/newsfirstlive-kannada/media/media_files/2025/08/23/anil-ambani-house-cbi-raid-2025-08-23-17-47-55.jpg)
ಉದ್ಯಮಿ ಅನಿಲ್ ಅಂಬಾನಿಯ ಸಂಕಷ್ಟಗಳ ಸರಣಿ ಮುಂದುವರಿದಿದೆ. ಸಿಬಿಐ ಮತ್ತು ಇ.ಡಿ. ಲಂಚ ನೀಡಿ ಬ್ಯಾಂಕ್ ಗಳಿಂದ ಸಾಲ ಪಡೆದ ಆರೋಪದಡಿ ಕೇಸ್ ದಾಖಲಿಸಿದ್ದವು. ಬಳಿಕ ಇ.ಡಿ. ಆಕ್ರಮ ಹಣ ವರ್ಗಾವಣೆಯ ಆರೋಪದಡಿ ಕೇಸ್ ದಾಖಲಿಸಿತ್ತು. ಈಗ ಅನಿಲ್ ಅಂಬಾನಿ ವಾಸ ಇರುವ ಮನೆ ಸೇರಿದಂತೆ ದೇಶದ 8 ನಗರಗಳಲ್ಲಿರುವ ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಇ.ಡಿ.( ಜಾರಿ ನಿರ್ದೇಶನಾಲಯ) ಜಫ್ತಿ ಮಾಡಿದೆ. ಬರೋಬ್ಬರಿ 3,084 ಕೋಟಿ ರೂಪಾಯಿ ಮೌಲ್ಯದ ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಇ.ಡಿ. ಜಫ್ತಿ ಮಾಡಿದೆ.
ಮುಂಬೈನ ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ಬಂಗಲೆಯಲ್ಲಿ ಅನಿಲ್ ಅಂಬಾನಿ, ಪತ್ನಿ ಮತ್ತು ಮಕ್ಕಳು ವಾಸ ಇದ್ದಾರೆ. ಈ ಮನೆಯನ್ನು ಈಗ ಇ.ಡಿ. ತಾತ್ಕಾಲಿಕವಾಗಿ ಜಫ್ತಿ ಮಾಡಿದೆ. ದೆಹಲಿಯಲ್ಲಿರುವ ರಿಲಯನ್ಸ್ ಸೆಂಟರ್ ಅನ್ನು ಜಫ್ತಿ ಮಾಡಲಾಗಿದೆ.
ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗಲ್ಲಿರುವ ಅನಿಲ್ ಅಂಬಾನಿ ಮಾಲೀಕತ್ವದ ಆಸ್ತಿಪಾಸ್ತಿಗಳನ್ನು ಇ.ಡಿ.( ಜಾರಿ ನಿರ್ದೇಶನಾಲಯ) ತನ್ನ ತನಿಖೆಯ ಭಾಗವಾಗಿ ಜಫ್ತಿ ಮಾಡಿದೆ. ಅಕ್ಟೋಬರ್ 31 ರಂದು ಇ.ಡಿ. ಟ್ರಿಬ್ಯುನಲ್ ಹೊರಡಿಸಿದ ಆದೇಶದ ಪ್ರಕಾರ, ಈ ಆಸ್ತಿಗಳನ್ನು ಜಫ್ತಿ ಮಾಡಲಾಗಿದೆ.
/filters:format(webp)/newsfirstlive-kannada/media/media_files/2025/11/03/anil-ambani-pali-hill-house-2025-11-03-12-56-34.jpg)
ಮುಂಬೈನ ಬಾಂದ್ರಾದ ಪಾಲಿ ಹಿಲ್ಸ್ ನಲ್ಲಿರುವ ಅನಿಲ್ ಅಂಬಾನಿ ನಿವಾಸ ಜಫ್ತಿ!
ಬೇರೆ ಬೇರೆ ನಗರಗಳಲ್ಲಿ ಅನಿಲ್ ಅಂಬಾನಿ ಮಾಲೀಕತ್ವದ ವಸತಿ , ಕಚೇರಿ ಕಟ್ಟಡಗಳಿವೆ. ಜೊತೆಗೆ ಆಂಧ್ರದಲ್ಲಿ ಭೂಮಿ ಕೂಡ ಇದೆ. ಆಕ್ರಮ ಹಣ ವರ್ಗಾವಣೆಯ ಕೇಸ್ ನ ತನಿಖೆ ಭಾಗವಾಗಿ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡಲಾಗಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಗಳ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಿ ಈ ಆಸ್ತಿಪಾಸ್ತಿ ಖರೀದಿಸಲಾಗಿದೆ ಎಂದು ಇ.ಡಿ. ಹೇಳಿದೆ. 2017-19ರ ಅವಧಿಯಲ್ಲಿ ಯೆಸ್ ಬ್ಯಾಂಕ್, 2,965 ಕೋಟಿ ರೂಪಾಯಿ ಹಣವನ್ನು ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿತ್ತು. ಇನ್ನೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಯೆಸ್ ಬ್ಯಾಂಕ್, 2045 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿತ್ತು.
ಆದರೇ, ಈ ಹೂಡಿಗಳು ಅನುತ್ಪಾದಕ ಆಸ್ತಿಗಳಾಗಿದ್ದವು. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ , ಯೆಸ್ ಬ್ಯಾಂಕ್ ಗೆ 1,353 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡುವುದು ಬಾಕಿ ಇದೆ. ಇನ್ನೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ಯೆಸ್ ಬ್ಯಾಂಕ್ ಗೆ 1,984 ಕೋಟಿ ರೂಪಾಯಿ ಮರುಪಾವತಿ ಮಾಡುವುದು ಬಾಕಿ ಇದೆ.
/filters:format(webp)/newsfirstlive-kannada/media/media_files/2025/11/03/anil-ambani-pali-hill-house-1-2025-11-03-13-02-14.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us