/newsfirstlive-kannada/media/media_files/2025/10/22/gold-buying-2025-10-22-12-56-58.jpg)
ಚಿನ್ನದ ಬೆಲೆ ಏರಿಕೆಗೆ ವ್ಯಂಗ್ಯದ ವಿಡಿಯೋ ಮಾಡಿದ ಕಮಲೇಶ್ ಮೂರ್ತಿ
ಧನತೇರಸ್ ಮತ್ತು ದೀಪಾವಳಿ ಹಬ್ಬದ ವೇಳೆ ಮನೆಗೆ ಚಿನ್ನ, ಬೆಳ್ಳಿ ಆಭರಣ ಖರೀದಿ ಮಾಡಿ ತರುವುದು ಒಳ್ಳೆಯದು ಎಂಬ ನಂಬಿಕೆ ಇದೆ. ಆದರೇ, ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೇರಿರುವುದರಿಂದ ಚಿನ್ನ, ಬೆಳ್ಳಿ ಖರೀದಿಗೆ ಲಕ್ಷಗಟ್ಟಲೇ ಹಣ ಬೇಕು. ಆದರೇ, ಈ ಬೆಲೆ ಏರಿಕೆಯನ್ನು ಹಾಸ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ವ್ಯಕ್ತಿಯೊಬ್ಬರು ಹಾಕಿದ್ದಾರೆ.
ಕಮಲೇಶ್ ಮೂರ್ತಿ ಅವರು, ಇನ್ಸಾಟಾಗ್ರಾಮ್ ನಲ್ಲಿ ಹಾಕಿರುವ ವಿಡಿಯೋದಲ್ಲಿ ನಾವು 1.5 ಕೆಜಿ ಗೋಲ್ಡ್ ಖರೀದಿ ಮಾಡಿ ಮನೆಗೆ ತಂದೆವು ಎಂದು ವಿಡಿಯೋಗೆ ಟೈಟಲ್ ಹಾಕಿದ್ದಾರೆ. ಹಾಯ್ ಗಾಯ್ಸ್, ನಾವು ಈಗಷ್ಟೇ ಧನತೇರಸ್ ಮತ್ತು ದೀಪಾವಳಿ ಹಬ್ಬಕ್ಕಾಗಿ ಶಾಪಿಂಗ್ ಮಾಡಿ ಬಂದೆವು. ನಾವು 1.5 ಕೆಜಿ ಗೋಲ್ಡ್ ಅನ್ನು ಬೇರೆ ಬೇರೆ ಶಾಪ್ ಗಳಿಂದ ಖರೀದಿ ಮಾಡಿ ತಂದೆವು ಎಂದು ಹೇಳಿದ್ದಾರೆ. ಇದನ್ನು ಕೇಳಿ ಜನರು ಶಾಕ್ ಆಗಬಹುದು. ಬಳಿಕ ಮಾತು ಮುಂದುವರಿಸಿ, ನಾವು ಬ್ರಿಟಾನಿಯಾ ಗೋಲ್ಡ್ 500 ಗ್ರಾಂ, ಟಾಟಾ ಟೀ ಗೋಲ್ಡ್ 500 ಗ್ರಾಂ ಮತ್ತು ಫಾರ್ಚೂನ್ ಗೋಲ್ಡ್ ಸನ್ ಪ್ಲವರ್ ಆಯಿಲ್ 500 ಗ್ರಾಂ ಅನ್ನು ಬೇರೆ ಬೇರೆ ಅಂಗಡಿಗಳಿಂದ ಖರೀದಿಸಿ ತಂದೆವು. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದು ಎಂದು ಕಮಲೇಶ್ ಮೂರ್ತಿ ವಿಡಿಯೋದಲ್ಲಿ ಹೇಳಿದ್ದಾರೆ. ಆ ವಿಡಿಯೋದ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ ನೋಡಿ.
ಈ ಮೂಲಕ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯನ್ನು ಹಾಸ್ಯಮಯವಾಗಿ ವಿಡಿಯೋ ಮಾಡಿದ್ದಾರೆ.
ವಿಡಿಯೋದ ಮೇಲ್ಬಾಗ 1.5 ಕೆಜಿ ಗೋಲ್ಡ್ ಖರೀದಿ ಎಂದು ಟೈಟಲ್ ಹಾಕಿದ್ದಾರೆ. ಆದರೇ, ವಿಡಿಯೋವನ್ನು ಕೊನೆಯವರೆಗೂ ನೋಡಿದಾಗ, ಖರೀದಿ ಮಾಡಿದ್ದು ಅಸಲಿ ಚಿನ್ನವನ್ನಲ್ಲ. ಬ್ರಿಟಾನಿಯಾ ಗೋಲ್ಡ್ ಬಿಸ್ಕೆಟ್ ಮತ್ತು ಟಾಟಾ ಟೀ ಗೋಲ್ಡ್ ಹೆಸರಿನ ಟೀ ಪೌಡರ್ ಅನ್ನೋದು ಗೊತ್ತಾಗುತ್ತೆ.
ಇನ್ನೂ ಈ ವಿಡಿಯೋಗೆ ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ನಾವು 8 ಕೆಜಿ ಗೋಲ್ಡ್ ತಂದೆವು ಎಂದಿದ್ದಾರೆ. 5 ಕೆಜಿ ಸನ್ ಪ್ಲವರ್ ಗೋಲ್ಡ್ ಆಯಿಲ್, 1 ಕೆಜಿ ಚಕ್ರ ಟೀ ಗೋಲ್ಡ್, 2 ಕೆಜಿ ನೆಸಕೆಫೇ ಕಾಫಿ ಗೋಲ್ಡ್ ಎಂದು ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.