/newsfirstlive-kannada/media/media_files/2025/08/06/banking-recruitment222-2025-08-06-13-28-07.jpg)
ಬೆಂಗಳೂರು: ನೀವು ನಾಳೆ ಬ್ಯಾಂಕಿನ ಯಾವುದಾದರೂ ಪ್ರಮುಖ ಕೆಲಸಗಳಿಗಾಗಿ ಪ್ಲಾನ್ ಮಾಡಿಕೊಂಡಿದ್ದರೆ ಈ ಸುದ್ದಿ ನಿಮಗಾಗಿ. ನಾಳೆ (ಜನವರಿ 27) ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಯಾಕಾಗಿ ಈ ಮುಷ್ಕರ?
ಬ್ಯಾಂಕ್ ಕೆಲಸದ ಅವಧಿಯನ್ನು ಕಡಿತಗೊಳಿಸಬೇಕು ಎಂಬುದು ಸಿಬ್ಬಂದಿಯ ಪ್ರಮುಖ ಆಗ್ರಹವಾಗಿದೆ. ಪ್ರಸ್ತುತ ಇರುವ ವಾರದಲ್ಲಿ 6 ದಿನಗಳ ಕೆಲಸದ ಅವಧಿಯ ಬದಲಿಗೆ, ವಾರಕ್ಕೆ ಕೇವಲ '5 ದಿನಗಳ ಕೆಲಸದ ಅವಧಿ' (5-Day Work Week) ಯನ್ನು ಕಾಯಂ ಆಗಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸತತ 4 ದಿನಗಳ ಕಾಲ ಬ್ಯಾಂಕ್ ಬಂದ್!
ಈಗಾಗಲೇ ಕಳೆದ ಮೂರು ದಿನಗಳಿಂದ ಸರಣಿ ರಜೆಗಳ ಕಾರಣದಿಂದ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈಗ ನಾಳೆ (27ನೇ ತಾರೀಕು) ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ, ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಂಡಂತಾಗುತ್ತದೆ. ಇದರಿಂದಾಗಿ ಹಣಕಾಸಿನ ವ್ಯವಹಾರಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ.
ಯಾವ ಸೇವೆಗಳು ಇರಲ್ಲ?
- ಬ್ಯಾಂಕ್ ಶಾಖೆಗಳು ಮುಚ್ಚಿರುವುದರಿಂದ ಈ ಕೆಳಗಿನ ಸೇವೆಗಳಲ್ಲಿ ವ್ಯತ್ಯಯವಾಗಲಿದೆ
- ಬ್ಯಾಂಕ್ ಶಾಖೆಗಳಲ್ಲಿ ಹಣ ವಿತ್ ಡ್ರಾ (Cash Withdrawal).
- ಚೆಕ್ ಕ್ಲಿಯರೆನ್ಸ್ (Cheque Clearance) ಪ್ರಕ್ರಿಯೆ
- ಡಿಮ್ಯಾಂಡ್ ಡ್ರಾಫ್ಟ್ (DD) ಸಿದ್ಧಪಡಿಸುವುದು
- ಹೊಸ ಖಾತೆ ತೆರೆಯುವುದು ಅಥವಾ ಕೆವೈಸಿ ಅಪ್‌ಡೇಟ್
ಯಾವ ಸೇವೆಗಳು ಲಭ್ಯವಿರುತ್ತವೆ?
- ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಲಿದೆ.
- ಮೊಬೈಲ್ ಬ್ಯಾಂಕಿಂಗ್ (Mobile Banking).
- ಇಂಟರ್ನೆಟ್ ಬ್ಯಾಂಕಿಂಗ್ (Net Banking).
- ಯುಪಿಐ (UPI/PhonePe/GPay) ಪಾವತಿಗಳು.
- ಎಟಿಎಂ (ATM) ಸೇವೆಗಳು ಲಭ್ಯವಿರಲಿವೆ (ಆದರೆ ಹಣದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ).
ಬ್ಯಾಂಕ್ ವ್ಯವಹಾರಗಳಿಗಾಗಿ ಶಾಖೆಗಳಿಗೆ ಭೇಟಿ ನೀಡುವ ಮುನ್ನ ಗ್ರಾಹಕರು ಈ ಮಾಹಿತಿಯನ್ನು ಗಮನಿಸುವುದು ಉತ್ತಮ. ತುರ್ತು ಹಣಕಾಸಿನ ವರ್ಗಾವಣೆಗಾಗಿ ಡಿಜಿಟಲ್ ಮಾಧ್ಯಮಗಳನ್ನು ಬಳಸಲು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಗೋಕರ್ಣ ಹೋಗಿ ಬರುವಾಗ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣಬಿಟ್ಟ ಮೂವರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us