ಉಗ್ರರ ಗುಂಡೇಟು ತಿಂದ್ರೂ ಹಿಂದಕ್ಕೆ ಸರಿಯದ ಟೈಸನ್: 20 ಬಾರಿ ಎಸ್ಕೇಪ್ ಆಗಿದ್ದ ಉಗ್ರನ ಕಥೆ ಮುಗಿಸಿದ ಸೇನೆಯ ಶ್ವಾನ!

ದೇಶದ ರಕ್ಷಣೆಗಾಗಿ ಹೋರಾಡುವುದು ಕೇವಲ ಯೋಧರಲ್ಲ, ಸೇನೆಯ ಶ್ವಾನಗಳು ಕೂಡ ಯುದ್ಧಭೂಮಿಯಲ್ಲಿ ಮುನ್ನುಗ್ಗುತ್ತವೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಶ್ವಾನ ‘ಟೈಸನ್’ ತೋರಿದ ಪರಾಕ್ರಮದಿಂದಾಗಿ ಮೂವರು ಕುಖ್ಯಾತ ಜೈಷ್ ಉಗ್ರರನ್ನು ಸದೆಬಡಿಯಲಾಗಿದೆ.

author-image
Ganesh Kerekuli
Tyson
Advertisment

ದೇಶದ ರಕ್ಷಣೆಗಾಗಿ ಹೋರಾಡುವುದು ಕೇವಲ ಯೋಧರಲ್ಲ, ಸೇನೆಯ ಶ್ವಾನಗಳು ಕೂಡ ಪ್ರಾಣದ ಹಂಗು ತೊರೆದು ಯುದ್ಧಭೂಮಿಯಲ್ಲಿ ಮುನ್ನುಗ್ಗುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಶ್ವಾನ ‘ಟೈಸನ್’ (Tyson) ತೋರಿದ ಪರಾಕ್ರಮದಿಂದಾಗಿ ಮೂವರು ಕುಖ್ಯಾತ ಜೈಷ್ ಉಗ್ರರನ್ನು ಸದೆಬಡಿಯಲಾಗಿದೆ.

ಟೈಸನ್ ಸಾಹಸ ಹೇಗಿತ್ತು..?

ಭಾರತೀಯ ಸೇನೆಯ 2 ಪ್ಯಾರಾ (ಸ್ಪೆಷಲ್ ಫೋರ್ಸಸ್) ವಿಭಾಗಕ್ಕೆ ಸೇರಿದ ‘ಜರ್ಮನ್ ಶೆಫರ್ಡ್’ (German Shepherd) ತಳಿಯ ಶ್ವಾನವೇ ಟೈಸನ್. ಕಿಶ್ತ್ವಾರ್‌ನ ಛಾತ್ರೂ (Chhatroo) ಪ್ರದೇಶದ ದುರ್ಗಮ ಕಣಿವೆಯಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆ ನಡೆಸಿತ್ತು.

ಇದನ್ನೂ ಓದಿ: ರೋಹಿಣಿ ಸಿಂಧೂರಿಗೆ ಬಿಗ್ ಶಾಕ್: ಡಿ. ರೂಪಾ ಸಲ್ಲಿಸಿದ್ದ ಮಾನನಷ್ಟ ಕೇಸ್​​ಗೆ ಹೊಸ ತಿರುವು

Tyson (1)

ಈ ವೇಳೆ ಉಗ್ರರ ಅಡಗುತಾಣದೊಳಗೆ ತೆವಳುತ್ತಾ ನುಗ್ಗಿದ ಟೈಸನ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಟೈಸನ್ ಕಾಲಿಗೆ ಗುಂಡೇಟು ಬಿದ್ದಿದೆ. ಆದರೂ ಲೆಕ್ಕಿಸದೆ ಮುನ್ನುಗ್ಗಿ ಉಗ್ರರು ಅವಿತು ಕುಳಿತಿದ್ದ ನಿಖರವಾದ ಸ್ಥಳವನ್ನು ಯೋಧರಿಗೆ ತೋರಿಸಿಕೊಟ್ಟಿದೆ. ಟೈಸನ್ ನೀಡಿದ ಸುಳುವಿನ ಆಧಾರದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿ ಮೂವರು ಉಗ್ರರನ್ನು ಹತ್ಯೆಗೈದಿವೆ.

20 ಬಾರಿ ತಪ್ಪಿಸಿಕೊಂಡಿದ್ದ ಉಗ್ರನ ಅಂತ್ಯ

ಈ ಕಾರ್ಯಾಚರಣೆಯಲ್ಲಿ ಹತ್ಯೆಯಾದವರಲ್ಲಿ ಜೈಷ್-ಎ-ಮೊಹಮ್ಮದ್ (JeM) ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ 'ಸೈಫುಲ್ಲಾ' ಕೂಡ ಒಬ್ಬ. ಕಳೆದ ಎರಡು ವರ್ಷಗಳಿಂದ ಈ ಪ್ರಾಂತ್ಯದಲ್ಲಿ ಸಕ್ರಿಯವಾಗಿದ್ದ ಈತ, ಸುಮಾರು 20 ಬಾರಿ ಭದ್ರತಾ ಪಡೆಗಳ ಕೈಯಿಂದ ತಪ್ಪಿಸಿಕೊಂಡಿದ್ದ. ಕೊನೆಗೂ ಟೈಸನ್ ಸಹಾಯದಿಂದ ಆತನ ಆಟಕ್ಕೆ ಅಂತ್ಯ ಹಾಡಲಾಗಿದೆ. ಸ್ಥಳದಿಂದ 2 ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Tyson (2)

ಟೈಸನ್ ಆರೋಗ್ಯ ಸ್ಥಿರ

ಕಾರ್ಯಾಚರಣೆಯಲ್ಲಿ ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿರುವ ಟೈಸನ್‌ನನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಟೈಸನ್ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಅದರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬಂಗಾಳ ರಾಜಕೀಯದ ‘ಚಾಣಕ್ಯ’, ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಇನ್ನಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Army Dog Tyson
Advertisment