/newsfirstlive-kannada/media/post_attachments/wp-content/uploads/2024/10/POST_OFFICE.jpg)
ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲ ಹೊಂದಿದೆ. ಇದರ 1,56,000ಕ್ಕೂ ಹೆಚ್ಚು ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಮೊದಲ ಬಾರಿ ಅಂಚೆ ಸೇವೆ 1854ರ ಅಕ್ಟೋಬರ್ 10ರಂದು ಈಸ್ಟ್ ಇಂಡಿಯಾ ಕಂಪನಿ ಅಂಚೆ ಸೇವೆ ಆರಂಭಿಸಿತು. ಹಾಗಾಗಿ ಪ್ರತಿ ವರ್ಷ ಅ.10ರಂದು ಭಾರತೀಯ ಅಂಚೆ ದಿನ ಅಂತ ಆಚರಿಸಲಾಗುತ್ತಿದೆ. ಅಂಚೆ ಇಲಾಖೆ ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ತಲುಪಿಸುವುದಲ್ಲದೆ, ಹಣಕಾಸು ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ನೀಡುತ್ತಿದೆ.
ಇದನ್ನೂ ಓದಿ: ‘ಕರ್ಮ ಹಿಟ್ ಬ್ಯಾಕ್ ಎಂದ್ರೆ ಇದೇ ಅಲ್ಲವೇ ಸಿದ್ದರಾಮಯ್ಯ’ -HD ಕುಮಾರಸ್ವಾಮಿ ಟಾಂಗ್
ಇತ್ತೀಚೆಗೆ ಮೊಬೈಲ್ ಸೇರಿ ತಂತ್ರಜ್ಞಾನ ಮುಂದುವರೆದಂತೆ ಅಂಚೆ ಕಚೇರಿಗೆ ಹೋಗುವವರ ಸಂಖ್ಯೆ ಕಡಿಮೆ ಆಗಿದೆ. ನಮ್ಮ ದೇಶದಲ್ಲಿ ವಿಶೇಷವಾದ ಅಂಚೆ ಕಚೇರಿಗಳಿವೆ. ಇಲ್ಲಿ ಕೆಲವು ಅಂಚೆ ಕಚೇರಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹಿಮಾಚಲ ಪ್ರದೇಶದ ಹಿಕ್ಕಿಂ ಅಂಚೆ ಕಚೇರಿ. ಇದು ಜಗತ್ತಿನ ಎತ್ತರದ ಅಂಚೆ ಕಚೇರಿ ಅನಿಸಿದೆ. ಜೊತೆಗೆ ಅತಿ ಎತ್ತರದ ಮತದಾನ ಕೇಂದ್ರವೂ ಹೌದು. ಈ ಅಂಚೆ ಕಚೇರಿ ಪ್ರವಾಸಿಗರನ್ನು ಆಕರ್ಷಿಸಲು ಲೆಟರ್ ಬಾಕ್ಸ್ ಆಕಾರದಲ್ಲಿ ನಿರ್ಮಿಸಲಾಗಿದೆ. ಇದು 1983ರಲ್ಲಿ ತನ್ನ ಕಾರ್ಯ ಆರಂಭಿಸಿತು. ಇದು ಸಮುದ್ರ ಮಟ್ಟದಿಂದ 14,567 ಅಡಿ ಎತ್ತರದಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಆತ್ಮೀಯರಿಗೆ ಪತ್ರ ಕಳಿಸುತ್ತಾರೆ. ಜೊತೆಗೆ ಇದು ಪ್ರವಾಸಿಗರ ನೆಚ್ಚಿನ ಸ್ಥಳವೂ ಎನಿಸಿದೆ.
ಇದನ್ನೂ ಓದಿ:SBIನಲ್ಲಿ 1,500ಕ್ಕೂ ಹೆಚ್ಚು ಜಾಬ್ಗಳಿಗೆ ಆಹ್ವಾನ.. ಯಾರು ಯಾರು ಅಪ್ಲೇ ಮಾಡಬಹುದು?
ಇದು ತೇಲುವ ಅಂಚೆ ಕಚೇರಿ
ತೇಲುವ ಅಂಚೆ ಕಚೇರಿಯು ಕಾಶ್ಮೀರದ ಶ್ರೀನಗರದ ಸುಂದರ ದಾಲ್ ಸರೋವರದಲ್ಲಿದೆ. ನೂರಾರು ವರ್ಷಗಳಷ್ಟು ಹಳೆಯದಾರ ಈ ತೇಲುವ ಅಂಚೆ ಕಚೇರಿ ಬ್ರಿಟಿಷರ ಕಾಲದಲ್ಲಿ ಆರಂಭವಾಯಿತು. ಈಗಲೂ ಕಾರ್ಯನಿರ್ವಹಿಸುತ್ತಿದೆ. ಇದು ವಿಶ್ವದಲ್ಲೇ ಏಕೈಕ ತೇಲುವ ಅಂಚೆ ಕಚೇರಿ ಎನಿಸಿದೆ. ಇದು ಕೂಡ ಪ್ರವಾಸಿಗರ ಆಕರ್ಷಣೀಯವಾಗಿದ್ದು ನಿತ್ಯ ಸಾವಿರಾರು ಜನ ಇಲ್ಲಿಗೆ ಆಗಮಿಸುತ್ತಾರೆ. ಇದು ಬೋಟ್ ಹೌಸ್ ಮಾದರಿಯಲ್ಲಿದ್ದು ಈ ಅಂಚೆ ಕಚೇರಿಯನ್ನು ಮೊದಲು ನೆಹರು ಪಾರ್ಕ್ ಪೋಸ್ಟ್ ಎಂತಲೂ ಕರೆಯಲಾಗುತ್ತಿತ್ತು. ಇದು ಅಂಚೆ ಚೀಟಿಗಳ ದೊಡ್ಡ ಸಂಗ್ರಹ ಹೊಂದಿದೆ. ಶ್ರೀನಗರಕ್ಕೆ ಭೇಟಿ ನೀಡಿದಾಗ, ಜಗತ್ತಿನ ಏಕೈಕ ತೇಲುವ ಅಂಚೆ ಕಚೇರಿಯಿಂದ ನಿಮ್ಮ ಆತ್ಮೀಯರಿಗೆ ಪತ್ರ ಬರೆಯುವುದನ್ನು ಮರೆಯಬೇಡಿ. ಅದು ವಿಶೇಷವಾದ ಸ್ಮರಣೀಯ ಎನಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ