Advertisment

ದೇಶದಲ್ಲಿ 6 ತಿಂಗಳಲ್ಲಿ 30 ಸಾವಿರ ಜನರಿಗೆ ಹೂಡಿಕೆ ಹೆಸರಿನಲ್ಲಿ ಪಂಗನಾಮ : ಸೈಬರ್ ಕ್ರೈಮ್ ಗಳಿಂದ 1,500 ಕೋಟಿ ರೂ. ಕಳೆದುಕೊಂಡ ಜನರು

ದೇಶದಲ್ಲಿ ಹೂಡಿಕೆ ಹೆಸರಿನಲ್ಲಿ ಜನರನ್ನು ವಂಚಿಸುವ ಸೈಬರ್ ಕ್ರೈಮ್ ಗಳು ಹೆಚ್ಚಾಗುತ್ತಿವೆ. ಕಳೆದ 6 ತಿಂಗಳಿನಲ್ಲಿ 30 ಸಾವಿರ ಜನರು ವಂಚನೆಗೊಳಗಾಗಿದ್ದು, 1,500 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ವಂಚನೆಗೊಳಗಾದವರ ಪೈಕಿ ಬೆಂಗಳೂರಿಗರು ಶೇ.26 ರಷ್ಟು ಇದ್ದಾರೆ.

author-image
Chandramohan
CYBER CRIME 02

ಹೂಡಿಕೆಯ ಹಣಕಾಸು ವಂಚನೆಗಳಿಂದ 1,500 ಕೋಟಿ ರೂ ನಷ್ಟ!

Advertisment
  • ಹೂಡಿಕೆಯ ಹಣಕಾಸು ವಂಚನೆಗಳಿಂದ 1,500 ಕೋಟಿ ರೂ ನಷ್ಟ!
  • 6 ತಿಂಗಳಲ್ಲಿ 30 ಸಾವಿರ ಜನರಿಗೆ ಹೂಡಿಕೆ ಹೆಸರಿನಲ್ಲಿ ಪಂಗನಾಮ
  • ವಂಚನೆಗೊಳಗಾದವರ ಪೈಕಿ ಶೇ.26 ರಷ್ಟು ಜನರು ಬೆಂಗಳೂರಿಗರು!

ಕಳೆದ ಆರು ತಿಂಗಳಲ್ಲಿ ಪ್ರಮುಖ ನಗರಗಳಲ್ಲಿ 30,000 ಕ್ಕೂ ಹೆಚ್ಚು ಜನರು ಹೂಡಿಕೆ ಹೆಸರಿನಲ್ಲಿ  ಆನ್ ಲೈನ್ ಸೈಬರ್‌ ವಂಚನೆಗಳಿಗೆ ಒಳಗಾಗಿದ್ದಾರೆ. ಹೂಡಿಕೆ ಹೆಸರಿನ  ಸೈಬರ್ ವಂಚನೆಗಳಿಂದ  1,500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ  ಎಂದು ಗೃಹ ಸಚಿವಾಲಯದ ಸೈಬರ್ ವಿಭಾಗದ ವರದಿ ತಿಳಿಸಿದೆ. ಹಣ ಕಳೆದುಕೊಂಡ ವ್ಯಕ್ತಿಗಳಲ್ಲಿ ಹೆಚ್ಚಿನವರು 30 ರಿಂದ 60 ವರ್ಷ ವಯಸ್ಸಿನವರಾಗಿದ್ದರೆ, ಬೆಂಗಳೂರು, ದೆಹಲಿ-ಎನ್‌ಸಿಆರ್ ಮತ್ತು ಹೈದರಾಬಾದ್‌ಗಳು ಸುಮಾರು ಶೇ. 65 ರಷ್ಟು ಪ್ರಕರಣಗಳು ದಾಖಲಾಗಿವೆ. 

Advertisment

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ವರದಿಯ ಪ್ರಕಾರ, ಬೆಂಗಳೂರು ನಗರವು ಅತಿ ಹೆಚ್ಚು ಆರ್ಥಿಕ ನಷ್ಟವನ್ನು  ಸೈಬರ್ ಕ್ರೈಮ್ ಗಳಿಂದ ಅನುಭವಿಸುತ್ತಿದೆ.  ಇದು ಒಟ್ಟು ನಷ್ಟಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು (ಶೇಕಡಾ 26.38) ನಷ್ಟವನ್ನು ಬೆಂಗಳೂರಿಗರು ಅನುಭವಿಸಿದ್ದಾರೆ. 

ಅನುಮಾನಾಸ್ಪದ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ಅಪರಾಧಿಗಳು ನಡೆಸುವ ಪ್ರಮುಖ ತಾಣಗಳು ಈ ನಗರಗಳಾಗಿವೆ.   ವಿವಿಧ ಉದ್ಯೋಗಗಳಲ್ಲಿರುವವರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆಗಳನ್ನು ಎಸಗಲಾಗಿದೆ. ವಂಚನೆಗೊಳಗಾದವರ ಪೈಕಿ ಶೇ.76 ರಷ್ಟು ಮಂದಿ 30-60 ವರ್ಷ ವಯಸ್ಸಿನವರು . ದುಡಿಯುವ ವಯಸ್ಸಿನಲ್ಲಿ ಇರುವವರ ಆರ್ಥಿಕ ಮಹತ್ವಾಕಾಂಕ್ಷೆಯನ್ನು ಬಳಸಿಕೊಂಡು ಅವರನ್ನು ವಂಚಿಸಿ, ಅವರ ಹಣವನ್ನು ಸೈಬರ್ ಕ್ರೈಮ್ ಮೂಲಕ ದೋಚಲಾಗಿದೆ. 

CYBER CRIME



ಇನ್ನೂ ಸೈಬರ್ ಕ್ರೈಮ್ ಗಳಿಂದ ವಂಚನೆಗೊಳಗಾದವರ ಪೈಕಿ  ಹಿರಿಯ ನಾಗರಿಕರು ಶೇ.8.62 ರಷ್ಟಿದ್ದಾರೆ. 60 ವರ್ಷ ಮೇಲ್ಪಟ್ಟ 2,829 ಮಂದಿ ಸೈಬರ್ ಕ್ರೈಮ್ ಗಳಿಂದ ವಂಚನೆಗೊಳಗಾಗಿದ್ದಾರೆ.  
ಸೈಬರ್ ಹಗರಣಗಳು ಸಣ್ಣ ಘಟನೆಗಳಲ್ಲ. ದೊಡ್ಡ ಮೊತ್ತವನ್ನು ಜನರಿಂದ ದೋಚಲಾಗಿದೆ. ಸೈಬರ್ ಹಗರಣಗಳ ಸರಾಸರಿ ಮೊತ್ತ 51.38 ಲಕ್ಷ ರೂಪಾಯಿ.  ಹೂಡಿಕೆ ಸ್ಕೀಮ್ ಗಳ ಹೆಸರಿನಲ್ಲಿ ಜನರ ಹಣವನ್ನು ದೋಚಲಾಗಿದೆ. 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನರು ಸರಾಸರಿ 8 ಲಕ್ಷ ರೂಪಾಯಿಯನ್ನು ಹಣ ಹೂಡಿಕೆ ಹೆಸರಿನ ಸೈಬರ್ ವಂಚನೆಗಳಿಂದ ಕಳೆದುಕೊಂಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment

Investment cyber crimes
Advertisment
Advertisment
Advertisment