/newsfirstlive-kannada/media/post_attachments/wp-content/uploads/2025/03/Bangalore-National-Public-School.jpg)
ಬೆಂಗಳೂರು: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಮುತ್ತಲನಗರದಲ್ಲಿ ವಿಜ್ಞಾನ ಪ್ರದರ್ಶನ ( ಟೆಕ್ಸ್ಟ್‌ವರ್ ಎಕ್ಸ್‌ಫೋ) ಮತ್ತು ಸಂಚಾರಿ ಶಾಸ್ತ್ರ (ರೋಬೋಟಿಕ್) ಸಮಾರಂಭ ನಡೆಯಿತು.
ಶ್ರೀ ಹನುಮಾನ್ ಗ್ರೂಪ್ ಆಫ್ ಎಜುಕೇಶನ್ ಇನ್ಸಿಟ್ಯೂಷನ್ (ರಿ) ಇದರ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ಪಿಲಾಂಜನಪ್ಪ. ಹೆಚ್ ನೇತೃತ್ವ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸೆಕ್ರೆಟರಿ ಪವನ್ ಕುಮಾರ್. ಪಿ ಅಧ್ಯಕ್ಷರಾದ ಶ್ರೀ ನಾರಾಯಣ್ ರೆಡ್ಡಿ ಅವರು ಮತ್ತು ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಯನದ ನಿರ್ದೇಶಕರಾದ ಶ್ರೀ ರಘುಪತಿ. ಎಂ ಅವರು ಆಗಮಿಸಿದರು.
ಶಾಲೆಯ ಸಿಬ್ಬಂದಿ ಸದಸ್ಯರು ಪೋಷಕರು ಮತ್ತು ಮಕ್ಕಳು ಪಾಲ್ಗೊಂಡು ವಿಜ್ಞಾನ ಪ್ರದರ್ಶನ ಸಮಾರಂಭವನ್ನು ಯಶಸ್ವಿಗೊಳಿಸಿದರು. ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆದ ಗಣಿತ ಮತ್ತು ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ವಿಜೇತರಾದ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us