/newsfirstlive-kannada/media/media_files/2025/10/30/mumbai-child-hostage-2025-10-30-16-43-47.jpg)
ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಪೋವಾಯಿ ಪ್ರದೇಶದಲ್ಲಿ ಇಂದು ಮಧ್ಯಾಹ್ನ 20 ಶಾಲಾ ವಿದ್ಯಾರ್ಥಿಗಳನ್ನು ದುಷ್ಕರ್ಮಿಯೊಬ್ಬ ಒತ್ತೆಯಾಳಾಗಿರಿಸಿಕೊಂಡ ಘಟನೆ ನಡೆದಿದೆ. ಮೊದಲಿಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದುಷ್ಕರ್ಮಿ, ಕಟ್ಟಡವೊಂದರಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ. ಬಳಿಕ 80 ವಿದ್ಯಾರ್ಥಿಗಳನ್ನು ಹೊರಗೆ ಹೋಗಲು ಬಿಟ್ಟಿದ್ದಾನೆ. ಬಳಿಕ 20-25 ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ .
ಆರೋಪಿಯನ್ನು ರೋಹಿತ್ ಆರ್ಯ ಎಂದು ಗುರುತಿಸಲಾಗಿದೆ. ಈತ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಳ್ಳುವ ಮುನ್ನ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾನೆ. ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಆಲರ್ಟ್ ಆದ ಮುಂಬೈ ಪೊಲೀಸರು ಱಪಿಡ್ ರೆಸ್ಪಾನ್ಸ್ ಟೀಮ್ ಅನ್ನು ನಿಯೋಜಿಸಿದ್ದಾರೆ. ಆರೋಪಿಯ ವಿರುದ್ಧ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಎಲ್ಲ 20-25 ಮಕ್ಕಳು ಕೂಡ ಸುರಕ್ಷಿತವಾಗಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ನೀವು ಮಾಡುವ ಸಣ್ಣ ತಪ್ಪು ಕೂಡ ನನಗೆ ಟ್ರಿಗರ್ ಮಾಡುತ್ತೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ರೋಹಿತ್ ಆರ್ಯ ವಿಡಿಯೋದಲ್ಲಿ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us