/newsfirstlive-kannada/media/post_attachments/wp-content/uploads/2024/09/TIRUPATI_LADDU_CM.jpg)
ತಿರುಮಲ ತಿರುಪತಿ ದೇವಸ್ಥಾನದಲ್ಲಾದ(TTD) ‘ಲಡ್ಡು ಕಲಬೆರಕೆ ಪ್ರಕರಣ’ದ ತನಿಖೆ ನಡೆಸುತ್ತಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ, ಟಿಟಿಡಿ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಹಾಲಿ ರಾಜ್ಯಸಭಾ ಸಂಸದ ವೈ.ವಿ. ಸುಬ್ಬಾ ರೆಡ್ಡಿ ಅವರ ಆಪ್ತ ಸಹಾಯಕ ಚಿನ್ನ ಅಪ್ಪಣ್ಣನನ್ನು ಬಂಧಿಸಿದ್ದು, ನವೆಂಬರ್ 11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಪ್ಪಣ್ಣ TTDಯ ಖರೀದಿ ವಿಭಾಗದ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ದೇವಸ್ಥಾನಕ್ಕೆ ತುಪ್ಪ ಪೂರೈಸುವ ಎಲ್ಲಾ ಪೂರೈಕೆದಾರರ ವಿವರವನ್ನು 2022 ರಲ್ಲಿ ಪಡೆದುಕೊಂಡಿದ್ದಾನೆ. ನಂತರ ಅವನು ಭೋಲೆ ಬಾಬಾ ಡೈರಿಯ ಶ್ರೀನಿವಾಸ್ ಅವರಿಗೆ ಕರೆ ಮಾಡಿ TTDಗೆ ಪೂರೈಕೆ ಮಾಡುವ ಪ್ರತಿ ಕೆಜಿ ತುಪ್ಪಕ್ಕೆ 25 ರೂ. ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಭೋಲೆ ಬಾಬಾ ಡೈರಿಯ ಆಡಳಿತ ಮಂಡಳಿ ನಿರಾಕರಿಸಿದಾಗ, ಅಪ್ಪಣ್ಣ ದೇವಾಲಯದ ನಿಯಮಗಳಿಗೆ ವಿರುದ್ಧವಾಗಿ ಡೈರಿಯನ್ನು ಎರಡನೇ ಬಾರಿಗೆ ತಪಾಸಣೆ ನಡೆಸುವಂತೆ ಟಿಟಿಡಿಯ ಮ್ಯಾನೇಜರ್ ಮೇಲೆ ಒತ್ತಡ ಹೇರಿದ್ದಾನೆ. ಭೋಲೆ ಬಾಬಾ ಡೈರಿ 329 ರುಪಾಯಿಗೆ ಒಂದು ಕೇಜಿ ತುಪ್ಪ ಪೂರೈಸುತ್ತಿತ್ತು.
ನಂತರ ಪ್ರೀಮಿಯರ್ ಅಗ್ರಿ ಫುಡ್ಸ್ ಕಂಪನಿಯೊಂದಿಗೆ ಪ್ರತಿ ಕೆಜಿಗೆ 467 ರುಪಾಯಿಯಂತೆ ಒಪ್ಪಂದ ಮಾಡಿಸಿದ ಅಪ್ಪಣ್ಣ, ಸುಮಾರು 50 ಲಕ್ಷ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾನೆ.
ತಿರುಪತಿ ಲಡ್ಡುವನ್ನು ಪ್ರಾಣಿಗಳ ಕೊಬ್ಬನ್ನು ಬಳಸಿ ತಯಾರಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ, ತಿರುಪತಿ ಲಡ್ಡುವಿನ ವಿವಾದ ಭುಗಿಲೆದ್ದಿತು.
/filters:format(webp)/newsfirstlive-kannada/media/media_files/2025/10/31/laddu-case-chinna-appanna-arrested-2025-10-31-13-54-06.jpg)
ಬಂಧನಕ್ಕೊಳಗಾದ ಚಿನ್ನಅಪ್ಪಣ್ಣ ಹಾಗೂ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯ ವರದಿ ನೀಡಿದ್ದು, ಪ್ರಾಣಿಗಳ ಕೊಬ್ಬು ಇರೋದನ್ನು ಖಾತರಿ ಪಡಿಸಿದೆ. ನಂತರ ಅಧಿಕಾರಿಗಳು ಇವುಗಳನ್ನು ತಮಿಳುನಾಡಿನ ಡೈರಿಯೊಂದರಿಂದ ತಂದದ್ದು ಎಂದು ಪತ್ತೆ ಹಚ್ಚಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us