/newsfirstlive-kannada/media/post_attachments/wp-content/uploads/2025/05/Modi-govt-cast-census-report.jpg)
ನವದೆಹಲಿ: ರಾಷ್ಟ್ರೀಯ ಜನಗಣತಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರ ದೇಶಾದ್ಯಂತ ಸಂಚಲನ ಮೂಡಿಸಿದೆ. ಸಾರ್ವಜನಿಕ ವಲಯದಲ್ಲಿ ಇದು ಕುತೂಹಲದ ಕೇಂದ್ರ ಬಿಂದು ಆಗಿದ್ರೆ ರಾಷ್ಟ್ರ ರಾಜಕಾರಣದಲ್ಲಿ ಜನಗಣತಿ ಅತಿ ದೊಡ್ಡ ಸುನಾಮಿಯನ್ನೇ ಸೃಷ್ಟಿಸಿದೆ.
ಭಾರತ ಸರ್ಕಾರದ ಡಿಜಿಟಲ್ ಜನಗಣತಿ ಹೇಗಿರುತ್ತೆ? ಅತ್ಯಂತ ವೇಗವಾಗಿ ಮಾಡಿ ಮುಗಿಸಲು ಪ್ರಧಾನಿ ಮೋದಿ ಸರ್ಕಾರ ಮಾಡಿರೋ ಪ್ಲಾನ್ ಏನು ಅಂತಾ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಜನಗಣತಿ ನಡೆಸಲು ತೀರ್ಮಾನ ಮಾಡಿದ್ದು, ದೇಶಾದ್ಯಂತ ಇನ್ನೂ 2-3 ತಿಂಗಳಲ್ಲಿ ಅದು ಆರಂಭವಾಗೋ ಸಾಧ್ಯತೆ ಇದೆ. ಈ ಬಾರಿ ಡಿಜಿಟಲ್ ಜನಗಣತಿ ನಡೆಸುವ ಕೇಂದ್ರ ಸರ್ಕಾರ, ಆಧಾರ್, ಬಯೋಮೆಟ್ರಿಕ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಜನಗಣತಿ ಮಾಡುತ್ತಿದೆ.
ಈ ಬಾರಿ ರಾಷ್ಟ್ರೀಯ ಜನಗಣತಿಯಲ್ಲಿ ಪ್ರಮುಖವಾಗಿ ಎಲ್ಲರ ಜಾತಿ, ಧರ್ಮದ ವಿವರ ಸಂಗ್ರಹ ಮಾಡಲಾಗುತ್ತಿದೆ. ಜನಗಣತಿಯ ವೇಳೆ ಜಾತಿ, ಧರ್ಮದ ಕಲಂನಲ್ಲಿ ಜಾತಿ, ಧರ್ಮದ ವಿವರ ದಾಖಲಿಸಲಾಗುತ್ತದೆ.
ಜನಗಣತಿಯ ವೇಳೆ ಎರಡು ಕಲಂಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗುತ್ತದೆ. ಅದರಲ್ಲಿ ಎಲ್ಲರ ಧರ್ಮ, ಜಾತಿಯ ವಿವರ ಜನಗಣತಿಯ ವೇಳೆ ಸಂಗ್ರಹ ಮಾಡಲಾಗುತ್ತದೆ.
ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಮುಸ್ಲಿಂರಲ್ಲೂ ವೈವಿಧ್ಯಮಯವಾದ ಜಾತಿಗಳು ಇದ್ದು, ಮುಸ್ಲಿಂರ ಜಾತಿ ವಿವರ ಕೂಡ ಜನಗಣತಿ ವೇಳೆ ಸಂಗ್ರಹಿಸುವ ಸಾಧ್ಯತೆ ಇದೆ.
15 ದಿನದಲ್ಲಿ ಜನಗಣತಿ ಸಾಧ್ಯನಾ?
ಈ ಬಾರಿ ಕೇಂದ್ರ ಸರ್ಕಾರ ಡಿಜಿಟಲ್ ಜನಗಣತಿ ಮಾಡಲು ಮುಂದಾಗಿದ್ದು, 15 ದಿನದಲ್ಲಿ ದೇಶಾದ್ಯಂತ ಜನಗಣತಿ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಡೆಪ್ಯುಟೇಷನ್ ಮೇಲೆ ಜನಗಣತಿ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲಾಗುವುದು.
ಇದನ್ನೂ ಓದಿ: ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ.. ಬಿಜೆಪಿ ನಾಯಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ!
AI, ಡಿಜಿಟಲ್ ಜನಗಣತಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲಾಗುತ್ತದೆ. ಆದರೆ ಸಂಗ್ರಹಿಸಿದ ಜನಗಣತಿ ಡಾಟಾವನ್ನು ವಿಶ್ಲೇಷಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ