/newsfirstlive-kannada/media/post_attachments/wp-content/uploads/2024/10/JOB_NICL.jpg)
ನ್ಯಾಶನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಎನ್ಐಸಿಎಲ್) ಹೊಸ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ವಿಮಾ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಈ ಅರ್ಜಿಗಳನ್ನು ಆಫ್ಲೈನ್ ಮೂಲಕ ಆಹ್ವಾನ ಮಾಡಲಾಗಿದೆ. ಇಲ್ಲದಿದ್ದರೇ ಇ-ಮೇಲ್ ಮೂಲಕ ಕಚೇರಿಗೆ ಅರ್ಜಿ ಕಳುಹಿಸಬಹುದು.
ಆಕ್ಚುಯರೀಸ್ ಶಿಷ್ಯವೃತ್ತಿಳು (Actuarial Apprenticeships) ಗಳನ್ನು ಸಂಸ್ಥೆ ಭರ್ತಿ ಮಾಡುತ್ತಿದೆ. ಇವುಗಳಿಗೆ ಸಂಬಂಧ ಪಟ್ಟಂತೆ ವಿದ್ಯಾರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಸಂಬಳ ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನವಿಟ್ಟು ಇದನ್ನು ಓದಿಕೊಳ್ಳಬೇಕು.
ಮಾಸಿಕ ಸಂಬಳ
40,000 ದಿಂದ 45,000 ರೂಪಾಯಿಗಳು
ಹುದ್ದೆಯ ಹೆಸರು, ಎಷ್ಟು ಹುದ್ದೆಗಳು ಖಾಲಿ ಇವೆ?
ಆಕ್ಚುಯರೀಸ್ ಅಪ್ರೆಂಟಿಸ್ಶಿಪ್
ಒಟ್ಟು ಹುದ್ದೆಗಳು- 16
ಶೈಕ್ಷಣಿಕ ಅರ್ಹತೆ
ಪದವಿ ಅಥವಾ ಸ್ನಾತಕೋತ್ತರ ಪದವಿ
(ಜನರಲ್ ಅಭ್ಯರ್ಥಿಗಳು ಶೇ.60 ಹಾಗೂ ಎಸ್.ಸಿ, ಎಸ್ಟಿ ಅಭ್ಯರ್ಥಿಗಲು ಶೇ.55 ಅಂಕ ಪಡೆದಿರಬೇಕು)
ಇದನ್ನೂ ಓದಿ: ಸಾಹಿತ್ಯದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ಮಹಿಳೆ.. ಯಾರು ಈ ಹಾನ್ ಕಾಂಗ್?
ವಯೋಮಿತಿ
27 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
ಅಭ್ಯರ್ಥಿಗಳು ಈ ಹುದ್ದೆಗೆ ಅಪ್ಲೇ ಮಾಡುವುದು ಹೇಗೆ?
ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಲಿಂಕ್ನಿಂದ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅದರ ಪ್ರತಿ ಹಾರ್ಡ್ ಕಾಪಿ ಪಡೆದು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕು.
ಅರ್ಜಿಯ ಫಾರ್ಮ್ ಲಿಂಕ್- https://static-cdn.publive.online/newsfirstlive-kannada/media/pdf_files/sites/default/files/2024-09Annexure A - Application Form for Engagement of Actuarial Apprentice 2024.pdf
ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಿಗೆ ಕಳುಹಿಸಬೇಕು?
ಚೀಫ್ ಮ್ಯಾನೇಜರ್,
ಪರ್ಸನಲ್ ಡಿಪಾರ್ಟ್ಮೆಂಟ್,
ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
ಹೆಡ್ ಆಫೀಸ್, ಪ್ರೆಮಿಸೆಸ್ ನಂ- 18-0374
ಪ್ಲಾಟ್ ನಂ. ಸಿಬಿಡಿ-81, ನ್ಯೂ ಟೌನ್, ಕೋಲ್ಕತ್ತ- 700156
ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ ಇಮೇಲ್ ಮೂಲಕವೂ ಅರ್ಜಿ ಸಲ್ಲಿಸಬಹುದು- [email protected].
ಕೊನೆ ದಿನಾಂಕ
ಅಕ್ಟೋಬರ್ 15, 2024
ಉದ್ಯೋಗದ ಪೂರ್ಣ ಮಾಹಿತಿ-https://static-cdn.publive.online/newsfirstlive-kannada/media/pdf_files/sites/default/files/2024-09Advertisement - Engagement of Actuarial Apprentice 2024.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ