/newsfirstlive-kannada/media/media_files/2025/11/25/sterling-biotech-chethan-sandersara-2025-11-25-18-28-38.jpg)
ಸ್ಟರ್ಲಿಂಗ್ ಬಯೋಟೆಕ್ ಕಂಪನಿಯ ಚೇತನ್, ನಿತಿನ್ ಸಂದೇಶರ ಸೋದರರು
ಶತಕೋಟ್ಯಾಧಿಪತಿ ಸಹೋದರರಾದ ನಿತಿನ್ ಮತ್ತು ಚೇತನ್ ಸಂದೇಶರ $1.6 ಬಿಲಿಯನ್ ಬ್ಯಾಂಕ್ ವಂಚನೆಯಲ್ಲಿ ತಮ್ಮ ಬಾಕಿ ಮೊತ್ತದ ಮೂರನೇ ಒಂದು ಭಾಗವನ್ನು ಪಾವತಿಸಿದರೆ ಅವರ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಕೈಬಿಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಇದು ಇತರ ಅಪರಾಧಿಗಳು ಇದೇ ರೀತಿಯ ಪರಿಹಾರಗಳನ್ನು ಪಡೆಯಲು ಪ್ರೇರೇಪಿಸಬಹುದು ಎಂಬ ಚರ್ಚೆಗೆ ಕಾರಣವಾಗಿದೆ. ಆದರೇ, ಸುಪ್ರೀಂಕೋರ್ಟ್ ಈ ಕೇಸ್ ನ ಆದೇಶವು ಬೇರೆ ಕೇಸ್ ಗಳಲ್ಲೂ ಇದೇ ರೀತಿಯ ಪರಿಹಾರಕ್ಕೆ ಪ್ರೇರಣೆಯಾಗಬಾರದು ಎಂದು ಕೂಡ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ದೇಶೀಯ ಬ್ಯಾಂಕ್ ಸಾಲಗಳನ್ನು ಮರುಪಾವತಿಸುವಲ್ಲಿ ವಿಫಲರಾದ ಆರೋಪದ ನಂತರ, ಔಷಧಗಳಿಂದ ಇಂಧನದವರೆಗೆ ಕೈಗಾರಿಕೆಗಳನ್ನು ವಿಸ್ತರಿಸಿದ ಕಂಪನಿಗಳ ಸಹೋದರರು 2017 ರಲ್ಲಿ ಅಲ್ಬೇನಿಯನ್ ಪಾಸ್‌ಪೋರ್ಟ್‌ಗಳನ್ನು ಬಳಸಿ ಭಾರತದಿಂದ ಪಲಾಯನ ಮಾಡಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿವೆ. ಆದರೇ, ನಿತಿನ್ ಸಂದೇಶರ, ಚೇತನ್ ಸಂದೇಶರ ತಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಕೇಸ್ ಅನ್ನು ನಿರಾಕರಿಸುತ್ತಿದ್ದಾರೆ.
ಶುಕ್ರವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುಪ್ರೀಂ ಕೋರ್ಟ್ ಆದೇಶವನ್ನು ಮೊದಲ ಬಾರಿಗೆ ವರದಿ ಮಾಡಲಾಗುತ್ತಿದೆ. ಸಹೋದರರ ವಕೀಲ ಮುಕುಲ್ ರೋಹಟಗಿ ಅವರು $570 ಮಿಲಿಯನ್ ಪರಿಹಾರವನ್ನು ಪಾವತಿಸಲು ಒಪ್ಪುವುದಾಗಿ ಹೇಳಿದ್ದಾರೆ. ಡಿಸೆಂಬರ್ 17 ರ ಗಡುವನ್ನು ನಿಗದಿಪಡಿಸಲಾಗಿದೆ. ಡಿಸೆಂಬರ್ 17ರೊಳಗೆ ನಿತಿನ್ , ಚೇತನ್ ಸಂದೇಶರ ಭಾರತದ ರೂಪಾಯಿ ಲೆಕ್ಕದಲ್ಲಿ 5,100 ಕೋಟಿ ರೂಪಾಯಿ ಹಣವನ್ನು ಭಾರತದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ ಮರುಪಾವತಿ ಮಾಡಬೇಕು. 5,100 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಗಳಿಗೆ ಮರುಪಾವತಿ ಮಾಡಿದರೇ, ಸಿಬಿಐ , ಇ.ಡಿ. ಸೇರಿದಂತೆ ಎಲ್ಲ ಕೇಸ್ ಗಳಿಂದ ಚೇತನ್ ಸಂದೇಶರ, ನಿತಿನ್ ಸಂದೇಶರಗೆ ರಿಲೀಫ್ ಸಿಗಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹಣವನ್ನು ಮರುಪಾವತಿ ಮಾಡಿಸಿಕೊಳ್ಳುವ ಉದ್ದೇಶದಿಂದ ಈ ಆದೇಶ ನೀಡುತ್ತಿದ್ದೇವೆ. ಕೇಸ್ ಗಳಿಂದ ಬ್ಯಾಂಕ್ ಗಳಿಗೆ ಹಣ ವಾಪಸ್ ಬರಲ್ಲ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ ಸಾಲ ಕೊಟ್ಟಿರುವ ಹಣ ವಾಪಸ್ ಬರೋದು ಮುಖ್ಯ ಎಂಬ ಕಾರಣದಿಂದ ಈ ಆದೇಶ ನೀಡುತ್ತಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ನಿತಿನ್ ಮತ್ತು ಚೇತನ್ ಸಂದೇಶರ ಮತ್ತು ಇತರ ಸಹ-ಆರೋಪಿಗಳ ವಿರುದ್ಧ ಸಿಬಿಐ, ಇಡಿ ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಮೊತ್ತವನ್ನು ಠೇವಣಿ ಮಾಡಿದ ನಂತರ ಮುಕ್ತಾಯಗೊಳಿಸಬಹುದು ಎಂದು ಆದೇಶವು ಷರತ್ತು ವಿಧಿಸಿದೆ.
"ಅರ್ಜಿದಾರರು OTS ನಲ್ಲಿ ಇತ್ಯರ್ಥಪಡಿಸಿದ ಮೊತ್ತವನ್ನು ಠೇವಣಿ ಮಾಡಲು ಸಿದ್ಧರಿದ್ದರೆ ಮತ್ತು ಸಾರ್ವಜನಿಕ ಹಣವು ಸಾಲದಾತ ಬ್ಯಾಂಕುಗಳಿಗೆ ಹಿಂತಿರುಗಿದರೆ, ಕ್ರಿಮಿನಲ್ ಪ್ರಕ್ರಿಯೆಗಳ ಮುಂದುವರಿಕೆಯು ಯಾವುದೇ ಉಪಯುಕ್ತ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಈ ನ್ಯಾಯಾಲಯವು ಆರಂಭದಿಂದಲೂ ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಹಣ ಮತ್ತು ಬಡ್ಡಿಯನ್ನು ರಕ್ಷಿಸುವ ಮತ್ತು ಲಂಚ ಪಡೆದ ಮೊತ್ತವನ್ನು ಠೇವಣಿ ಮಾಡುವ ಉದ್ದೇಶದಿಂದ ವಿಚಾರಣೆಯ ಅವಧಿಯು ವಿಶಿಷ್ಟತೆಯನ್ನು ಸೂಚಿಸುತ್ತದೆ" ಎಂದು ಶುಕ್ರವಾರ ಸಾರ್ವಜನಿಕಗೊಳಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರವು ಈ ಕೇಸ್ ನಲ್ಲಿ ಒನ್ ಟೈಮ್ ಸೆಟಲ್ ಮೆಂಟ್ ಆಗಿ 5,100 ಕೋಟಿ ರೂಪಾಯಿ ಪಾವತಿಸುವಂತೆ ತಿಳಿಸಿರುವುದಾಗಿ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು. ಸ್ಟರ್ಲಿಂಗ್ ಬಯೋಟೆಕ್ ಕಂಪನಿಯ ಮಾಲೀಕರಾದ ಚೇತನ್, ನಿತಿನ್ ಸಂದೇಶರ ಬರೋಬ್ಬರಿ 5,383 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ ಗಳಿಂದ ಸಾಲ ಪಡೆದು ಮರುಪಾವತಿ ಮಾಡದೇ ವಿದೇಶಗಳಿಗೆ ಪಲಾಯನಗೈದಿದ್ದಾರೆ.
/filters:format(webp)/newsfirstlive-kannada/media/media_files/2025/08/11/supreme_court-2-2025-08-11-13-38-10.jpg)
ತನಿಖೆಯ ವೇಳೆ ಸಂದೇಸರಾ ಗ್ರೂಪ್‌ನ ವಿದೇಶಿ ಕಂಪನಿಗಳು ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಿಂದ ಸಾವಿರಾರು ಕೋಟಿ ಮೌಲ್ಯದ ಸಾಲಗಳನ್ನು ಪಡೆದುಕೊಂಡಿವೆ ಎಂದು ತಿಳಿದುಬಂದಿದೆ. ಆಂಧ್ರ ಬ್ಯಾಂಕ್, ಯುಕೋ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಈ ಸಾಲಗಳನ್ನು ಮಂಜೂರು ಮಾಡಿತ್ತು.
ಈ ಸಾಲಗಳ ಮೂಲಕ ಪಡೆದ ಹಣವನ್ನು ಅನಧಿಕೃತ ಉದ್ದೇಶಗಳಿಗಾಗಿ ಬೇರೆಡೆಗೆ ವರ್ಗಾಯಿಸಲಾಗಿದೆ. ಹಂತ ಹಂತವಾಗಿ ಮತ್ತು ದೇಶೀಯ ಮತ್ತು ಕಡಲಾಚೆಯ ಸಂಸ್ಥೆಗಳ ಸಂಕೀರ್ಣ ಜಾಲದ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ತನಿಖೆಯು ಬಹಿರಂಗಪಡಿಸಿದೆ. ಪ್ರಮುಖ ಪ್ರವರ್ತಕರು ತಮ್ಮ ನೈಜೀರಿಯಾದ ತೈಲ ವ್ಯವಹಾರಕ್ಕೆ ಹಣಕಾಸು ಒದಗಿಸಲು ಮಾತ್ರವಲ್ಲದೆ ವೈಯಕ್ತಿಕ ಲಾಭಕ್ಕಾಗಿಯೂ ಸಾಲದ ಮೊತ್ತವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಟರ್ಲಿಂಗ್ ಬಯೋಟೆಕ್ ಪ್ರಕರಣದಲ್ಲಿ ಸಂದೇಸರಾ ಗ್ರೂಪ್‌ನ 9,778 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us