/newsfirstlive-kannada/media/media_files/2025/08/16/air_india-1-2025-08-16-23-10-18.jpg)
ನವದೆಹಲಿ: ಏರ್ ಇಂಡಿಯಾ ವಿಮಾನ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಆಗುವಾಗ ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು 150ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಗ್ವಾಲಿಯರ್ ಏರ್ಪೋರ್ಟ್ನಲ್ಲಿ ನಡೆದಿದೆ.
ಬೆಂಗಳೂರಿನಿಂದ ಬೆಳಗ್ಗೆ 10 ಗಂಟೆ 50 ನಿಮಿಷಕ್ಕೆ ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1:30ಕ್ಕೆ ಮಧ್ಯಪ್ರದೇಶದ ಗ್ವಾಲಿಯರ್ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಮೊದಲ ಸಲ ಲ್ಯಾಂಡಿಂಗ್ ಆಗುವಾಗ ಏರ್ ಇಂಡಿಯಾ ವಿಮಾನ ಒಂದೇ ಕಡೆ ವಾಲಿಕೊಂಡಿತ್ತು. ರನ್ವೇ ಮೇಲೆ ನಿಯಂತ್ರಣ ಕಳೆದುಕೊಂಡಿದ್ದ ವಿಮಾನ. ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡಿದ್ದ ಪೈಲಟ್ಗಳು ಟೇಕಾಫ್ ಮಾಡಿದ್ದರು.
ಇದನ್ನೂ ಓದಿ:ಡಿವೋರ್ಸ್ ಬಗ್ಗೆ ಪತ್ರ ಬರೆದು ಅಜಯ್ ರಾವ್ ಮನವಿ.. ಏನು ಹೇಳಿದರು?
ಎರಡನೇ ಪ್ರಯತ್ನದಲ್ಲಿ ಲ್ಯಾಂಡಿಂಗ್ ಮಾಡುವಾಗ ವಿಮಾನ ಸುರಕ್ಷಿತವಾಗಿದೆ. ವಿಮಾನ ಒಂದೇ ಕಡೆ ವಾಲಿದ್ದರಿಂದ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಗಾಬರಿಯಿಂದ ಚೀರಾಡಿ, ಕೂಗಾಡಿ ಗಾಬರಿ ಪಟ್ಟಿದ್ದರು. ವಿಮಾನದ ವೇಗ ಅಸಹಜವಾಗಿತ್ತು ಎಂದು ಪ್ರಯಾಣಿಕರು ದೂರಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಯಾಣಿಕರ ದೂರು ಸಲ್ಲಿಕೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ