/newsfirstlive-kannada/media/post_attachments/wp-content/uploads/2024/11/JOBS_SEEDS.jpg)
ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಸ್ಸಿಎಲ್) ಟ್ರೈನಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಪ್ಲೇ ಮಾಡಬಹುದು. ಕೇಂದ್ರ ಸರ್ಕಾರದ ಅಡಿ ಕೆಲಸ ಮಾಡಲು ಇಚ್ಛಿಸುವವರು ಈ ಉದ್ಯೋಗಗಳಿಗೆ ಪ್ರಯತ್ನ ಮಾಡಬಹುದು. ಈ ಎಲ್ಲ ಸರ್ಕಾರದ ಉದ್ಯೋಗಗಳು ಆಗಿದ್ದರಿಂದ ಉತ್ತಮ ಮಟ್ಟದ ಸಂಬಳ ಇರುತ್ತದೆ.
ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕ, ಮ್ಯಾನೇಜ್‌ಮೆಂಟ್ ಟ್ರೈನಿ (ಹೆಚ್ಆರ್), ಮ್ಯಾನೇಜ್‌ಮೆಂಟ್ ಟ್ರೈನಿ (ಕ್ಯೂಸಿ), ಮ್ಯಾನೇಜ್‌ಮೆಂಟ್ ಟ್ರೈನಿ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್), ಹಿರಿಯ ತರಬೇತಿ (ವಿಜಿಲೆನ್ಸ್), ತರಬೇತಿ (ಕೃಷಿ), ತರಬೇತಿ (Quality Control), ತರಬೇತಿ ಹುದ್ದೆಗಳು- ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಸ್ಟೆನೋಗ್ರಾಫರ್, ಖಾತೆಗಳು, ಕೃಷಿ ಮಳಿಗೆಗಳು, ಎಂಜಿನಿಯರಿಂಗ್ ಸ್ಟೋರ್ಸ್, ತಂತ್ರಜ್ಞ ಕೆಲಸಗಳು ಇವೆ. ಈ ಎಲ್ಲ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆಯನ್ನು ಕೇಳಲಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕತೆಗೆ ತಕ್ಕಂತೆ ಉದ್ಯೋಗ ನೋಡಿಕೊಂಡು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ- ಆಯಾಯ ಉದ್ಯೋಗಗಳಿಗೆ ಸಂಬಂಧಿಸಿದಂತೆ ಕೇಳಲಾಗಿದೆ. (ಐಟಿಐ ಇಂದ ಪಿಜಿವರೆಗೆ ವಿದ್ಯಾರ್ಹತೆ ಕೇಳಲಾಗಿದೆ)
ವಯಸ್ಸಿನ ಮಿತಿ- 27 ರಿಂದ 50 ವರ್ಷಗಳು
ಮಾಸಿಕ ಸಂಬಳ- ಹುದ್ದೆಗಳಿಗೆ ತಕ್ಕಂತೆ ಬೇರೆ ಬೇರೆ ಇದೆ
(₹24616, ₹57920, ₹31856, ₹57920, ₹80720, 141260 ರೂಪಾಯಿಗಳು)
ಇದನ್ನೂ ಓದಿ:500ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು.. SI, ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ ಹುದ್ದೆಗಳು ಖಾಲಿ
ವಯೋಮಿತಿ ಸಡಿಲಿಕೆ:
- ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
- ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 05 ವರ್ಷಗಳು
- ವಿಷೇಶ ಚೇತನರು ಅಭ್ಯರ್ಥಿಗಳು: 10 ವರ್ಷಗಳು
ಒಟ್ಟು ಎಷ್ಟು ಹುದ್ದೆಗಳು ಇವೆ..?
188
ಕೆಲಸ ಮಾಡುವ ಸ್ಥಳ ಯಾವುದು?
ಭಾರತದ್ಯಾಂತ
ಕೆಲಸದ ಹೆಸರು ಏನು?.
ತರಬೇತಿ, ಮ್ಯಾನೇಜ್‌ಮೆಂಟ್ ತರಬೇತಿ
ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿ, ಒಬಿಸಿ ಅಭ್ಯರ್ಥಿಗಳು: 500 ರೂ.
- ಎಸ್ಸಿ, ಎಸ್ಟಿ ಅಭ್ಯರ್ಥಿಗಳು: ಇಲ್ಲ
- ಪಾವತಿ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ-
30 ನವೆಂಬರ್ 2024
ಕಂಪ್ಯೂಟರ್ ಬೇಸ್ ಟೆಸ್ಟ್ ದಿನಾಂಕ
22 ಡಿಸೆಂಬರ್ 2024
ಇದನ್ನೂ ಓದಿ: ಈ ಜಿಲ್ಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಎಷ್ಟು ಉದ್ಯೋಗಗಳು ಖಾಲಿ ಇವೆ?
ಪ್ರಮುಖ ಲಿಂಕ್- https://www.indiaseeds.com/career/2024(2)Rec/RecAdv2024.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ