/newsfirstlive-kannada/media/media_files/2025/12/13/thiruvanthapura-corporation-election-results-2025-12-13-17-44-54.jpg)
ತಿರುವನಂತಪುರ ಕಾರ್ಪೋರೇಷನ್ ಚುನಾವಣೆ ಗೆದ್ದ ಬಿಜೆಪಿ!
ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುನ್ನ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಗೆ ಹಿನ್ನಡೆಯನ್ನುಂಟು ಮಾಡಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಆರು ಮುನ್ಸಿಪಾಲಿಟಿ ಪೈಕಿ ನಾಲ್ಕರಲ್ಲಿ ಮತ್ತು 14 ಜಿಲ್ಲಾ ಪಂಚಾಯತ್‌ಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತರೂಢ ಎಲ್‌ಡಿಎಫ್ ಆರು ಜಿಲ್ಲಾ ಪಂಚಾಯತ್ ನಲ್ಲಿ ಮುನ್ನಡೆ ಸಾಧಿಸಿವೆ.
ಆದಾಗ್ಯೂ ಬಿಜೆಪಿ ನೇತೃತ್ವದ ಎನ್‌ಡಿಎ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ 101 ಸದಸ್ಯರ ಕಾರ್ಪೋರೇಷನ್ ನಲ್ಲಿ 50 ಸ್ಥಾನಗಳನ್ನು ಗೆದ್ದು, ಮೊದಲ ಬಾರಿಗೆ ಅಲ್ಲಿ ಇಷ್ಟು ದೊಡ್ಡ ಜನಾದೇಶವನ್ನು ಗಳಿಸುವುದರೊಂದಿಗೆ, ಬಿಜೆಪಿ ಅತಿದೊಡ್ಡ ಮತ್ತು ಬಹುಶಃ ಅತ್ಯಂತ ಅನಿರೀಕ್ಷಿತವಾಗಿ ಹೊರಹೊಮ್ಮಿದೆ. ಬಿಜೆಪಿ ಕಳೆದ ವರ್ಷ ದಕ್ಷಿಣ ರಾಜ್ಯದಲ್ಲಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದುಕೊಂಡಿತು. ಶ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದರು. ಅಲ್ಲಿ ಒಬ್ಬ ಶಾಸಕನನ್ನು ಮಾತ್ರ ಹೊಂದಿತ್ತು.
ರಾಜಧಾನಿ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, 2009 ರಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್‌ನ ಶಶಿ ತರೂರ್ ಈ ಕ್ಷೇತ್ರವನ್ನು ಗೆದ್ದಿದ್ದಾರೆ.
ತಿರುವನಂತಪುರ ಕಾರ್ಪೋರೇಷನ್ ಅನ್ನು ಎಡಪಕ್ಷಗಳ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. 100 ಸದಸ್ಯರ ಹೊರಹೋಗುವ ಕಾರ್ಪೋರೇಷನ್ ನಲ್ಲಿ ಸಿಪಿಐ(ಎಂ) 51 ಸ್ಥಾನಗಳನ್ನು, ಬಿಜೆಪಿ ನೇತೃತ್ವದ ಎನ್‌ಡಿಎ 35 ಮತ್ತು ಯುಡಿಎಫ್ 10 ಸ್ಥಾನಗಳನ್ನು ಹೊಂದಿತ್ತು.
ಈ ಚುನಾವಣೆಗಳಲ್ಲಿ, ಈಗ 101 ಸ್ಥಾನಗಳೊಂದಿಗೆ, ಎನ್‌ಡಿಎ 50 ಸ್ಥಾನಗಳನ್ನು, ಎಲ್‌ಡಿಎಫ್ 29 ಮತ್ತು ಯುಡಿಎಫ್ 19 ಸ್ಥಾನಗಳನ್ನು ಗೆದ್ದುಕೊಂಡಿತು, ಉಳಿದ ಎರಡು ಸ್ಥಾನಗಳನ್ನು ಪಕ್ಷೇತರರು ಗೆದ್ದುಕೊಂಡಿದ್ದಾರೆ.
Thank you Thiruvananthapuram!
— Narendra Modi (@narendramodi) December 13, 2025
The mandate the BJP-NDA got in the Thiruvananthapuram Corporation is a watershed moment in Kerala’s politics.
The people are certain that the development aspirations of the state can only be addressed by our Party.
Our Party will work towards…
ತಿರುವನಂತಪುರ ಕಾರ್ಪೋರೇಷನ್ ಎಲೆಕ್ಷನ್ ನಲ್ಲಿ ಬಿಜೆಪಿ ಗೆದ್ದಿರುವುದಕ್ಕೆ ಪ್ರಧಾನಿ ಮೋದಿ, ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಥ್ಯಾಂಕ್ಯು ತಿರುವನಂತಪುರಂ ಎಂದು ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ತಿರುವನಂತಪುರ ಕಾರ್ಪೋರೇಷನ್ ನಲ್ಲಿ ಬಿಜೆಪಿ ಮತ್ತು ಎನ್‌ಡಿಎ ಗೆ ಸಿಕ್ಕಿರುವ ಜನಾದೇಶವು ಕೇರಳ ರಾಜಕೀಯದಲ್ಲಿ ಮಹತ್ವದ ಕ್ಷಣ. ರಾಜ್ಯದ ಜನರ ಅಭಿವೃದ್ದಿಯ ಮಹತ್ವಾಕಾಂಕ್ಷೆಯನ್ನು ಬಿಜೆಪಿಯಿಂದ ಮಾತ್ರ ಪೂರ್ತಿಗೊಳಿಸಲು ಸಾಧ್ಯ ನಮ್ಮ ಈ ಚಲನಶೀಲ ನಗರದ ಅಭಿವೃದ್ದಿಗಾಗಿ ಕೆಲಸ ಮಾಡಲಿದೆ. ಜನರ ಜೀವನ ಸರಳೀಕರಣಕ್ಕಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನೂ ತಿರುವನಂತಪುರ ಲೋಕಸಭಾ ಸದಸ್ಯ ಶಶಿ ತರೂರ್ ಕೂಡ ಬಿಜೆಪಿಯನ್ನು ಗೆಲುವಿಗಾಗಿ ಅಭಿನಂದಿಸಿದ್ದಾರೆ. ಬಿಜೆಪಿ ಕೂಡ ಕಾರ್ಪೋರೇಷನ್ ನಲ್ಲಿ ಬದಲಾವಣೆಗಾಗಿ ಹೋರಾಟ ಮಾಡಿತ್ತು. ಅತ್ಯಂತ ವಿನಮ್ರವಾಗಿ ಬಿಜೆಪಿಯನ್ನು ಗೆಲುವಿಗಾಗಿ ಅಭಿನಂದಿಸುತ್ತೇನೆ.ನಾನು ತಿರುವನಂತಪುರ ಕಾರ್ಪೋರೇಷನ್ ಚುನಾವಣೆಯಲ್ಲಿ 45 ದಿನಗಳ ಕಾಲ ಪ್ರಚಾರ ಮಾಡಿದ್ದೆ. ಆದರೇ, ಜನರು ಬದಲಾವಣೆಗಾಗಿ ಮತ್ತೊಂದು ಪಕ್ಷಕ್ಕೆ ಮತ ನೀಡಿದ್ದಾರೆ. ಇದು ಪ್ರಜಾಪ್ರಭುತ್ವದ ಬ್ಯೂಟಿ. ಜನಾದೇಶವನ್ನು ಗೌರವಿಸಬೇಕು ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us