/newsfirstlive-kannada/media/media_files/2025/12/08/actor-dillip-acquitted-in-kidnapping-case-2025-12-08-12-47-18.jpg)
ಕೇರಳದ ನಟ ದೀಲೀಪ್ ವಿರುದ್ಧ ಕಿಡ್ನ್ಯಾಪ್ ಮತ್ತು ಲೈಂಗಿಕ ಕಿರುಕುಳ ಕೇಸ್ ಬಗ್ಗೆ ಇಂದು ತೀರ್ಪು ಪ್ರಕಟಿಸಿದೆ. ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ತೀರ್ಪು ಪ್ರಕಟಿಸಿದ್ದಾರೆ. 2017 ರ ಫೆಬ್ರವರಿ 17 ರಂದು ನಟಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಕೇಸ್ ನಲ್ಲಿ ತೀರ್ಪು ಪ್ರಕಟವಾಗಿದೆ. ಈ ಕೇಸ್ ನಲ್ಲಿ ನಟ ದಿಲೀಪ್ 8 ನೇ ಆರೋಪಿಯಾಗಿದ್ದರು.
ನಟ ದಿಲೀಪ್ ರನ್ನು ಖುಲಾಸೆಗೊಳಿಸಿ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಿಡ್ನ್ಯಾಪ್, ಗ್ಯಾಂಗ್ ರೇಪ್ ಕೇಸ್ ನಲ್ಲಿ ದೀಲೀಪ್ ರನ್ನು ಖುಲಾಸೆಗೊಳಿಸಲಾಗಿದೆ.
ಆದರೇ, ಕೇಸ್ ನ 1 ರಿಂದ 6 ರವರೆಗಿನ ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ.
ಕೇಸ್ ನಲ್ಲಿ 8ನೇ ಆರೋಪಿಯಾಗಿದ್ದ ನಟ ದೀಲೀಪ್ ಖುಲಾಸೆಯಾಗಿದ್ದಾರೆ.
ಪಲ್ಸರ್ ಸುನೀ ಇತರ ಐವರ ಜೊತೆ ಸೇರಿ ಬಲವಂತವಾಗಿ ನಟಿ ಮನೆಗೆ ನುಗ್ಗಿ ಕಾರಿನಲ್ಲಿ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪ ಇತ್ತು. 6 ಮಂದಿಯೂ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್ ನಲ್ಲಿ ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಆದರೇ, ದೀಲೀಪ್ ರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿದೆ.
ನಾನು ಈಗ ಸಂಪೂರ್ಣವಾಗಿ ರೀಲೀಫ್ ಆಗಿದ್ದೇನೆ, ನನ್ನ ಬೆಂಬಲಕ್ಕೆ ನಿಂತವರಿಗೆ ಕೃತೃಜ್ಞತೆಗಳು ಎಂದು ನಟ ದಿಲೀಪ್ ಹೇಳಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿತ್ತು. ವಕೀಲರು ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನನ್ನ ಇಮೇಜ್ ಮತ್ತು ಜೀವನವನ್ನು ಹಾಳು ಮಾಡಲು ಷಡ್ಯಂತ್ರ ಮಾಡಲಾಗಿತ್ತು ಎಂದು ನಟ ದೀಲೀಪ್ ಹೇಳಿದ್ದಾರೆ.
ಪಲ್ಸರ್ ಸುನೀ, ಮಾರ್ಟಿನ್ ಅಂಟೋನಿ, ಮಣಿಕಂದನ್, ವಿಜೇಶ್, ಸಲೀಂ ಅಲಿಯಾಸ್ ವಡಿವಾಲ್ ಸಲೀಂ, ಪ್ರದೀಪ್ ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ.
ಹತ್ತು ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಾಗಿತ್ತು.
ನಟ ದಿಲೀಪ್ ವಿರುದ್ಧ ಸಾಕ್ಷ್ಯನಾಶದ ಆರೋಪ ಕೂಡ ದಾಖಲಾಗಿತ್ತು. ನಟ ದಿಲೀಪ್ ಗೆ ಮತ್ತೊಬ್ಬ ಮಹಿಳೆಯ ಜೊತೆ ಸಂಬಂಧ ಇದೆ ಎಂದು ನಟಿಯೊಬ್ಬರಿಂದ ಮಂಜು ವಾರೀಯರ್ ಗೆ ಮಾಹಿತಿ ನೀಡಲಾಗಿತ್ತು. ದೀಲೀಪ್ ಮೊದಲ ಪತ್ನಿ ಮಂಜು ವಾರೀಯರ್ ಗೆ ನಟಿ ಮಾಹಿತಿ ನೀಡಿದ್ದರು. ಇದರಿಂದಾಗಿ ಆ ನಟಿಯನ್ನು ಕಿಡ್ನ್ಯಾಪ್ ದಿಲೀಪ್ ಸೂಚನೆ ಮೇರೆಗೆ ಕಿಡ್ನ್ಯಾಪ್ ಮಾಡಲಾಗಿತ್ತು ಎಂಬ ಆರೋಪ ಇತ್ತು. ದೀಲೀಪ್ ಸೂಚನೆಯ ಮೇರೆಗೆ ಉಳಿದ ಆರೋಪಿಗಳು ನಟಿಯನ್ನು ಕಿಡ್ನ್ಯಾಪ್ ಮಾಡಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಆದರೇ, ನಟ ದಿಲೀಪ್ ಈ ಆರೋಪವನ್ನು ನಿರಾಕರಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/08/actor-dillip-acquitted-in-kidnapping-case02-2025-12-08-12-54-57.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us