/newsfirstlive-kannada/media/post_attachments/wp-content/uploads/2025/03/News1.jpg)
ಬೆಂಗಳೂರು: 2025ರ ರಾಷ್ಟ್ರಮಟ್ಟದ ಅನ್ವೇಷಣ ಕಾರ್ಯಕ್ರಮದಲ್ಲಿ ವಿಜೇತರಾದ ತಂಡಗಳಿಗೆ ಯಲಹಂಕದ ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಬಹುಮಾನ ವಿತರಣೆ ಮಾಡಿದೆ.
ಯಲಹಂಕದ ಬಿಎಂಎಸ್ಐಟಿ ಕಾಲೇಜು ಆಯೋಜನೆ ಮಾಡಿದ್ದ ರಾಷ್ಟ್ರಮಟ್ಟದ ಅನ್ವೇಷಣ- 2025 ಕಾರ್ಯಕ್ರಮಕ್ಕೆ ಒರಾಕಲ್ ರಿಸರ್ಚ್ ಅಧ್ಯಕ್ಷ ಶ್ರೀಧರ್ ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರಮಟ್ಟದ ಅನ್ವೇಷಣ ಸ್ಪರ್ಧೆಯಲ್ಲಿ ಲಕ್ನೋ, ಪುಣೆ ಸೇರಿದಂತೆ ದೇಶದ್ಯಾಂತ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು 198 ತಂಡಗಳು ಭಾಗಿಯಾಗಿದ್ದವು. ಇದರಲ್ಲಿ ಸ್ಪರ್ಧಾರ್ಥಿಗಳನ್ನು ಗುರುತಿಸಲು ಐಡಿಯಾಥಾನ್ ಪಿಚ್ ಟು ವಿನ್ ಆಯೋಜನೆ ಮಾಡಲಾಗಿತ್ತು.
7 ತೀರ್ಪುಗಾರರು ಸ್ಪರ್ಧಿಗಳನ್ನು ಸರಿಯಾಗಿ ಗಮನಿಸಿ ನಿರ್ಣಯವನ್ನು ಕೈಗೊಂಡು 84 ತಂಡಗಳನ್ನು ಆಯ್ಕೆ ಮಾಡಿದರು. ನಂತರ ವರ್ಚುವಲ್ ಪ್ರಸ್ತುತಿ ರೌಂಡ್ ನಡೆಯಿತು. ಇದರಲ್ಲಿ ಆರು ತೀರ್ಪುಗಾರರ ಮುಂದೆ ಆಯ್ಕೆ ಆಗಿದ್ದ 84 ತಂಡಗಳು ತಮ್ಮ ಪರಿಕಲ್ಪನೆಗಳನ್ನು ಪ್ರಸ್ತುತ ಪಡಿಸಿದರು. ಇದರಲ್ಲಿ ಮತ್ತೆ 56 ಟೀಮ್ಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದರು.
ಪ್ರತಿ ಶನಿವಾರ ಬೂಟ್ ಕ್ಯಾಂಪ್ ನಡೆಸಿ ತಂಡಗಳಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗಿತ್ತು. ಇದರಿಂದ ಅವರು ಅನ್ವೇಷಣ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಕೊನೆಯಲ್ಲಿ ವಿಜೇತ ತಂಡಗಳಿಗೆ 2.5 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಯಿತು.
ಇದನ್ನೂ ಓದಿ: LSG ಗೆದ್ದರೂ ರಿಷಭ್ ಪಂತ್ ಮೇಲೆ ಸಮಾಧಾನ ಇಲ್ಲ.. ಬ್ಯಾಟಿಂಗ್ನಿಂದ ನಿರಾಸೆ, ಟಿವಿ ಪುಡಿಪುಡಿ..!
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಒರಾಕಲ್ ರಿಸರ್ಚ್ ಅಧ್ಯಕ್ಷ ಶ್ರೀಧರ್ ನಾರಾಯಣಸ್ವಾಮಿ ಮಾತನಾಡಿ, ನಮಗೆ ಸಮಸ್ಯೆಗಳು ಎದುರಾದಾಗ ಅದನ್ನು ಅವಕಾಶವನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ನಮಗೆ ಉತ್ತಮ ಪಾಠವಾಗುತ್ತದೆ. ಹಲವು ಸಮಸ್ಯೆಗಳಲ್ಲಿ ನಾವು ಇದ್ದಾಗ ಅದು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ನಿಧಾನವಾಗಿ ಯುಶಸ್ಸು ದೊರೆಯುತ್ತದೆ ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಎಪಿಕೋರ್ ಸಂಸ್ಥೆಯ ಹಿರಿಯ ನಿರ್ದೇಶಕ ರಾಜೇಶ್ ಬನ್ಸಲ್, ಪ್ರಾಂಶುಪಾಲ ಡಾ.ಸಂಜಯ್ ಹೆಚ್.ಎ, ಮುಖ್ಯಸ್ಥೆ ಡಾ.ಸೀಮಾ ಸಿಂಗ್, ಪ್ರೊ. ಶಾಮ ಸೇರಿ ಇತರರು ಭಾಗಿಯಾಗಿದ್ದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ