Advertisment

ಕಮೋಡ್​​ನಲ್ಲಿ ಬುಸ್ ಬುಸ್ ನಾಗಪ್ಪ.. ಜಸ್ಟ್ ಮಿಸ್​! VIDEO

ಮನೆಯೊಂದರ ಕಮೋಡ್​​ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಬೃಹದಾಕಾರದ ನಾಗರಹಾವು ಸ್ನಾನಗೃಹದ ಕಮೋಡ್​​ನಲ್ಲಿ ಪ್ರತ್ಯಕ್ಷವಾಗಿದ್ರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು . ಈ ಘಟನೆ ರಾಜಸ್ಥಾನದ ಅಜ್ಮೀರ್​ನಲ್ಲಿ ನಡೆದಿದೆ.

author-image
Ganesh Kerekuli
black cobra 11
Advertisment

ರಾಜಸ್ಥಾನ:ಅಜ್ಮೀರ್​ನ ಮನೆಯೊಂದರ ಕಮೋಡ್​​ನಲ್ಲಿ ಬೃಹದಾಕಾರದ ನಾಗರ ಹಾವು ಪ್ರತ್ಯಕ್ಷವಾಗಿದೆ. ಮನೆಯ ಎರಡನೇ ಮಹಡಿಯ ಶೌಚಾಲಯದ ಕಮೋಡ್​​ನಲ್ಲಿ ಹಾವು ಪತ್ತೆಯಾಗಿದೆ. ಈ ವೇಳೆ  ಮನೆಯವರು ಆತಂಕಗೊಂಡಿದ್ದಾರೆ. 

Advertisment

black cobra

ಆಗಿದ್ದೇನು?

ಸ್ನಾನಕ್ಕೆಂದು ಬಾತ್​ರೂಂಗೆ ಹೋದಾಗ ಕಮೋಡ್​ನಲ್ಲಿ ಹಾವಿನ ಸದ್ದು ಕೇಳಿಸಿದೆ. ಈ ವೇಳೆ ಮನೆಯ ಮಾಲೀಕ ಆತಂಕಗೊಂಡು ಮನೆಯಲ್ಲಿದ್ದವರನ್ನ ಕರೆದಿದ್ದಾನೆ. ನಾಗರ ಹಾವು ಮನೆಯವರನ್ನ ನೋಡುತ್ತಿದ್ದಂತೆ ದಾಳಿಗೆ ಮುಂದಾಗಿದೆ.

ಈ ವೇಳೆ ಉರಗ ಪ್ರೇಮಿ ಸುಖದೇವ್ ಭಟ್​ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಉರಗ ಪ್ರೇಮಿ ಹಾಗೂ ವನ್ಯಜೀವಿ ಸಂರಕ್ಷಣಾ ತಂಡ 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ, ನಾಗರ ಹಾವನ್ನ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಇದನ್ನೂ ಓದಿ : ಮೈಸೂರು ದಸರಾಗೆ ಅಧಿಕೃತವಾಗಿ ಚಾಲನೆ ಕೊಟ್ಟ ಬಾನು ಮುಷ್ತಾಕ್

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ajmer Rajasthan bathroom commode black cobra
Advertisment
Advertisment
Advertisment