ಉದ್ಯಮಿಯಿಂದ 10 ಕೋಟಿ ರೂ. ಸುಲಿಗೆಗೆ ಯತ್ನ : ಇಬ್ಬರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ಮುಂಬೈನಲ್ಲಿ ಕನಸ್ಟ್ರಕ್ಷನ್ ಉದ್ಯಮಿ ಅರವಿಂದ್ ಗೋಯಲ್ ಅವರನ್ನು ಹೆದರಿಸಿ, ಬೆದರಿಸಿ ಹಾಗೂ ಮಗನ ಮೇಲೆ ಸುಳ್ಳು ಕೇಸ್ ಹಾಕಿ 10 ಕೋಟಿ ರೂ.ವಸೂಲಿ ಮಾಡಲು ಇಬ್ಬರು ಮಹಿಳೆಯರು ಯತ್ನಿಸಿದ್ದರು. ಕೊನೆಗೆ ಅರವಿಂದ್, ಮಹಿಳೆಯರ ಹಣದ ಬೇಡಿಕೆಯ ಅಡಿಯೋ, ವಿಡಿಯೋ ರೆಕಾರ್ಡ್ ಮಾಡಿಕೊಂಡು ಟ್ರ್ಯಾಪ್ ಮಾಡಿದ್ದಾರೆ.

author-image
Chandramohan
EXTORTATION CASE IN MUMBAI

10 ಕೋಟಿ ರೂ. ಹಣ ಸುಲಿಗೆಗೆ ಯತ್ನಿಸಿಬ್ಬ ಇಬ್ಬರು ಮಹಿಳೆಯರ ಬಂಧನ

Advertisment
  • ಉದ್ಯಮಿ ಮಗನ ಮೇಲೆ ಸುಳ್ಳು ಕೇಸ್ ಹಾಕಿ ಹಣ ಸುಲಿಗೆಗೆ ಯತ್ನ
  • ಹಣ ಸುಲಿಗೆಗೆ ಯತ್ನಿಸಿದ ಆಡಿಯೋ ವಿಡಿಯೋ ರೆಕಾರ್ಡ್ ಮಾಡಿದ ಅರವಿಂದ್ ಗೋಯಲ್
  • ಬಳಿಕ ಮುಂಬೈನ ಪೊಲೀಸರಿಗೆ ದೂರು ನೀಡಿ ಮಹಿಳೆಯರ ಟ್ರ್ಯಾಪ್‌


ಮುಂಬೈ ಪೊಲೀಸರು ಉದ್ಯಮಿಯೊಬ್ಬರಿಂದ 10 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ  ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.  ಕನಸ್ಟ್ರಕ್ಷನ್ ಉದ್ಯಮಿ ಅರವಿಂದ್ ಗೋಯಲ್ , ಹೋಟೇಲ್ ನಲ್ಲಿ ತಮ್ಮ ಮಗ ರಿದಮ್ ಗೋಯಲ್ ಮದುವೆ ನಿಶ್ಚಿತಾರ್ಥ ಮಾಡಿದ್ದರು. ನಿಶ್ಚಿತಾರ್ಥದ ಬಳಿಕ ರಿದಮ್ ಗೋಯಲ್, ಲಿಫ್ಟ್ ನಲ್ಲಿ ಹೋಟೇಲ್ ನಿಂದ ಹೊರಬರುವಾಗ ಲಿಫ್ಟ್ ನಲ್ಲಿ ಮಹಿಳೆಯೊಬ್ಬರು ರಿದಮ್ ತಮ್ಮ ಮೇಲೆ ಲೇಸರ್ ಲೈಟ್ ಬಿಟ್ಟಿದ್ದಾನೆ ಎಂದು ಆರೋಪಿಸಿದ್ದರು. ಬಳಿಕ ಇಬ್ಬರ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು. ಸಣ್ಣ ಗಲಾಟೆ ಅಲ್ಲೇ ಅಂತ್ಯವಾಯಿತು. 
ಆದರೇ, ಗ್ರೌಂಡ್ ಪ್ಲೋರ್ ನಲ್ಲಿ ಹೋಟೇಲ್ ಬೌನ್ಸರ್ ಗಳು ರಿದಮ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಯಿತು. 

ನಂತರ ಅಮ್ರಿನಾ ಫೆರ್ನಾಂಡಿಸ್ ಅಲಿಯಾಸ್ ಆಲಿಸ್ ಎಂದು ಗುರುತಿಸಲ್ಪಟ್ಟ ಮಹಿಳೆ, ರಿದಮ್ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದರು . ತಾನು 8 ವಾರಗಳ ಗರ್ಭಿಣಿಯಾಗಿದ್ದೆ ಮತ್ತು ಈ ಘಟನೆಯಿಂದಾಗಿ ಗರ್ಭಪಾತವಾಗಿದೆ ಎಂದು ಹೇಳಿಕೊಂಡರು. ತನ್ನನ್ನು ಒದ್ದು ಮದ್ಯದ ಬಾಟಲಿಯಿಂದ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರಿದಮ್ ಮತ್ತು ಇತರರ ಮೇಲೆ  ಬಿಎನ್‌ಎಸ್ 89 ಸೆಕ್ಷನ್  (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು ಮತ್ತು ಅವರನ್ನು ಬಂಧಿಸಲಾಯಿತು.
▪️ಜಾಮೀನು ಪ್ರಕ್ರಿಯೆಗಳು ನಡೆಯುತ್ತಿರುವಾಗ, ಡಿಸೆಂಬರ್ 7 ರಂದು ಅರವಿಂದ್‌ಗೆ ಹೇಮಲತಾ ಬಾನೆ ಎಂದು ಗುರುತಿಸಿಕೊಂಡ ಮಹಿಳೆಯೊಬ್ಬರು ಕರೆ ಮಾಡಿ, ಅಮ್ರಿನಾಳ ಅತ್ತಿಗೆ ಎಂದು ಹೇಳಿಕೊಂಡು, ಹಣಕಾಸಿನ ಪರಿಹಾರವನ್ನು ಪ್ರಸ್ತಾಪಿಸಿದರು. ನಿರಾಕರಿಸಿದರೆ, ಅವರ ಮಗನ ಜೀವನ ಹಾಳಾಗುತ್ತದೆ ಮತ್ತು ಮಗ ರಿದಮ್  15 ರಿಂದ 20 ವರ್ಷಗಳ ಕಾಲ ಜೈಲಿನಿಂದ ಹೊರಬರುವುದಿಲ್ಲ ಎಂದು ಅವರು ವಾರ್ನಿಂಗ್ ನೀಡಿದ್ದರು. 

▪️ಡಿಸೆಂಬರ್ 8 ರಂದು ಸೆಷನ್ಸ್ ನ್ಯಾಯಾಲಯ ರಿದಮ್‌ಗೆ ಜಾಮೀನು ನೀಡಿದ್ದರೂ, ಅಮ್ರಿನಾ ಜಾಮೀನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಡಿಸೆಂಬರ್ 18 ರಂದು, ಹೈಕೋರ್ಟ್ ಜಾಮೀನನ್ನು ರದ್ದುಗೊಳಿಸಿತು.  ನಂತರ ಸುಲಿಗೆ ಬೇಡಿಕೆಗಳು ಹೆಚ್ಚಾದವು. ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ಸಭೆಗಳು ನಡೆದವು.  ಅಲ್ಲಿ ಹಣಕ್ಕೆ ಕೊಟ್ಟರೇ ಅಮ್ರಿನಾ ಪ್ರತಿಕೂಲವಾಗಿ ಕೋರ್ಟ್ ನಲ್ಲಿ ಹೇಳಿಕೆ ಕೊಡುತ್ತಾರೆ.  ಸಾಕ್ಷಿಗಳು ಸಾಕ್ಷ್ಯ ಹೇಳಲು ನಿರಾಕರಿಸುತ್ತಾರೆ ಎಂದು ಪ್ರಸ್ತಾಪಿಸಲಾಯಿತು.

▪️ಈ ಸಭೆಗಳಲ್ಲಿ, ಆರಂಭಿಕ ₹10 ಕೋಟಿ  ರೂಪಾಯಿಗೆ ಅಮ್ರಿನಾ, ಹೇಮಲತಾ ಬಾನೆ ಎಂಬ ಇಬ್ಬರು ಮಹಿಳೆಯರು  ಬೇಡಿಕೆ ಇಟ್ಟರು.  ನಂತರ ಅದನ್ನು ₹5.5 ಕೋಟಿಗೆ ಇಳಿಸಲಾಯಿತು, ಜೊತೆಗೆ ದೀರ್ಘಕಾಲದ ಜೈಲು ಶಿಕ್ಷೆ ಮತ್ತು ಸಾಮಾಜಿಕ ಮಾಧ್ಯಮ ಮಾನನಷ್ಟ ಬೆದರಿಕೆಗಳನ್ನು ಹಾಕಲಾಯಿತು. ಅರವಿಂದ್, "ಈ  ಸಂದರ್ಭದಲ್ಲಿ , ನಾನು ಸುಲಿಗೆ ಬೇಡಿಕೆಗಳ ಆಡಿಯೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದೆ" ಎಂದು ಹೇಳಿದರು.

▪️ಡಿಸೆಂಬರ್ 23 ರಂದು, ಕ್ರೈಂ ಬ್ರಾಂಚ್ ಬಲೆ ಬೀಸಿ ಹೆಮ್ಲತಾ ಮತ್ತು ಅಮ್ರಿನಾ ಅವರನ್ನು ಮೊದಲ ಕಂತಿನ ₹1.5 ಕೋಟಿ ಸಂಗ್ರಹಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. 

▪️ಆರೋಪಿ ಮಹಿಳೆಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು 3 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರ ವಿರುದ್ಧ 308(7) (ಸುಲಿಗೆ) ಮತ್ತು 61(2) (ಕ್ರಿಮಿನಲ್ ಪಿತೂರಿ) BNS ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Two women arrested for 10 crore extoration Bid in Mumbai
Advertisment