/newsfirstlive-kannada/media/media_files/2025/12/06/fare-cap-on-airfares-by-center-2025-12-06-18-12-22.jpg)
ವಿಮಾನ ಟಿಕೆಟ್ ಗಳ ಮೇಲೆ ಗರಿಷ್ಠ ಮಿತಿ ವಿಧಿಸಿದ ಕೇಂದ್ರ ಸರ್ಕಾರ
ದೇಶೀಯ ವಿಮಾನ ದರಗಳ ಮೇಲೆ ಕೇಂದ್ರ ಸರ್ಕಾರ ಮಿತಿ ವಿಧಿಸಿದೆ, ಇಂದಿನಿಂದ ನಿಯಮಗಳು ಜಾರಿಗೆ ಬಂದಿವೆ.
ಇಂಡಿಗೋ ಬಿಕ್ಕಟ್ಟು ಮತ್ತು ವಿಮಾನ ದರಗಳು ಹೆಚ್ಚುತ್ತಿರುವ ಮಧ್ಯೆ, ಸರ್ಕಾರವು ದೇಶೀಯ ವಿಮಾನ ದರಗಳಿಗೆ ಮಿತಿ ವಿಧಿಸಿದೆ. ಈ ನಿಯಮವು ತಕ್ಷಣದಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 6, 2025 ರಿಂದ ಜಾರಿಗೆ ಬರಲಿದೆ. ಹೊಸ ವಿಮಾನ ಟಿಕೆಟ್ ದರಗಳು ಈ ಕೆಳಗಿನಂತಿವೆ.
ದೂರ (ಕಿ.ಮೀ) ಗರಿಷ್ಠ ದರ
0–500 ಕಿ.ಮೀ ₹7,500
500–1000 ಕಿ.ಮೀ ₹12,000
1000–1500 ಕಿ.ಮೀ ₹15,000
1500 ಕಿ.ಮೀ ಗಿಂತ ಹೆಚ್ಚು ₹18,000
ಈ ಬೆಲೆಯು UDF, PSF ಮತ್ತು ತೆರಿಗೆಗಳನ್ನು ಒಳಗೊಂಡಿಲ್ಲ. ಈ ಮಿತಿಯು ವ್ಯಾಪಾರ ವರ್ಗ ಮತ್ತು UDAN ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೆಂಗಳೂರು - ದೆಹಲಿಯ ವಿಮಾನ ಟಿಕೆಟ್ ದರ ಕನಿಷ್ಠ 22 ಸಾವಿರ ರೂಪಾಯಿಯಿಂದ 39 ಸಾವಿರ ರೂಪಾಯಿಯವರೆಗೂ ಏರಿಕೆಯಾಗಿತ್ತು. ದೆಹಲಿ- ಚೆನ್ಮೈ ಮಾರ್ಗದ ಏರ್ ಟಿಕೆಟ್ ದರ 65 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು.
ಇಂಡಿಗೋ ವಿಮಾನ ರದ್ದಾದ ಬಳಿಕ ವಿಮಾನ ಪ್ರಯಾಣಿಕರು ಬೇರೆ ಏರ್ ಲೈನ್ಸ್ ಗಳು ಸಿಕ್ಕಾಪಟ್ಟೆ ಏರ್ ಟಿಕೆಟ್ ದರ ಏರಿಸಿದ್ದವು. ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಎಲ್ಲ ಏರ್ ಲೈನ್ಸ್ ಗಳಿಗೆ ಇಂದಿನಿಂದಲೇ ಅನ್ವಯವಾಗುವಂತೆ ಗರಿಷ್ಠ ಟಿಕೆಟ್ ದರ ನಿಗದಿಪಡಿಸಿದೆ.
ಇನ್ನೂ ಇಂಡಿಗೋ ಕೂಡ ರದ್ದಾದ ವಿಮಾನಗಳ ಟಿಕೆಟ್ ಹಣವನ್ನು ಸೋಮವಾರವೇ ಪ್ರಯಾಣಿಕರಿಗೆ ವಾಪಸ್ ನೀಡಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ.
ಇಂಡಿಗೋ ವಿದೇಶಿ ಸಿಇಓ ಎತ್ತಂಗಡಿಗೆ ಕೇಂದ್ರದ ವಾರ್ನಿಂಗ್ : ಚಾಟಿ ಬೀಸಲು ಕೇಂದ್ರ ರೆಡಿ
ಇಂಡಿಗೋ ಏರ್ ಲೈನ್ಸ್ ಸಿಇಓ ಆಗಿ ಸದ್ಯ ವಿದೇಶಿ ಸಿಇಓ ಕಾರ್ಯನಿರ್ವಹಿಸುತ್ತಿದ್ದಾರೆ. ಪೀಟರ್ ಎಲ್ಬರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಇಓ ಪೀಟರ್ ಎಲ್ಬರ್ಸ್ ನಿರ್ಲಕ್ಷ್ಯ , ಬೇಜವಾಬ್ದಾರಿತನ, ಸರಿಯಾದ ಪ್ಲ್ಯಾನಿಂಗ್ ಇಲ್ಲದೇ ಇರುವುದರಿಂದ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದಾಗಲೇ ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿ ದೊಡ್ಡ ಸುದ್ದಿಯಾಗಿದೆ. ಇದು ಕೇಂದ್ರ ಸರ್ಕಾರಕ್ಕೂ ಮುಜುಗರ ತಂದಿದೆ. ಹೀಗಾಗಿ ಕೇಂದ್ರ ಸರ್ಕಾರ, ಪ್ರಧಾನಿ ಕಾರ್ಯಾಲಯವು ಸಿಇಓ ಪೀಟರ್ ಎಲ್ಬರ್ಸ್ ವಿರುದ್ಧ ಸಿಟ್ಟಾಗಿದೆ. ಸಿಇಓ ಹುದ್ದೆಯಿಂದ ಪೀಟರ್ ಎಲ್ಬರ್ಸ್ ತೆಗೆದು ಹಾಕಬೇಕೆಂದು ಇಂಡಿಗೋ ಕಂಪನಿಗೆ ಕೇಂದ್ರ ಸರ್ಕಾರ ಮೌಖಿಕ ಸೂಚನೆ ನೀಡುವ ನೀರೀಕ್ಷೆ ಇದೆ. ಜೊತೆಗೆ ಇಂಡಿಗೋ ಕಂಪನಿಯ ಮೇಲೆ ಭಾರಿ ದಂಡ ವಿಧಿಸುವ ಸಾಧ್ಯತೆಯೂ ಇದೆ.
/filters:format(webp)/newsfirstlive-kannada/media/media_files/2025/12/05/indigo-ceo-peter-elbers-1-2025-12-05-18-51-05.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us