/newsfirstlive-kannada/media/media_files/2025/11/10/rdx-found-with-jk-doctor-2025-11-10-15-24-47.jpg)
ಬಂಧಿತ ವೈದ್ಯನಿಂದ ವಶಪಡಿಸಿಕೊಂಡ ರೈಫಲ್
ರಾಷ್ಟ್ರ ರಾಜಧಾನಿ ದೆಹಲಿಯ ಬಳಿ ಭಾರಿ ಪ್ರಮಾಣದ ಸ್ಪೋಟಕ ಪತ್ತೆಯಾಗಿವೆ. ದೆಹಲಿಗೆ ಹೊಂದಿಕೊಂಡಂತೆಯೇ ಇರುವ ಫರೀದಾಬಾದ್ ನಗರದಲ್ಲಿ 350 ಕೆಜಿ ಆರ್‌ಡಿಎಕ್ಸ್ ಪತ್ತೆಯಾಗಿದೆ. ಜೊತೆಗೆ ಒಂದು ಅಸಾಲ್ಟ್ ರೈಫಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . ಜಮ್ಮು ಕಾಶ್ಮೀರ ಪೊಲೀಸರು ತಮಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಆರ್‌ಡಿಎಕ್ಸ್ ವಶಪಡಿಸಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್ ಹಾಕಲಾಗಿತ್ತು. ಆ ಪೋಸ್ಟರ್ ಹಾಕಿದ ಕೇಸ್ ತನಿಖೆ ನಡೆಸಿದ್ದ ಜಮ್ಮು ಕಾಶ್ಮೀರ ಪೊಲೀಸರು, ಉತ್ತರ ಪ್ರದೇಶದ ಸಹರಾನ್ ಪುರದಲ್ಲಿದ್ದ ಕಾಶ್ಮೀರಿ ವೈದ್ಯನನ್ನು ಬಂಧಿಸಿದ್ದಾರೆ.
ಕಾಶ್ಮೀರಿ ವೈದ್ಯನನ್ನು ವಿಚಾರಣೆ ನಡೆಸಿದಾಗ, ಮತ್ತೊಬ್ಬ ವೈದ್ಯ ಮುಜಮ್ಮಿಲ್ ಶಕೀಲ್ ಎಂಬಾತನ ಬಗ್ಗೆ ಮಾಹಿತಿ ಸಿಕ್ಕಿದೆ. ಫರೀದಾಬಾದ್ ನಲ್ಲಿ ಡಾಕ್ಟರ್ ಆದಿಲ್ ಅಹ್ಮದ್ ರಾಥರ್ ನ ವಿಚಾರಣೆಯ ಸಮಯದಲ್ಲಿ ಮುಜಮೀಲ್ ಶಕೀಲ್ ಎಂಬ ವೈದ್ಯನ ಲಾಕರ್ ನಲ್ಲಿ ಆರ್‌ಡಿಎಕ್ಸ್ ಮತ್ತು ಅಸಾಲ್ಟ್ ರೈಫಲ್ ಇಟ್ಟಿರುವ ಮಾಹಿತಿ ಸಿಕ್ಕಿದೆ. ತಕ್ಷಣವೇ ಪೊಲೀಸರು 350 ಕೆಜಿ ಆರ್‌ಡಿಎಕ್ಸ್ ಮತ್ತು ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮುಜಮ್ಮೀಲ್ ಶಕೀಲ್ ಕೂಡ ಜಮ್ಮು ಕಾಶ್ಮೀರದ ಪುಲ್ವಾಮಾದವನಾಗಿದ್ದು, ಫರಿದಾಬಾದ್ ನ ಆಲ್ ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. 350 ಕೆಜಿ ಸ್ಫೋಟಕಗಳೊಂದಿಗೆ 20 ಟೈಮರ್‌ಗಳು ಸಹ ಪತ್ತೆಯಾಗಿವೆ ಎಂದು ಫರಿದಾಬಾದ್ ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಒಂದು ಪಿಸ್ತೂಲ್, ಮೂರು ಮ್ಯಾಗಜೀನ್‌ಗಳು ಮತ್ತು ವಾಕಿ-ಟಾಕಿ ಸೆಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
/filters:format(webp)/newsfirstlive-kannada/media/media_files/2025/11/10/rdx-found-with-jk-doctor02-2025-11-10-15-26-12.jpg)
ಬಂಧಿತ ವೈದ್ಯ ಉಗ್ರರು
ಮೂಲಗಳು ಹೇಳುವಂತೆ, ಅಕ್ಟೋಬರ್ 27 ರಂದು ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡವು. ಸ್ಥಳೀಯ ಪೊಲೀಸರು ಈ ವಿಷಯವನ್ನು ತನಿಖೆ ಮಾಡಿದರು . ಸಿಸಿಟಿವಿ ದೃಶ್ಯಾವಳಿಗಳು ರಾಥರ್ ಪೋಸ್ಟರ್‌ಗಳನ್ನು ಹಾಕುತ್ತಿರುವುದು ಕಂಡುಬಂದಿದೆ. ಅವರನ್ನು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪತ್ತೆಹಚ್ಚಿ ಕಳೆದ ವಾರ ಬಂಧಿಸಲಾಯಿತು. ರಾಥರ್ ಕಳೆದ ವರ್ಷ ಅಕ್ಟೋಬರ್ ವರೆಗೆ ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಪೊಲೀಸರು ಅನಂತ್‌ನಾಗ್‌ನಲ್ಲಿರುವ ಅವರ ಲಾಕರ್ ಅನ್ನು ಶೋಧಿಸಿದಾಗ, ಒಂದು ಅಸಾಲ್ಟ್ ರೈಫಲ್ ಪತ್ತೆಯಾಗಿದೆ. ವಿಚಾರಣೆಯ ಸಮಯದಲ್ಲಿ ಅವರು ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಫರಿದಾಬಾದ್‌ನಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಂಡರು.
ಇನ್ನೂ ಆದಿಲ್ ಅಹ್ಮದ್ ರಾಥರ್ ಮತ್ತು ಮುಜಮೀಲ್ ಶಕೀಲ್ ಇಬ್ಬರೂ ದೇಶಾದ್ಯಂತ ಉಗ್ರಗಾಮಿ ಕೃತ್ಯ ನಡೆಸಲು ಈ ಭಾರಿ ಪ್ರಮಾಣದ ಆರ್‌ಡಿಎಕ್ಸ್ ಮತ್ತು ಅಸಾಲ್ಟ್ ರೈಫಲ್ ಸಂಗ್ರಹಿಸಿಟ್ಟುಕೊಂಡಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಉಗ್ರಗಾಮಿ ಸಂಘಟನೆಗಳು ಉನ್ನತ ಶಿಕ್ಷಣ ಪಡೆದವರನ್ನು ತಮ್ಮ ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ 15 ದಿನಗಳ ಅವಧಿಯಲ್ಲಿ ಈ ಇಬ್ಬರು ವೈದ್ಯರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಫರೀದಾಬಾದ್ ಪೊಲೀಸ್ ಕಮೀಷನರ್ ಸತ್ಯೇಂದ್ರ ಕುಮಾರ್ ಗುಪ್ತಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us