/newsfirstlive-kannada/media/media_files/2025/11/21/jaipura-school-student-suicide-2025-11-21-13-12-24.jpg)
ಜೈಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಾಲಾ ವಿದ್ಯಾರ್ಥಿನಿ!
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ 4 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತನ್ನ ತರಗತಿಯ ಶಿಕ್ಷಕಿಯನ್ನು ಸಂಪರ್ಕಿಸಿ ಐದು ಭಾರಿ ಬೆಂಬಲ ಕೋರಿದ್ದಳು. 45 ನಿಮಿಷಗಳ ಕಾಲ ಶಿಕ್ಷಕಿ ಜೊತೆ ಮಾತುಕತೆ ನಡೆಸಿದ್ದಳು. ಆದರೇ, ಆ ಶಿಕ್ಷಕಿ, ವಿದ್ಯಾರ್ಥಿನಿಗೆ ಯಾವುದೇ ಸಹಾಯ ನೀಡಲಿಲ್ಲ. ಇದರಿಂದ ನೊಂದ ವಿದ್ಯಾರ್ಥಿನಿ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಒಂಬತ್ತು ವರ್ಷದ ಬಾಲಕಿಯನ್ನು ಬೆಂಬಲಿಸುವ ಅಥವಾ ಸಹಾಯ ಮಾಡುವ ಬದಲು, ಶಿಕ್ಷಕಿ ಆಕೆಯ ಮೇಲೆ ಹಲವು ಬಾರಿ ಕೂಗಾಡಿದ್ದು 'ಇಡೀ ತರಗತಿಯನ್ನು ಆಘಾತಗೊಳಿಸುವ' ವಿಷಯಗಳನ್ನು ಹೇಳಿದಳು. 18 ತಿಂಗಳಿನಿಂದ ಕಿರುಕುಳಕ್ಕೊಳಗಾಗಿದ್ದ ಅಪ್ರಾಪ್ತ ವಯಸ್ಕಳು ಮೂಲೆಗುಂಪಾಗಿದ್ದಾಳೆಂದು ಭಾವಿಸಿದಳು.
ನವೆಂಬರ್ 1 ರಂದು ನೀರ್ಜಾ ಮೋದಿ ಶಾಲೆಯಲ್ಲಿ ನಡೆದ ಅಮೈರಾ ಕುಮಾರ್ ಮೀನಾ ಎಂಬ ಬಾಲಕಿಯ ಆತ್ಮಹತ್ಯೆಯ ತನಿಖೆ ನಡೆಸುತ್ತಿರುವ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಇಬ್ಬರು ಸದಸ್ಯರ ತಂಡವು ಮಾಡಿದ ತೀರ್ಮಾನಗಳಲ್ಲಿ ಇವು ಸೇರಿವೆ. ಆಕೆಯ ಪೋಷಕರು ಆಕೆಯನ್ನು "ಲೈಂಗಿಕ ಅರ್ಥಗಳೊಂದಿಗೆ" ಬೆದರಿಸಲಾಯಿತು, ಕೀಟಲೆ ಮಾಡಲಾಯಿತು ಮತ್ತು ಮೌಖಿಕವಾಗಿ ನಿಂದಿಸಲಾಯಿತು . ಪದೇ ಪದೇ ದೂರುಗಳನ್ನು ಶಾಲಾ ಅಧಿಕಾರಿಗಳು ಪರಿಹರಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಸಿಬಿಎಸ್‌ಇ ತನ್ನ ವರದಿಯಲ್ಲಿ, ಅಮೈರಾಳನ್ನು 18 ತಿಂಗಳ ಕಾಲ ಬೆದರಿಸಲಾಯಿತು. "ಕೆಟ್ಟ ಪದಗಳನ್ನು" ಬಳಸಲಾಯಿತು ಎಂದು ಹೇಳಿದೆ . ಆದರೆ ತರಗತಿ ಶಿಕ್ಷಕಿ ಪುನೀತಾ ಶರ್ಮಾ ಈ ವಿಷಯದ ಬಗ್ಗೆ ಆಕೆಯ ಮತ್ತು ಆಕೆಯ ಪೋಷಕರ ದೂರುಗಳನ್ನು ಪದೇ ಪದೇ ನಿರ್ಲಕ್ಷಿಸಿದ್ದಾರೆ.
ಹೀಗಾಗಿ ಶಾಲೆಗೆ ನಿಯಮ ಉಲಂಘನೆ ಬಗ್ಗೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಸಿಬಿಎಸ್‌ಇ ನೋಟೀಸ್ ನೀಡಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us