ ಸುತ್ತಾಟ
ಆಗಿನ್ನೂ ಹಾರ್ದಿಕ್​-ನತಾಶಾ ದಾಂಪತ್ಯ ಜೀವನದಲ್ಲಿ ಎಲ್ಲಾ ಸರಿಯಿಲ್ಲಾ ಅನ್ನೋ ರೂಮರ್ಸ್​ ಹಬ್ಬಿತ್ತು. ಆ ಸಮಯದಲ್ಲೇ ನತಾಶಾ, ಅಲೆಕ್ಸಾಂಡೆರ್​ ಲಿಕ್​ ಜೊತೆಗೆ ಕಾಣಿಸಿಕೊಂಡಿದ್ರು. ಡಿವೋರ್ಸ್​​ ಗಾಸಿಪ್​ ಹಬ್ಬಿದ ಬೆನ್ನಲ್ಲೇ ಅಲೆಕ್ಸಾಂಡರ್​ ಜೊತೆ ನತಾಶ ಕಾಣಿಸಿಕೊಂಡಾಗಲೇ ಹಲವಾರು ಪ್ರಶ್ನೆಗಳು ಎದ್ದಿದ್ವು. ಇದೀಗ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ಬಳಿಕ ಅಲೆಕ್ಸಾಂಡರ್​ ಜೊತೆಗೆ ಇನ್ನಷ್ಟು ಆಪ್ತವಾಗಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಈ ಅಲೆಕ್ಸಾಂಡರ್​ ಎಂಟ್ರಿಯೇ ಹಾರ್ದಿಕ್​ ಜೊತೆಗಿನ ದಾಂಪತ್ಯ ಜೀವನ ಅಂತ್ಯಕ್ಕೆ ಕಾರಣಾನ ಅನ್ನೋ ಅನುಮಾನದ ಪ್ರಶ್ನೆ ಸದ್ಯ ಚರ್ಚೆಯಲ್ಲಿದೆ.

publive-image

ಮಗನೊಂದಿಗೆ ಹಾರ್ದಿಕ್​ ಅಭ್ಯಾಸದಲ್ಲಿ ಭಾಗಿ
ಒಂದೆಡೆ ಬಾಯ್​​ಫ್ರೆಂಡ್​ ಜೊತೆಗೆ ನತಾಶಾ ಸುತ್ತಾಟ ನಡೆಸ್ತಿದ್ರೆ ಹಾರ್ದಿಕ್​ ಪಾಂಡ್ಯ ಕರಿಯರ್​ ಉಳಿವಿಗಾಗಿ ಹೋರಾಟ ನಡೆಸ್ತಿದ್ದಾರೆ. ಬೆಂಗಳೂರಿನ ಎನ್​ಸಿಎನಲ್ಲಿ ಬೀಡು ಬಿಟ್ಟಿರೋ ಪಾಂಡ್ಯ, ಮುಂಬರುವ ಬಾಂಗ್ಲಾದೇಶ ಟಿ20 ಸರಣಿಗೆ ಕಠಿಣ ಅಭ್ಯಾಸ ನಡೆಸ್ತಿದ್ದಾರೆ. ಮಗನನ್ನೂ ಒಟ್ಟಿಗೆ ಕರೆದುಕೊಂಡು ಬಂದಿರೋ ಹಾರ್ದಿಕ್​, ಮಗನ ಆರೈಕೆಯ ಜೊತೆಗೆ ಅಭ್ಯಾಸವನ್ನೂ ನಡೆಸ್ತಿದ್ದಾರೆ.

ಕರಿಯರ್​ ಉಳಿವಿಗೆ ಹಾರ್ದಿಕ್​ ಹೋರಾಟ
ಟೀಮ್​ ಇಂಡಿಯಾದಲ್ಲಿ ಹಾರ್ದಿಕ್​ ಪಾಂಡ್ಯ ಸ್ಥಾನ ಉಳಿಸಿಕೊಳ್ಳಲು ಸರ್ಕಸ್​ ನಡೆಸ್ತಿದ್ದಾರೆ. ಯುವ ಆಟಗಾರರ ಪೈಪೋಟಿಯ ನಡುವೆ ಸ್ಥಾನ ಭದ್ರ ಪಡಿಸಿಕೊಳ್ಳಬೇಕಿದೆ. ಹೀಗಾಗಿ ರೆಡ್​ ಬಾಲ್​ ಕ್ರಿಕೆಟ್​ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಕ್ರಿಕೆಟ್​ ಜೊತೆಗೆ ಫಿಟ್​​ನೆಸ್​ ಮೇಲೆ ಹಾರ್ಡ್​​ವರ್ಕ್​ ಮಾಡ್ತಿದ್ದಾರೆ. ಈ ವೈಯಕ್ತಿಕ ಜೀವನದ ಹಿನ್ನಡೆಯನ್ನ ಮೆಟ್ಟಿನಿಂತು ಕ್ರಿಕೆಟ್​ನಲ್ಲಿ ಸಕ್ಸಸ್​ ಕಾಣೋ ಲೆಕ್ಕಾಚಾರದಲ್ಲಿದ್ದಾರೆ.

Advertisment

ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment