/newsfirstlive-kannada/media/post_attachments/wp-content/uploads/2024/10/JOB_NFL.jpg)
ಕೇಂದ್ರ ಸರ್ಕಾರದ ರಾಷ್ಟ್ರೀಯ ರಸಗೊಬ್ಬರಗಳ ಲಿಮಿಟೆಡ್ (National Fertilizers Limited)ನಲ್ಲಿ ಖಾಲಿ ಇರುವಂತ ಹುದ್ದೆಳಗಳನ್ನು ಭರ್ತಿ ಮಾಡುತ್ತಿದೆ. ಸದ್ಯ ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳು ಭಾರತದ್ಯಾಂತ ಇವೆ. ಅದರಂತೆ ಬೆಂಗಳೂರಿನಲ್ಲೂ ಇದರ ಅಂಗ ಕಚೇರಿ ಇದ್ದು ಇದರಲ್ಲಿಯು ಖಾಲಿ ಹುದ್ದೆಗಳನ್ನ ತುಂಬಲಾಗುತ್ತಿದೆ.
ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ನ ವಿವಿಧ ಕಚೇರಿಗಳಲ್ಲಿ ಇರುವಂತ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ. ಈಗಾಗಲೇ ಅರ್ಜಿಗಳನ್ನು ಆರಂಭವಾಗಿವೆ. ಹೀಗಾಗಿ ಆಸಕ್ತಿ ಇರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ (careers.nfl.co.in.)ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಇತರೆ ಮಾಹಿತಿಗಳು ಈ ಕೆಳಗೆ ಕೊಡಲಾಗಿದೆ.
ಇನ್ನು ಯಾವ್ಯಾವ ಹುದ್ದೆಗಳು ಎಂದು ನೋಡಿದರೆ..?
ಜೂನಿಯರ್ ಇಂಜಿನಿಯರ್ ಗ್ರೇಡ್-2, ಡ್ರಾಫ್ಟ್‌ಮನ್, ಸ್ಟೋರ್ ಅಸಿಸ್ಟೆಂಟ್, ಲೋಕೋ ಅಟೆಂಡ್ ಗ್ರೇಡ್-2, ನರ್ಸ್, ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಎಕ್ಸ್ ರೇ ಟೆಕ್ನಿಷಿಯನ್, ಅಕೌಂಡ್ ಅಸಿಸ್ಟೆಂಟ್, ಅಟೆಂಡೆಂಟ್ ಗ್ರೇಡ್- I (ಫಟ್ಟರ್, ವೆಲ್ಡರ್), ಒಟಿ ಟೆಕ್ನಿಷಿಯನ್ ಸೇರಿ ಇನ್ನು ಕೆಲ ಹುದ್ದೆಗಳಿವೆ.
ವಿದ್ಯಾರ್ಹತೆ
ಪಿಯುಸಿ, ಬಿಎಸ್ಸಿ, ಇಂಜಿನಿಯರಿಂಗ್, ಡಿಪ್ಲೋಮಾ, 3 ವರ್ಷದ ಡಿಪ್ಲೋಮಾ, ಪದವಿ (ಸೈನ್ಸ್, ಆರ್ಟ್ಸ್, ಕಾಮರ್ಸ್) ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಫಾರ್ಮಸಿ,
ಈ ಎಲ್ಲ ಕೋರ್ಸ್ಗಳು ಆಯಾಯ ಹುದ್ದೆಗಳಿಗೆ ತಕ್ಕಂತೆ ಇವೆ. ಹೀಗಾಗಿ ಅಭ್ಯರ್ಥಿಗಳು ಸರಿಯಾಗಿ ಗಮನಿಸಿಕೊಂಡು ತಮಗೆ ಅನ್ವಯಿಸುವ ಕೆಲಸಕ್ಕೆ ಅಪ್ಲೇ ಮಾಡಿ.
ಇದನ್ನೂ ಓದಿ: ಬೆಂಗಳೂರಿನ BEMLನಲ್ಲಿ ಭರ್ಜರಿ ಉದ್ಯೋಗಗಳು.. ಪರೀಕ್ಷೆ ಇಲ್ಲ, ಇಂಟರ್ವ್ಯೂವ್ ಮಾತ್ರ
ತಿಂಗಳ ಸ್ಯಾಲರಿ ಹೇಗಿದೆ..?
23,000 ದಿಂದ 56,500 ರೂ.ಗಳು
21,500 ದಿಂದ 52,000 ರೂ.ಗಳು
ವಯೋಮಿತಿ
18 ರಿಂದ 30 ವರ್ಷದ ಅಭ್ಯರ್ಥಿಗಳಿಗೆ ಅವಕಾಶ
ಒಟ್ಟು ಹುದ್ದೆಗಳು
336
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಒಎಂಆರ್ ಬೇಸಡ್ ಎಕ್ಸಾಂ ಇರುತ್ತದೆ (150 ಅಂಕಗಳು)
ಸ್ಕಿಲ್ ಟೆಸ್ಟ್ ಇದೆ (ಕೆಲ ಹುದ್ದೆಗಳಿಗೆ ಅನ್ವಯ)
ಎಷ್ಟು ಶುಲ್ಕ ಪಾವತಿ ಮಾಡಬೇಕು?
ಜನರಲ್, ಒಬಿಸಿ ಅಭ್ಯರ್ಥಿಗಳು- 200 ರೂ.ಗಳು
SC/ST/PwBD/ExSM- ಶುಲ್ಕ ವಿನಾಯಿತಿ ಇದೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 08 ನವೆಂಬರ್ 2024
ಅಪ್ಲೇ ಮಾಡಲು ಲಿಂಕ್- https://careers.nfl.co.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ